ಸೈಫ್ ಧರಿಸಿರುವ ಈ ಪುಟ್ಟ ವಸ್ತುವಿನ ಬೆಲೆ ಬಲು ದುಬಾರಿ: ಅಷ್ಟು ಹಣದಲ್ಲಿ ಒಳ್ಳೆ ಮನೆ ಕಟ್ಟಿಸಬಹುದು
Saif Ali Khan: ಸೈಫ್ ಅಲಿ ಖಾನ್, ಬಾಲಿವುಡ್‌ನ ಖಾನ್ಗಳಷ್ಟು ಸ್ಟಾರ್ ಎನಿಸಿಕೊಳ್ಳದಿದ್ದರೂ ರಾಯಲ್ನೆಸ್ಗೆ ಏನೂ ಕಡಿಮೆ ಇಲ್ಲ. ಸಾವಿರಾರು ಕೋಟಿ ಮೌಲ್ಯದ ಅರಮನೆ, ಆಸ್ತಿಗಳು ಸಾಕಷ್ಟಿದೆ. ಇದೇ ಕಾರಣಕ್ಕೆ ಅವರು ತಮ್ಮ ನವಾಬಿ ಕುಟುಂಬದ ಘನತೆಗೆ ತಕ್ಕಂತೆ ನವಾಬರಂತೆ ಬದುಕುತ್ತಿದ್ದಾರೆ. ಸೈಫ್ ಅಲಿ ಖಾನ್ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕಪ್ಪು ಬಣ್ಣದ ವೆಲ್ವೆಟ್ ಸೂಟ್ ಧರಿಸಿದ್ದರು. ಆದರೆ, ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಅವರ ಸೂಟ್ ಮೇಲಿದ್ದ ನವಿಲಿನ ಆಕಾರದ ಪುಟ್ಟ ಅಲಂಕಾರಿಕ ವಸ್ತುವಿನ ಮೇಲೆ. ಅದರ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?

ಬಾಲಿವುಡ್‌ನ (Bollywood) ‘ನವಾಬ’ ಎಂದೇ ಖ್ಯಾತರಾಗಿರುವ ಸೈಫ್ ಅಲಿ ಖಾನ್ ತಮ್ಮ ಸ್ಟೈಲ್ ಮತ್ತು ರಾಯಲ್ ಲುಕ್‌ನಿಂದ ಸುದ್ದಿಯಲ್ಲಿರುತ್ತಾರೆ. ರಾಯಲ್ ಕುಟುಂಬದ ಸೈಫ್ ಅಲಿ ಖಾನ್, ಬಾಲಿವುಡ್‌ನ ಖಾನ್ಗಳಷ್ಟು ಸ್ಟಾರ್ ಎನಿಸಿಕೊಳ್ಳದಿದ್ದರೂ ರಾಯಲ್ನೆಸ್ಗೆ ಏನೂ ಕಡಿಮೆ ಇಲ್ಲ. ಸಾವಿರಾರು ಕೋಟಿ ಮೌಲ್ಯದ ಅರಮನೆ, ಆಸ್ತಿಗಳು ಸಾಕಷ್ಟಿದೆ. ಇದೇ ಕಾರಣಕ್ಕೆ ಅವರು ತಮ್ಮ ನವಾಬಿ ಕುಟುಂಬದ ಘನತೆಗೆ ತಕ್ಕಂತೆ ನವಾಬರಂತೆ ಬದುಕುತ್ತಿದ್ದಾರೆ. ಸೈಫ್ ಅಲಿ ಖಾನ್ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕಪ್ಪು ಬಣ್ಣದ ವೆಲ್ವೆಟ್ ಸೂಟ್ ಧರಿಸಿದ್ದರು. ಆದರೆ, ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಅವರ ಸೂಟ್ ಮೇಲಿದ್ದ ನವಿಲಿನ ಆಕಾರದ ಪುಟ್ಟ ಅಲಂಕಾರಿಕ ವಸ್ತುವಿನ ಮೇಲೆ.
