
ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು ಹಾಗೂ ಬಾಲಿವುಡ್ನ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಒಂದರ ಹಿಂದೆ ಒಂದರಂತೆ ಸತತವಾಗಿ ಮೂರು ಅಲ್ಟ್ರಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ರಶ್ಮಿಕಾ ಮಂದಣ್ಣ ನೀಡಿದ್ದಾರೆ. ಅವರು ನಟಿಸಿರುವ ‘ಪುಷ್ಪ 2’, ‘ಅನಿಮಲ್’ ಮತ್ತು ‘ಛಾವಾ’ ಸಿನಿಮಾಗಳು ಒಂದರ ಬಳಿಕ ಒಂದು ಬಿಡುಗಡೆ 1000 ಕೋಟಿಗೂ ಹೆಚ್ಚು ಹಣವನ್ನು ಗಳಿಕೆ ಮಾಡಿವೆ. ಅದರ ಬಳಿಕ ರಶ್ಮಿಕಾ ನಟಿಸಿದ್ದ ‘ಕುಬೇರ’ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಹಿಟ್ ಆಯ್ತು. ರಶ್ಮಿಕಾ ಈಗ ಬಾಲಿವುಡ್ನ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಹಿಂದಿ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಸಹ ಘೋಷಣೆ ಆಗಿದೆ. ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಒಂದರಲ್ಲಿ ನಟಿಸಿದ್ದು, ಸಿನಿಮಾದ ಹೆಸರು ‘ಥಮ’. ಆಯುಷ್ಮಾನ್ ಖುರಾನಾ ನಾಯಕನಾಗಿ ನಟಿಸಿರುವ ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಮತ್ತು ಖ್ಯಾತ ನಟ ನವಾಜುದ್ಧೀನ್ ಸಿದ್ಧಿಖಿ ವಿಲನ್ ಆಗಿ ನಟಿಸಿದ್ದಾರೆ.
ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಹಾರರ್ ಕಾಮಿಡಿ ಆಗಿದ್ದು ಇದರ ಜೊತೆಗೆ ಪ್ರೇಮಕತೆಯೂ ಇದೆ. ರಶ್ಮಿಕಾ ಮಂದಣ್ಣ ಸಾವಿರಾರು ವರ್ಷಗಳ ಹಿಂದೆ ನಿಧನ ಹೊಂದಿ ಈಗ ಪ್ರೇತವಾಗಿದ್ದಾರೆ, ಅದರಂತೆ ನವಾಜುದ್ಧೀನ್ ಸಿದ್ಧಿಖಿ ಸಹ ಸಾವಿರಾರು ವರ್ಷಗಳ ಹಿಂದೆ ನಿಧನವಾಗಿದ್ದು ಎಲ್ಲೋ ಗುಹೆಯಲ್ಲಿ ಬಂಧಿಯಾಗಿರುತ್ತಾರೆ. ಆಯುಷ್ಮಾನ್ ಖುರಾನಾ ಇಂದಾಗಿ ಇಬ್ಬರಿಗೂ ಬಿಡುಗಡೆ ಸಿಗುತ್ತದೆ. ಆದರೆ ಆಯುಷ್ಮಾನ್ ಖುರಾನಾ ಸಹ ದೆವ್ವವಾಗಿ ಬದಲಾಗುತ್ತಾರೆ. ಇದು ಕತೆ. ಸಿನಿಮಾನಲ್ಲಿ ಆಕ್ಷನ್, ಹಾರರ್ ಜೊತೆಗೆ ಒಳ್ಳೆಯ ಕಾಮಿಡಿ ಸಹ ಇರುವುದು ಟ್ರೈಲರ್ನಿಂದ ಗೊತ್ತಾಗುತ್ತಿದೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ಬಿಡುಗಡೆ ದಿನಾಂಕ ನಿಗದಿ
ರಶ್ಮಿಕಾ ಮಂದಣ್ಣ, ‘ಥಮ’ ಸಿನಿಮಾನಲ್ಲಿ ಅಲ್ಲಲ್ಲಿ ತುಸು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಯುಷ್ಮಾನ್ ಖುರಾನಾ ಜೊತೆಗೆ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್ ಉಡುಗೆಗಳನ್ನು ಧರಿಸಿದ್ದಾರೆ. ಸಿನಿಮಾನಲ್ಲಿ ಮಲೈಕಾ ಅರೋರಾ ಹಾಗೂ ನೋರಾ ಫತೇಹಿಯ ಹಾಟ್ ಹಾಡುಗಳು ಸಹ ಇವೆ. ಸಿನಿಮಾವನ್ನು ಆದಿತ್ಯ ಸರ್ಪೋಟ್ದಾರ್ ನಿರ್ದೇಶನ ಮಾಡಿದ್ದಾರೆ. ಹಾರರ್ ಸಿನಿಮಾಗಳನ್ನೇ ನಿರ್ಮಿಸುತ್ತಾ ಬರುತ್ತಿರುವ ಮ್ಯಾಡಾಕ್ ಸಂಸ್ಥೆ ಈ ಸಿನಿಮಾದ ನಿರ್ಮಾಣ ಮಾಡಿದೆ. ಸಿನಿಮಾ ಅಕ್ಟೋಬರ್ 21ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Sat, 27 September 25