Salaar Movie: ಭಾರತೀಯ ಸಿನಿಮಾ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ಸೃಷ್ಟಿಸಿದ ಪ್ರಭಾಸ್
ಖ್ಯಾತ ನಿರ್ದೇಶಕರು ಸಿನಿಮಾ ಮಾಡಿದರೆ ಆ ಬಗ್ಗೆ ನಿರೀಕ್ಷೆ ಹೆಚ್ಚಿರುತ್ತದೆ. ‘ಕೆಜಿಎಫ್ 2’ ಚಿತ್ರದಿಂದ ಪ್ರಶಾಂತ್ ನೀಲ್ ಜನಪ್ರಿಯತೆ ಹೆಚ್ಚಿತು. ಇದೇ ಸಿನಿಮಾ ಶೇಡ್ನಲ್ಲಿ ‘ಸಲಾರ್’ ಮೂಡಿ ಬರುತ್ತಿದೆ.
ಪ್ರಶಾಂತ್ ನೀಲ್ (Prashanth Neel) ಅವರು ‘ಕೆಜಿಎಫ್ 2’ ಸಿನಿಮಾ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ್ದಾರೆ. ಈಗ ಅವರು ‘ಸಲಾರ್’ ಚಿತ್ರದ (Salaar Movie) ಮೂಲಕ ಅಬ್ಬರಿಸಲು ರೆಡಿ ಆಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಇರುವ ಈ ಚಿತ್ರಕ್ಕೆ ಪ್ರಭಾಸ್ ಹೀರೋ. ಈ ಚಿತ್ರ ಸೆಪ್ಟೆಂಬರ್ 28ರಂದು ತೆರೆಗೆ ಬರುತ್ತಿದೆ. ಇದಕ್ಕೆ ಈಗಾಗಲೇ ಕೌಂಟ್ಡೌನ್ ಶುರುವಾಗಿದೆ. ಈ ಸಿನಿಮಾದ ಟೀಸರ್ ಈಗಾಗಲೇ ದಾಖಲೆ ಬರೆದಿದೆ. ಈಗ ಚಿತ್ರ ಮತ್ತೊಂದು ದಾಖಲೆ ಬರೆಯಲು ಸಿದ್ಧವಾಗಿದೆ.
ಖ್ಯಾತ ನಿರ್ದೇಶಕರು ಸಿನಿಮಾ ಮಾಡಿದರೆ ಆ ಬಗ್ಗೆ ನಿರೀಕ್ಷೆ ಹೆಚ್ಚಿರುತ್ತದೆ. ‘ಕೆಜಿಎಫ್ 2’ ಚಿತ್ರದಿಂದ ಪ್ರಶಾಂತ್ ನೀಲ್ ಜನಪ್ರಿಯತೆ ಹೆಚ್ಚಿತು. ಇದೇ ಸಿನಿಮಾ ಶೇಡ್ನಲ್ಲಿ ‘ಸಲಾರ್’ ಮೂಡಿ ಬರುತ್ತಿದೆ. ಎರಡೂ ಚಿತ್ರಕ್ಕೆ ಕನೆಕ್ಷನ್ ಇದೆ ಎಂದು ಕೂಡ ಹೇಳಲಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆದ ‘ಸಲಾರ್’ ಟೀಸರ್ ಹೊಸ ಭರವಸೆ ಮೂಡಿಸಿದೆ. ಈ ಸಿನಿಮಾ ಅಮೆರಿಕದಲ್ಲಿ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ.
ಈ ಬಗ್ಗೆ ಮನೋಬಾಲ ವಿಜಯಬಾಲನ್ ಅವರು ಮಾಹಿತಿ ನೀಡಿದ್ದಾರೆ. ಉತ್ತರ ಅಮೆರಿಕ ಒಂದರಲ್ಲೇ 1979 ಲೊಕೇಷನ್ಗಳಲ್ಲಿ ‘ಸಲಾರ್’ ಸಿನಿಮಾ ರಿಲೀಸ್ ಆಗಲಿದೆ. ಭಾರತ ಸಿನಿಮಾ ಒಂದು ಈ ಭಾಗದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು.
ಇಲ್ಲಿ ಮತ್ತೊಂದು ವಿಶೇಷ ಇದೆ. ಪ್ರಭಾಸ್ ಹುಟ್ಟಿದ ವರ್ಷ 1979. ಅಷ್ಟೇ ಸಂಖ್ಯೆಯ ಲೊಕೇಷನ್ಗಳಲ್ಲಿ ‘ಸಲಾರ್’ ಸಿನಿಮಾ ಉತ್ತರ ಅಮೆರಿಕದಲ್ಲಿ ಬಿಡುಗಡೆ ಆಗುತ್ತಿದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
PAN World star #Prabhas‘ #Salaar to release in a MASSIVE 1979 locations in North America.
ALL TIME RECORD RELEASE FOR ANY INDIAN FILM.
……………….??? ?????? ?????????………………..
Marking the Man’s birthday year with the locations releasing in… pic.twitter.com/AQpnFnsHHc
— Manobala Vijayabalan (@ManobalaV) July 17, 2023
ಇದನ್ನೂ ಓದಿ: ಆಂಧ್ರ, ತೆಲಂಗಾಣದಲ್ಲಿ ‘ಸಲಾರ್’ ಚಿತ್ರಕ್ಕೆ 200 ಕೋಟಿ ರೂ. ಬಿಸ್ನೆಸ್ ಮಾತುಕತೆ? ಹೆಚ್ಚಿತು ನಿರೀಕ್ಷೆ
ಪ್ರಭಾಸ್ ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ‘ಸಲಾರ್’ ಮೂಲಕ ಅವರಿಗೆ ಗೆಲ್ಲುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಭಾಸ್ಗೆ ಜೊತೆಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:08 am, Tue, 18 July 23