ಅಡ್ವಾನ್ಸ್ ಬುಕಿಂಗ್​ನಲ್ಲಿ ‘ಜವಾನ್’ ಚಿತ್ರವನ್ನೂ ಹಿಂದಿಕ್ಕಿದ ‘ಸಲಾರ್’; ಇದು ಪ್ರಶಾಂತ್ ನೀಲ್ ಕಮಾಲ್

|

Updated on: Aug 30, 2023 | 12:47 PM

‘ಜವಾನ್’ ಹಾಗೂ ‘ಸಲಾರ್’ ಎರಡೂ ಚಿತ್ರಗಳಲ್ಲಿ ಭರ್ಜರಿ ಆ್ಯಕ್ಷನ್ ಇದೆ. ‘ಜವಾನ್’ ಚಿತ್ರ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.‘ಸಲಾರ್’ ಚಿತ್ರ ತೆಲುಗು ಜೊತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡುತ್ತಿದೆ.

ಅಡ್ವಾನ್ಸ್ ಬುಕಿಂಗ್​ನಲ್ಲಿ ‘ಜವಾನ್’ ಚಿತ್ರವನ್ನೂ ಹಿಂದಿಕ್ಕಿದ ‘ಸಲಾರ್’; ಇದು ಪ್ರಶಾಂತ್ ನೀಲ್ ಕಮಾಲ್
ಪ್ರಭಾಸ್-ಶಾರುಖ್
Follow us on

ಶಾರುಖ್ ಖಾನ್ ಅವರು ಇಂಟರ್​ನ್ಯಾಷನಲ್ ಸ್ಟಾರ್. ಅವರಿಗೆ ವಿದೇಶದಲ್ಲೂ ಸಖತ್ ಬೇಡಿಕೆ ಇದೆ. ಅವರ ಚಿತ್ರಗಳು ಅಲ್ಲಿಯೂ ಸಖತ್ ಕಮಾಯಿ ಮಾಡುತ್ತವೆ. ಟಾಲಿವುಡ್ ನಟ ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿವೆ. ಶಾರುಖ್​ ಖಾನ್​ಗೆ ಹೋಲಿಸಿದರೆ ವಿದೇಶದಲ್ಲಿ ಪ್ರಭಾಸ್ ಹವಾ ಕಡಿಮೆ. ಆದಾಗ್ಯೂ ವಿದೇಶದಲ್ಲಿ ಶಾರುಖ್ ಖಾನ್ ಅವರನ್ನು ಪ್ರಭಾಸ್ ಹಿಂದಿಕ್ಕಿದ್ದಾರೆ. ಜನವರಿ 7ರಂದು ‘ಜವಾನ್’ ಹಾಗೂ ಸೆಪ್ಟೆಂಬರ್ 28ರಂದು ‘ಸಲಾರ್’ ರಿಲೀಸ್ ಆಗುತ್ತಿದೆ. ಈ ಚಿತ್ರಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.  ಅಡ್ವಾನ್ಸ್ ಬುಕಿಂಗ್​ನಲ್ಲಿ ‘ಜವಾನ್’ ಚಿತ್ರವನ್ನು ‘ಸಲಾರ್’ (Salaar Movie) ಹಿಂದಿಕ್ಕಿದೆ.

‘ಜವಾನ್’ ಸಿನಿಮಾಗೆ ಶಾರುಖ್ ಖಾನ್ ಹೀರೋ. ಅಟ್ಲಿ ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾ ಬಗ್ಗೆ ಭರ್ಜರಿ ಹೈಪ್ ಸೃಷ್ಟಿ ಆಗಿದೆ. ಈಗಾಗಲೇ ವಿದೇಶದಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಶಾರುಖ್ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಬಾಲಿವುಡ್ ಪಂಡಿತರ ಪ್ರಕಾರ ವಿದೇಶದಲ್ಲಿ ಈವರೆಗೆ ಅಡ್ವಾನ್ಸ್ ಬುಕಿಂಗ್​ನಿಂದ 1.65 ಕೋಟಿ ರೂಪಾಯಿ ಗಳಿಕೆ ಆಗಿದೆಯಂತೆ. ಈ ಗಳಿಕೆಯನ್ನು ಪ್ರಭಾಸ್ ‘ಸಲಾರ್’ ಸಿನಿಮಾ ಹಿಂದಿಕ್ಕಿದೆ.


ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾಗೆ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ಈ ಸಿನಿಮಾ ರಿಲೀಸ್ ಆಗೋಕೆ ಸುಮಾರು ಒಂದು ತಿಂಗಳು ಸಮಯ ಇದೆ. ಈ ಚಿತ್ರಕ್ಕೆ ವಿದೇಶದಲ್ಲಿ ಅಡ್ವಾನ್ಸ್ ಬುಕಿಂಗ್ ಶುರು ಆಗಿದ್ದು, ಸುಮಾರು 3.3 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ‘ಜವಾನ್’ ಗಳಿಕೆಯನ್ನು ಹಿಂದಿಕ್ಕಿದೆ.

ಇದನ್ನೂ ಓದಿ: Salaar Movie: ಭಾರತೀಯ ಸಿನಿಮಾ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ಸೃಷ್ಟಿಸಿದ ಪ್ರಭಾಸ್


‘ಜವಾನ್’ ಹಾಗೂ ‘ಸಲಾರ್’ ಎರಡೂ ಚಿತ್ರಗಳಲ್ಲಿ ಭರ್ಜರಿ ಆ್ಯಕ್ಷನ್ ಇದೆ. ‘ಜವಾನ್’ ಚಿತ್ರ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್’ ಬಂಡವಾಳ ಹೂಡುತ್ತಿದೆ. ‘ಸಲಾರ್’ ಚಿತ್ರ ತೆಲುಗು ಜೊತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:33 am, Wed, 30 August 23