ಬಿಗ್ ಬಾಸ್ 15ರಲ್ಲಿ ಭಾಗವಹಿಸಲು ರಿಯಾಗೆ ವಾರಕ್ಕೆ ₹ 35 ಲಕ್ಷದ ಬಂಪರ್ ಆಫರ್; ಆದರೆ ಅದರತ್ತ ತಿರುಗಿಯೂ ನೋಡದ ನಟಿ

Rhea Chakraborty: ಬಾಲಿವುಡ್​ ನಟಿ ರಿಯಾ ಚಕ್ರವರ್ತಿಗೆ ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್ 15’ಕ್ಕೆ ಬರೋಬ್ಬರಿ ₹ 35 ಲಕ್ಷದ ಆಫರ್ ನೀಡಲಾಗಿತ್ತಂತೆ. ಆದರೆ ನಟಿ ಮಾಡಿದ್ದೇನು? ಇಲ್ಲಿದೆ ಮಾಹಿತಿ.

ಬಿಗ್ ಬಾಸ್ 15ರಲ್ಲಿ ಭಾಗವಹಿಸಲು ರಿಯಾಗೆ ವಾರಕ್ಕೆ ₹ 35 ಲಕ್ಷದ ಬಂಪರ್ ಆಫರ್; ಆದರೆ ಅದರತ್ತ ತಿರುಗಿಯೂ ನೋಡದ ನಟಿ
ರಿಯಾ ಚಕ್ರವರ್ತಿ (ಸಂಗ್ರಹ ಚಿತ್ರ)
Edited By:

Updated on: Sep 30, 2021 | 6:00 PM

Big Boss 15: ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹೆಸರು ಅಕ್ಟೋಬರ್ 2ರಿಂದ ಆರಂಭವಾಗಲಿರುವ ಬಿಗ್​ ಬಾಸ್ 15ರ ಸ್ಪರ್ಧೆಗೆ ಮುಂಚೂಣಿಯಲ್ಲಿತ್ತು. ಇದೀಗ ಬಿಟೌನ್ ಅಂಗಳದಿಂದ ಕೇಳಿಬರುತ್ತಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ, ರಿಯಾಗೆ ಬಿಗ್​ ಬಾಸ್​ಗಾಗಿ ಬಂಪರ್ ಸಂಭಾವನೆಯನ್ನು ಆಫರ್ ಮಾಡಲಾಗಿತ್ತು ಎಂಬ ಗುಟ್ಟು ಬಹಿರಂಗವಾಗಿದೆ. ಈ ಮೊತ್ತವನ್ನು ಕೇಳಿಯೇ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಮೂಲಗಳ ಪ್ರಕಾರ, ರಿಯಾಗೆ ಪ್ರತಿ ವಾರಕ್ಕೆ ಬರೋಬ್ಬರಿ ₹ 35 ಲಕ್ಷ ಸಂಭಾವನೆಯ ಆಫರ್ ನೀಡಲಾಗಿತ್ತಂತೆ. ಇದಕ್ಕೂ ಅಚ್ಚರಿಯ ಸಂಗತಿಯೆಂದರೆ ರಿಯಾ ಈ ಬಂಪರ್ ಆಫರನ್ನು ನಯವಾಗಿಯೇ ತಿರಸ್ಕರಿಸಿರುವುದು.

ಸದ್ಯ ರಿಯಾ ಖಾತೆಯಲ್ಲಿ ಬಿಗ್ ಬಜೆಟ್ ಚಿತ್ರಗಳೇನೂ ಇಲ್ಲ. ಜೊತೆಗೆ ಅವರು ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟಿಯ ಸಾಲಿನಲ್ಲಿಯೂ ಇಲ್ಲ. ಅದಾಗ್ಯೂ ಅವರ ಬಳಿ ಒಂದಷ್ಟು ಉತ್ತಮ ಚಿತ್ರಗಳಿರುವುದು ನಿಜ. ಆದರೆ ಬಿಗ್ ಬಾಸ್​ನಂತಹ ದೊಡ್ಡ ವೇದಿಕೆ, ಉತ್ತಮ ಆಫರನ್ನು ಅವರು ತಿರಸ್ಕರಿಸಿದ್ದೇಕೆ ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆ. ಇದಕ್ಕೂ ಬಾಲಿವುಡ್ ಅಂಗಳದಿಂದ ಸಮಾಧಾನದ ಉತ್ತರ ಬಂದಿದೆ.

