ಒಟ್ಟಿಗೆ ಹೆಜ್ಜೆ ಹಾಕಿ ಹಳೆಯ ದಿನಗಳ ನೆನಪಿಸಿದ ಕರಿಶ್ಮಾ-ಮಾಧುರಿ ದೀಕ್ಷಿತ್: ಈ ಬಾರಿ ಗೆದ್ದಿದ್ದು ಯಾರು?

Karisma-Madhuri: ದಿಲ್ ತೋ ಪಾಗಲ್ ಹೇ ಸಿನಿಮಾದಲ್ಲಿ ಪರಸ್ಪರ ಹೊಟ್ಟೆಕಿಚ್ಚಿನಿಂದ ಕುಣಿದಿದ್ದ ಮಾಧುರಿ ದೀಕ್ಷಿತ್ ಹಾಗೂ ಕರಿಶ್ಮಾ ಕಪೂರ್ ಈಗ ಮತ್ತೆ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ.

ಒಟ್ಟಿಗೆ ಹೆಜ್ಜೆ ಹಾಕಿ ಹಳೆಯ ದಿನಗಳ ನೆನಪಿಸಿದ ಕರಿಶ್ಮಾ-ಮಾಧುರಿ ದೀಕ್ಷಿತ್: ಈ ಬಾರಿ ಗೆದ್ದಿದ್ದು ಯಾರು?
ಮಾಧುರಿ ದೀಕ್ಷಿತ್-ಕರಿಶ್ಮಾ ಕಪೂರ್
Follow us
ಮಂಜುನಾಥ ಸಿ.
|

Updated on:May 31, 2023 | 5:30 PM

ಹಿಂದಿ ಸಿನಿಮಾ (Bollywood) ಪ್ರೇಮಿಗಳಿಗೆ ಕರಿಶ್ಮಾ ಕಪೂರ್ (Karisma Kapoor) ಹಾಗೂ ಮಾಧುರಿ ದೀಕ್ಷಿತ್​ರ (Madhuri Dixit) ‘ಡ್ಯಾನ್ಸ್ ಫೈಟ್’​ ಬಗ್ಗೆ ಗೊತ್ತೇ ಇರುತ್ತದೆ. ‘ದಿಲ್ ತೊ ಪಾಗಲ್ ಹೇ’ ಸಿನಿಮಾದಲ್ಲಿ ಕರಿಶ್ಮಾ ಕಪೂರ್, ಮಾಧುರಿ ದೀಕ್ಷಿತ್ ಮೇಲೆ ಸವಾಲು ಹಾಕಿ ಇಬ್ಬರೂ ಒಟ್ಟಿಗೆ ಮಾಡುವ ‘ಡ್ಯಾನ್ಸ್ ಫೈಟ್’ ಪ್ರೇಕಕರ ಹೃದಯ ಗೆದ್ದಿತ್ತು. ಇಬ್ಬರೂ ಅದ್ಭುತ ಡ್ಯಾನ್ಸರ್​ಗಳು ಒಂದೇ ರೀತಿಯ ಸಂಗೀತಕ್ಕೆ ಎರಡು ಭಿನ್ನ ಮಾದರಿಯ ನೃತ್ಯವನ್ನು ಪ್ರದರ್ಶಿಸಿದ್ದರು. ಆ ಸಿನಿಮಾದ ಅತ್ಯುತ್ತಮ ದೃಶ್ಯಗಳಲ್ಲಿ ಈ ‘ಡ್ಯಾನ್ಸ್ ಫೈಟ್’ ಸಹ ಒಂದು. ಇದೀಗ ದಶಕಗಳ ಬಳಿಕ ಮಾಧುರಿ ಹಾಗೂ ಕರಿಶ್ಮಾ ಕಪೂರ್ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ ಆದರೆ ವಿರೋಧಿಗಳಾಗಿ ಅಲ್ಲ, ಗೆಳತಿಯರಾಗಿ.

ಖಾಸಗಿ ಪಾರ್ಟಿಯೊಂದರಲ್ಲಿ ನಟಿ ಕರಿಶ್ಮಾ ಕಪೂರ್ ಹಾಗೂ ಮಾಧುರಿ ದೀಕ್ಷಿತ್ ಹಾಡೊಂದಕ್ಕೆ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಯಾವುದೇ ಕೋರಿಯೊಗ್ರಾಫರ್​ಗಳಿಲ್ಲದೆ ತಮಗೆ ತೋಚಿದಂತೆ ಇಬ್ಬರೂ ಗೆಳತಿಯರು ಕುಣಿದಿದ್ದಾರೆ. ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಕೆಲವು ಚಿತ್ರಗಳೊಟ್ಟಿಗೆ ನಟಿ ಕರಿಶ್ಮಾ ಕಪೂರ್ ಹಂಚಿಕೊಂಡಿದ್ದಾರೆ. ಜೊತೆಗೆ ಇದು ಹೊಟ್ಟೆಕಿಚ್ಚಿನ ನೃತ್ಯ ಎಂದು ಕ್ಯಾಪ್ಷನ್ ಬರೆದು ಹೊಟ್ಟೆಕಿಚ್ಚು ಪದಕ್ಕೆ ಕಾಟು ಹೊಡೆದು ಅದರ ಬದಲಿಗೆ ‘ಗೆಳೆತನ’ ಎಂದು ಬರೆದಿದ್ದಾರೆ.