ಸೈಫ್ ಅಲಿ ಖಾನ್ ತಮ್ಮ ಸೂಟಿನ ಮೇಲೆ ಧರಿಸಿರವ ವಸ್ತುವನ್ನು ಬ್ರೂಚ್ ಎಂದು ಕರೆಯಲಾಗುತ್ತದೆ. ಸೂಟಿನ ಅಂದ ಹೆಚ್ಚಿಸಲು ಇದನ್ನು ತೊಡಲಾಗುತ್ತದೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಧರಿಸಿರುವ ಈ ರಾಯಲ್ ಬ್ರೂಚ್‌ನ ಬೆಲೆ ಸುಮಾರು 42 ಲಕ್ಷ ರೂಪಾಯಿಗಳು. ಒಂದು ಒಳ್ಳೆ ಮನೆ ಕಟ್ಟಬಹುದಾದಷ್ಟು ಸಮನಾದ ಬೆಲೆಯ ಈ ಆಭರಣವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೈಫ್ ಅಲಿ ಖಾನ್ ಅವರ ಈ ಬ್ರೂಚ್ ಅನ್ನು ಪ್ರಸಿದ್ಧ ಐಷಾರಾಮಿ ಆಭರಣ ವಿನ್ಯಾಸಕ ಸಂಸ್ಥೆಯು ವಿನ್ಯಾಸಗೊಳಿಸಿದೆ ಎಂದು ಹೇಳಲಾಗುತ್ತಿದೆ. ಇದು ವಜ್ರ ಮತ್ತು ಅತ್ಯಂತ ಅಮೂಲ್ಯವಾದ ಹರಳುಗಳನ್ನು ಈ ಬ್ರೂಚ್ ಒಳಗೊಂಡಿದೆ.
ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡಲ್ಲ; ಬಾಲಿವುಡ್ ನಟಿ
ಸೈಫ್ ಅಲಿ ಖಾನ್ ಅವರು ಪಟೌಡಿಯ ರಾಜಮನೆತನದ ಕುಡಿಯಾಗಿದ್ದರಿಂದ, ಅವರ ಉಡುಗೆ-ತೊಡುಗೆಗಳಲ್ಲಿ ರಾಜವಂಶದ ಕಳೆ ಎದ್ದು ಕಾಣುತ್ತದೆ. ಈ ಹಿಂದೆಯೂ ಅವರು ಅನೇಕ ಬಾರಿ ದುಬಾರಿ ವಾಚ್‌ಗಳು ಮತ್ತು ಸೂಟ್‌ಗಳನ್ನು ಧರಿಸಿ ಸುದ್ದಿಯಾಗಿದ್ದರು. ಈಗ ಈ 42 ಲಕ್ಷದ ಬ್ರೂಚ್ ಅವರ ಶ್ರೀಮಂತಿಕೆ ಸಾಕ್ಷಿಯಾಗಿದೆ.
ನೆಟ್ಟಿಗರು ಈ ಬಗ್ಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದು, “ಇಷ್ಟು ಸಣ್ಣ ಬ್ರೂಚ್ ಬೆಲೆ ಇಷ್ಟೊಂದಾ?” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಸೈಫ್ ಇತ್ತೀಚೆಗೆ ‘ದೇವರ’ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಅವರ ಅಭಿನಯಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಸಿನಿಮಾದಿಂದ ಹಿಡಿದು ಫ್ಯಾಷನ್ ಲೋಕದವರೆಗೆ ಸೈಫ್ ಸದಾ ಅಪ್‌ಡೇಟ್ ಆಗಿರುತ್ತಾರೆ ಎಂಬುದಕ್ಕೆ ಈ ದುಬಾರಿ ಬ್ರೂಚ್ ಮತ್ತೊಂದು ಉದಾಹರಣೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Thu, 12 February 26