ಅಕ್ಟೋಬರ್ 2ರಿಂದ ಪ್ರಾರಂಭವಾಗುವ ಬಿಗ್ ಬಾಸ್​ಗೆ ರಿಯಾ ಭಾಗವಹಿಸೋದು ಪಕ್ಕಾ ಎಂದೇ ಈ ಹಿಂದೆ ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಅದು ತಲೆಕೆಳಗಾಗಿದೆ. ಇದಕ್ಕೆ ಮುಖ್ಯ ಕಾರಣ, ರಿಯಾ ಮುಖ್ಯವಾಗಿ ಚಿತ್ರಗಳತ್ತ ಗಮನ ಹರಿಸಲು ನಿರ್ಧರಿಸಿದ್ದಾರಂತೆ. ಇದರ ಭಾಗವಾಗಿ ಅವರು ಬಾಲಿವುಡ್ ಹಾಗೂ ದಕ್ಷಿಣದ ಕೆಲವು ನಿರ್ಮಾಪಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿದ ನಂತರ ರಿಯಾ ಬಾಳಿನಲ್ಲಿ ಹಲವು ಅನಿರೀಕ್ಷಿತಗಳು ನಡೆದವು. ಕೆಲವು ಸಮಯ ಅವರು ಜೈಲಿನಲ್ಲಿಯೂ ಇದ್ದರು. ಇದೀಗ ಅವರು ಕಮ್​ಬ್ಯಾಕ್ ಮಾಡಿದ್ದಾರೆ. ಆದರೆ ಮಾಧ್ಯಮದೊಂದಿಗೆ ಅಂತರ ಕಾಯ್ದುಕೊಳ್ಳುತ್ತಿರುವ ಅವರು, ತಮ್ಮ ಮುಂದಿನ ಯೋಜನೆಗಳ ಬಗ್ಗೆ, ಚಿತ್ರಗಳ ಬಗ್ಗೆ ತಾವಾಗಿಯೇ ಮಾಹಿತಿ ನೀಡಿಲ್ಲ. ಇತ್ತೀಚೆಗೆ ತೆರೆಕಂಡ ಅಮಿತಾಭ್ ಬಚ್ಚನ್ ಹಾಗೂ ಇಮ್ರಾನ್ ಹಶ್ಮಿ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ‘ಚೆಹ್ರೆ’ ಚಿತ್ರದಲ್ಲಿ ರಿಯಾ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದರು. ಆದರೆ ಆ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸಿಲ್ಲ. ಇದೀಗ ಬಿಗ್​ ಬಾಸ್ 15ರ ಬಂಪರ್ ಆಫರ್ ತಿರಸ್ಕರಿಸಿರುವ ರಿಯಾ, ತಮ್ಮ ಮುಂದಿನ ವೃತ್ತಿ ಜೀವನವನ್ನು ರೂಪಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ.

ಇದನ್ನೂ ಓದಿ:

Gangubai Kathiawadi: ಬೆಳ್ಳಿತೆರೆಯ ಮೇಲೆ ಮಿಂಚಲು ‘ಗಂಗೂಬಾಯಿ ಕಾಠಿಯಾವಾಡಿ’ ರೆಡಿ; ಯಾವಾಗ ಬಿಡುಗಡೆ?

ಅಮ್ಮನ ಗೈರು ಹಾಜರಿಯಲ್ಲಿ ಜಾಹ್ನವಿ ಕಪೂರ್ ವೃತ್ತಿಬದುಕನ್ನು ತಾವೇ ರೂಪಿಸಿಕೊಳ್ಳುತ್ತಿದ್ದಾರೆ

Gautam Adani: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

TV9 Web

TV9 Kannada

Read More
Loading...
Unable to load recommendations.
Follow Us