ರವೀನಾ ತಿಗಣೆ ಔಷಧಿ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಬಗ್ಗೆ ಆಗಿತ್ತು ವರದಿ; ಅಸಲಿಗೆ ನಡೆದಿದ್ದು ಏನು?

| Updated By: ರಾಜೇಶ್ ದುಗ್ಗುಮನೆ

Updated on: Apr 01, 2024 | 8:02 AM

1998ರಲ್ಲಿ ರಿಲೀಸ್ ಆದ ‘ಬಡೇ ಮಿತಾ ಚೋಟೆ ಮಿಯಾ’ ಸಿನಿಮಾದ ಶೂಟಿಂಗ್ ವೇಳೆ ರವೀನಾಗೆ ಅನಾರೋಗ್ಯ ಉಂಟಾಗಿತ್ತಂತೆ. ಇದಕ್ಕಾಗಿ 20 ದಿನ ಆಸ್ಪತ್ರೆಯಲ್ಲಿ ಇದ್ದರು. 

ರವೀನಾ ತಿಗಣೆ ಔಷಧಿ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಬಗ್ಗೆ ಆಗಿತ್ತು ವರದಿ; ಅಸಲಿಗೆ ನಡೆದಿದ್ದು ಏನು?
ರವೀನಾ
Follow us on

ಸದ್ಯ ಡಿಜಿಟಲ್ ಯುಗದಲ್ಲಿ ಫೇಕ್ ಸುದ್ದಿಗಳು ಸಾಕಷ್ಟು ಹುಟ್ಟಿಕೊಳ್ಳುತ್ತಿವೆ. ಕಾಡ್ಗಿಚ್ಚಿನಂತೆ ಅವು ಹಬ್ಬುತ್ತವೆ. ಇದು ಸೆಲೆಬ್ರಿಟಿಗಳಿಗೆ ಇಂದು ನಿನ್ನೆಯ ಸಮಸ್ಯೆ ಅಲ್ಲ. ಡಿಜಿಟಲ್ ಯುಗಕ್ಕೂ ಮೊದಲು ಸೆಲೆಬ್ರಿಟಿಗಳು ಈ ವಿಚಾರದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ ಉದಾಹರಣೆ ಇದೆ. ಹಲವು ಚಿತ್ರರಂಗಗಳಲ್ಲಿ ಮಿಂಚಿರುವ ನಟಿ ರವೀನಾ ಟಂಡನ್ (Raveena Tandon) ಅವರಿಗೂ ಈ ವಿಚಾರದಲ್ಲಿ ತೊಂದರೆ ಆಗಿತ್ತು. ಅವರ ಘನತೆಯನ್ನು ಹಾಳುವ ಮಾಡುವ ರೀತಿಯಲ್ಲಿ ಸುದ್ದಿ ಬರೆಯಲಾಗಿತ್ತು. ಈ ಬಗ್ಗೆ ಸಂದರ್ಶನ ಒಂದರಲ್ಲಿ ರವೀನಾ ಹೇಳಿಕೊಂಡಿದ್ದರು.

ರವೀನಾ ಟಂಡನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು 1991ರಲ್ಲಿ. ‘ಪತ್ತರ್ ಕೆ ಫೂಲ್’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಿತು. ಮೊದಲ ಸಿನಿಮಾದಲ್ಲೇ ಅವರು ಗಮನ ಸೆಳೆದರು. ಈ ಚಿತ್ರದ ನಟನೆಗೆ ಅವರಿಗೆ ಫಿಲ್ಮ್​​ಫೇರ್​ ಅವಾರ್ಡ್ ಕೂಡ ಸಿಕ್ಕಿತ್ತು. 1999ರ ‘ಉಪೇಂದ್ರ’ ಸಿನಿಮಾ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು. 2022ರಲ್ಲಿ ರಿಲೀಸ್ ಆದ ‘ಕೆಜಿಎಫ್ 2’ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದ ಮೂಲಕ ಅವರು ಗಮನ ಸೆಳೆದರು. ಇಷ್ಟೆಲ್ಲ ಜನಪ್ರಿಯತೆ ಪಡೆದಿರುವ ಅವರು ಈ ಮೊದಲು ಸಾಕಷ್ಟು ತೊಂದರೆ ಅನುಭವಿಸಿದ್ದರು.

1998ರಲ್ಲಿ ರಿಲೀಸ್ ಆದ ‘ಬಡೇ ಮಿತಾ ಚೋಟೆ ಮಿಯಾ’ ಸಿನಿಮಾದ ಶೂಟಿಂಗ್ ವೇಳೆ ರವೀನಾಗೆ ಅನಾರೋಗ್ಯ ಉಂಟಾಗಿತ್ತಂತೆ. ಇದಕ್ಕಾಗಿ 20 ದಿನ ಆಸ್ಪತ್ರೆಯಲ್ಲಿ ಇದ್ದರು.  ‘ಬಡೇ ಮಿಯಾ ಚೋಟೆ ಮಿಯಾ ಸಿನಿಮಾ ಶೂಟ್​ಗಾಗಿ ದೆಹಲಿಯಲ್ಲಿ ಇದ್ದೆ. ನಾನಾ ಪಾಟೇಕರ್ ಚಿತ್ರದ ಶೂಟಿಂಗ್ ಮುಂಬೈನಲ್ಲಿ ಇತ್ತು. ಹೀಗಾಗಿ ಮುಂಬೈಗೆ ಮರಳಿದೆ. ಬೆಳಿಗ್ಗೆ ಎದ್ದಾಗ 101 ಡಿಗ್ರಿ ಜ್ವರ ಇತ್ತು. ದಿನವಿಡೀ ಸಾಕಷ್ಟು ತೊಂದರೆ ಅನುಭವಿಸಿದೆ’ ಎಂದಿದ್ದಾರೆ ಅವರು.

