ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಅವರು ಸಿನಿಮಾ ಕೆಲಸಗಳ ನಡುವೆ ಕುಟುಂಬಕ್ಕೆ ಹೆಚ್ಚು ಸಮಯ ಮೀಸಲಿಡುತ್ತಾರೆ. ಕುಟುಂಬದ ಸದಸ್ಯರ ಪ್ರತಿ ಗೆಲುವನ್ನು ಅವರು ಸಂಭ್ರಮಿಸುತ್ತಾರೆ. ಈಗ ಅವರ ಪುತ್ರಿ ರಾಶಾ ತಡಾನಿ (Rasha Tadani) ಪದವಿ ಶಿಕ್ಷಣ ಪೂರೈಸಿದ್ದಾರೆ. ಈ ಖುಷಿಗೆ ರವೀನಾ ಟಂಡನ್ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿಕ್ಕವಳಾಗಿದ್ದ ಮಗಳು ಈಗ ಪದವಿಧರೆ ಆಗುವ ಮಟ್ಟಕ್ಕೆ ಬೆಳೆದು ನಿಂತಿರುವುದನ್ನು ರವೀನಾ ಟಂಡನ್ ಅವರು ಬೆರಗಿನಿಂದ ನೋಡುತ್ತಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ. ಪದವಿ (Graduation) ಪಡೆದ ರಾಶಾ ತಡಾನಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.
ರವೀನಾ ಟಂಡನ್ ಅವರು 1995ರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. 2004ರಲ್ಲಿ ಅನಿಲ್ ತಡಾನಿ ಜೊತೆ ರವೀನಾ ಮದುವೆ ಆದರು. ಈ ದಂಪತಿಗೆ 2005ರಲ್ಲಿ ರಾಶಾ ಜನಿಸಿದರು. ಈಗ ರಾಶಾಗೆ 18 ವರ್ಷ ವಯಸ್ಸು. ಇತ್ತೀಚೆಗೆ ಮಾಧುರಿ ದೀಕ್ಷಿತ್ ಅವರ ಮಗ ರಿಯಾನ್ ನೆನೆ ಕೂಡ ಪದವಿ ಪಡೆದರು. ಅಲ್ಲದೇ, ಜೂಹೀ ಚಾವ್ಲಾ ಅವರ ಪುತ್ರಿ ಜಾನ್ವಿ ಕೂಡ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಗ್ರ್ಯಾಜುಯೇಟ್ ಆದರು.
1991ರಲ್ಲಿ ತೆರೆಗೆ ಬಂದ ‘ಪತ್ತರ್ ಕೆ ಫೂಲ್’ ಚಿತ್ರ ರವೀನಾ ಅವರ ಮೊದಲ ಸಿನಿಮಾ. 30 ವರ್ಷಗಳ ಕಾಲ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಆರಂಭದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದರು. ಸ್ಟುಡಿಯೋ ನೆಲವನ್ನು ಅವರು ಸ್ವಚ್ಛ ಮಾಡುತ್ತಿದ್ದರು. ಅವರು ಪಟ್ಟ ಕಷ್ಟಗಳು ಹಲವು. ಈ ಬಗ್ಗೆ ರವೀನಾ ಅವರು ಮಾಹಿತಿ ಹಂಚಿಕೊಂಡಿದ್ದರು. ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ ರವೀನಾ ಈ ವಿಚಾರವನ್ನು ಹೇಳಿಕೊಂಡಿದ್ದರು.
ಇದನ್ನೂ ಓದಿ: ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದಾಗ ರವೀನಾ ಟಂಡನ್ಗೆ ಎದುರಾದ ಕಷ್ಟಗಳು ಒಂದೆರಡಲ್ಲ
‘ನಾನು ಸ್ಟುಡಿಯೋ ಫ್ಲೋರ್‌ಗಳನ್ನು ಶುಚಿಗೊಳಿಸುವುದರಿಂದ ಹಿಡಿದು, ಅಲ್ಲಿ ವಾಂತಿಯನ್ನು ಒರೆಸುವವರೆಗೆ ಎಲ್ಲಾ ಕೆಲಸವನ್ನು ಮಾಡಿದ್ದೇನೆ. ಪ್ರಹ್ಲಾದ್ ಕಕ್ಕರ್ಗೆ ಸಹಾಯಕಳಾಗಿ ಇದ್ದೆ. ನಾನು ಒಂದಿಲ್ಲೊಂದು ವಿಚಾರದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ದೆ. ನಾನು ನಟಿ ಆಗುತ್ತೇನೆ ಎಂದು ಯೋಚಿಸುತ್ತಲೇ ಬೆಳೆದವಳು ಅಲ್ಲ’ ಎಂದಿದ್ದರ ರವೀನಾ ಟಂಡನ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.