‘ದಿಲ್ ತೋ ಪಾಗಲ್ ಹೇ’ ಸಿನಿಮಾದಲ್ಲಿ ಕರಿಶ್ಮಾ ಕಪೂರ್ ಪಾತ್ರಕ್ಕೆ ಮಾಧುರಿ ಪಾತ್ರದ ಮೇಲೆ ವಿಪರೀತ ಹೊಟ್ಟೆಕಿಚ್ಚಿರುತ್ತದೆ. ಅದೇ ಕಾರಣದಿಂದ ಮಾಧುರಿ ವಿರುದ್ಧ ‘ಡ್ಯಾನ್ಸ್ ಫೈಟ್’ ನಲ್ಲಿ ಪಾಲ್ಗೊಳ್ಳುತ್ತಾರೆ ಕರಿಶ್ಮಾ. ಇಬ್ಬರೂ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ ಕೊನೆಗೆ ಕರಿಶ್ಮಾ ತಾಳ ತಪ್ಪಿ ಸೋಲೊಪ್ಪಿಕೊಂಡರೆ ಮಾಧುರಿ ಅದ್ಭುತವಾಗಿ ಕುಣಿದು ಗೆಲ್ಲುತ್ತಾರೆ. ಇದನ್ನೇ ಕರಿಶ್ಮಾ ಹೊಟ್ಟೆಕಿಚ್ಚಿನ ಡ್ಯಾನ್ಸ್ ಎಂದು ಕ್ಯಾಪ್ಷನ್​ನಲ್ಲಿ ಕರೆದಿದ್ದಾರೆ. ಆದರೆ ಈಗಿನದ್ದು ಕೇವಲ ಗೆಳೆತನದ ಡ್ಯಾನ್ಸ್ ಎಂದಿದ್ದಾರೆ.

ಇದನ್ನೂ ಓದಿ:ನಟಿ ಮಾಧುರಿ ದೀಕ್ಷಿತ್ ಒಟ್ಟೂ ಆಸ್ತಿ ಮೌಲ್ಯ ಇಷ್ಟೊಂದಾ? ಇಲ್ಲಿದೆ ವಿವರ

ಕರಿಶ್ಮಾ ಕಪೂರ್ ಹಾಗೂ ಮಾಧುರಿ ದೀಕ್ಷಿತ್ ಬಹುತೇಕ ಒಂದೇ ಕಾಲಘಟ್ಟದ ನಟಿಯರು. ಬಾಲಿವುಡ್​ನ ಟಾಪ್ ನಟಿಯರಾಗಿ ಹೆಸರು ಮಾಡಿದವರು. ಇಬ್ಬರೂ ವೃತ್ತಿಯ ಉತ್ತುಂಗದಲ್ಲಿದ್ದಾಗ ಪರಸ್ಪರರ ಬಗ್ಗೆ ವೃತ್ತಿ ಮತ್ಸರ, ಅಸೂಯೆಗಳನ್ನು ಹೊಂದಿದ್ದರು. ಪೈಪೋಟಿಯ ಮೇಲೆ ಸಿನಿಮಾಗಳನ್ನು ಮಾಡುತ್ತಿದ್ದರು. ಇವರಿಬ್ಬರ ವೈರತ್ವದ ಬಗ್ಗೆ ಬಾಲಿವುಡ್​ನಲ್ಲಿ ಆ ಕಾಲದಲ್ಲಿ ಕೆಲವು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈಗ ಹಳೆಯ ವೈಷಮ್ಯ ಮರೆತು ಇಬ್ಬರೂ ಗೆಳತಿಯರಾಗಿದ್ದಾರೆ.

1991ರಲ್ಲಿ ನಟನೆ ಆರಂಭಿಸಿದ ಕರಿಶ್ಮಾ ಕಪೂರ್ ಸುಮರು ಎರಡು ದಶಕಗಳ ಕಾಲ ಬಾಲಿವುಡ್​ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. ಬಾಲಿವುಡ್​ನ ಎಲ್ಲ ಸ್ಟಾರ್ ನಟರೊಟ್ಟಿಗೆ ಒಂದಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ. ಇನ್ನು ಮಾಧುರಿ ದೀಕ್ಷಿತ್, ಕರಿಶ್ಮಾರಿಗಿಂತ ತುಸು ಹಿರಿಯರು. 1984 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಮಾಧುರಿ ಸಹ ಸುಮಾರು ಮೂರು ದಶಕಗಳ ಕಾಲ ಬಾಲಿವುಡ್​ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. 2000 ದಶಕದ ಬಳಿಕ ಇಬ್ಬರೂ ಚಿತ್ರರಂಗದಿಂದ ತುಸು ದೂರಾಗಿದ್ದರು ಈಗ ಮತ್ತೆ ಚಿತ್ರರಂಗಕ್ಕೆ ಬಂದಿದ್ದು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Wed, 31 May 23

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