‘ಮೀರಾ ಅಯ್ಯರ್ ಅವರು ಆಗ ಫಿಲ್ಮ್​ಫೇರ್ ಮ್ಯಾಗಜಿನ್​ನ ಎಡಿಟರ್ ಆಗಿದ್ದರು. ಇಡೀ ದಿನ ಅವರು ನನ್ನ ಜೊತೆ ಇದ್ದರು. ಒಂದು ದಿನ ಸ್ಟಾರ್ ಲೈಫ್​ನಲ್ಲಿ ಏನಾಗುತ್ತದೆ ಎಂಬುದನ್ನು ಅವರು ಕವರ್ ಮಾಡುತ್ತಿದ್ದರು. ಈ ರೀತಿಯ ಪರಿಸ್ಥಿತಿಯಲ್ಲಿ ಹೇಗೆ ಶೂಟ್ ಮಾಡುತ್ತೀರಿ ಎಂದು ಅವರು ಕೇಳಿದ್ದರು. ಎಷ್ಟೇ ತೊಂದರೆ ಆದರೂ ನಾನು ಶೂಟಿಂಗ್ ಬಿಡಲಿಲ್ಲ. ನಂತರ ಆಸ್ಪತ್ರೆಗೆ ಅಡ್ಮಿಟ್ ಆಗಬೇಕಾಯಿತು’ ಎಂದಿದ್ದಾರೆ ರವೀನಾ.

‘ನಾನು ವೈದ್ಯರಿಗೆ ಕರೆ ಮಾಡಿ ನನ್ನ ಸಮಸ್ಯೆ ಹೇಳಿದೆ. ಅವರು ನೇರವಾಗಿ ಆಸ್ಪತ್ರೆಗೆ ಬರೋಕೆ ಹೇಳಿದರು. ಮೀರಾ ಕೂಡ ನನ್ನ ಜೊತೆ ಬಂದರು. ಆ ತಿಂಗಳು ಎರಡು ಮ್ಯಾಗಜಿನ್​ನಲ್ಲಿ ಎರಡು ರೀತಿಯ ಸುದ್ದಿ ಬಂದವು. ಫಿಲ್ಮ್​​ಫೇರ್ ಮ್ಯಾಗಜಿನ್ ಅವರು ನಾನು ಹೇಗೆ ಶೂಟಿಂಗ್ ಸೆಟ್​ಗೆ ಬಂದೆ, ಅಂದು ಏನಾಗಿತ್ತು ಎಂಬ ಬಗ್ಗೆ ವಿವರವಾಗಿ ಬರೆದಿದ್ದರು. ಆದರೆ, ಸ್ಟಾರ್​ಡಸ್ಟ್ ಹೆಸರಿನ ಮ್ಯಾಗಜಿನ್ ನನ್ನ ಬಗ್ಗೆ ಸುಳ್ಳು ಸುದ್ದಿ ಬರೆದರು. ನಾನು ಹೇಗೆ ಟಿಕ್ 20 (ತಿಗಣೆ ಔಷಧಿ) ಸೇವಿಸಿದೆ, ನಾನು ಹೇಗೆ ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂಬುದನ್ನು ಬರೆದಿದ್ದರು’ ಎಂದಿದ್ದಾರೆ ರವೀನಾ.

ಇದನ್ನೂ ಓದಿ:ಟಿವಿ9 ‘ನಕ್ಷತ್ರ ಸಮ್ಮಾನ್’ ಪ್ರಶಸ್ತಿ ಪಡೆದ ರವೀನಾ ಟಂಡನ್​ರ ಸಿನಿ ಪಯಣ ಹೇಗಿತ್ತು? 

‘ನಾನು 20 ದಿನ ಆಸ್ಪತ್ರೆಯಲ್ಲಿ ಇದ್ದೆ. ಆ ಬಳಿಕ ಶೂಟ್​ಗೆ ಬಂದೆ. ಎಲ್ಲರೂ ನನ್ನನ್ನು ಪ್ರಶ್ನೆ ಮಾಡಲು ಆರಂಭಿಸಿದರು. ಏಕೆ ಅಂಥ ನಿರ್ಧಾರ ತೆಗೆದುಕೊಂಡೆ ಎಂದು ಕೇಳುತ್ತಿದ್ದರು. ನಾನು ಅವರೆಲ್ಲರಿಗೂ ಏನಾಗಿತ್ತು ಎಂಬುದನ್ನು ವಿವರಿಸಿದ್ದೆ’ ಎಂದಿದ್ದಾರೆ ರವೀನಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