Kajol: ಜನಾಂಗೀಯ ನಿಂದನೆ ಮಾಡುವಂತಹ ಪದ ಬಳಸಿದ ಕಾಜೋಲ್​​​ ವಿಡಿಯೋ ವೈರಲ್​; ನೆಟ್ಟಿಗರಿಂದ ಕ್ಲಾಸ್​

ಯಾವುದೇ ವ್ಯಕ್ತಿಯನ್ನು ಜಾತಿ, ಜನಾಂಗದ ಆಧಾರದಲ್ಲಿ ನಿಂದಿಸುವುದು ಸರಿಯಲ್ಲ. ಆದರೆ ಕಾಜೋಲ್​ ಅವರು ಒಂದು ಪ್ರಮೋಷನಲ್​ ವಿಡಿಯೋದಲ್ಲಿ ಜನಾಂಗೀಯ ನಿಂದನೆಯ ಪದ ಬಳಸಿದ್ದಾರೆ.

Kajol: ಜನಾಂಗೀಯ ನಿಂದನೆ ಮಾಡುವಂತಹ ಪದ ಬಳಸಿದ ಕಾಜೋಲ್​​​ ವಿಡಿಯೋ ವೈರಲ್​; ನೆಟ್ಟಿಗರಿಂದ ಕ್ಲಾಸ್​
ಕಾಜೋಲ್​
Follow us
ಮದನ್​ ಕುಮಾರ್​
|

Updated on:Jul 18, 2023 | 1:11 PM

ಬಾಲಿವುಡ್​ ನಟಿ ಕಾಜೋಲ್​ (Kajol) ಅವರು ಒಂದಿಲ್ಲೊಂದು ಕಾರಣದಿಂದ ಟ್ರೋಲ್​ ಆಗುತ್ತಿದ್ದಾರೆ. ಇತ್ತೀಚೆಗೆ ಅವರು ಪಾಪರಾಜಿಗಳ ಜೊತೆ ಸಿಟ್ಟಿನಿಂದ ನಡೆದುಕೊಂಡಿದ್ದರು. ಅದನ್ನು ಅನೇಕರು ಖಂಡಿಸಿದ್ದರು. ಬಳಿಕ ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾದ ಕಲೆಕ್ಷನ್​ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕಾಗಿ ಕಾಜೋಲ್ ಅವರನ್ನು ಜನರು ಟ್ರೋಲ್​ (Kajol Troll) ಮಾಡಿದ್ದರು. ಈಗ ಇನ್ನೊಂದು ವಿಷಯ ಮುನ್ನೆಲೆಗೆ ಬಂದಿದೆ. ಒಂದು ಹಳೇ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಕಾಜೋಲ್​ ಅವರು ಜನಾಂಗೀಯ ನಿಂದನೆ ಮಾಡುವಂತಹ ಪದ (N Word) ಬಳಸಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಕಾಜೋಲ್​ ಅವರ ವರ್ತನೆಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ವ್ಯಕ್ತಿಯನ್ನು ಜಾತಿ, ಜನಾಂಗದ ಆಧಾರದಲ್ಲಿ ನಿಂದಿಸುವುದು ಸರಿಯಲ್ಲ. ಎಲ್ಲರೂ ಈ ವಿಚಾರದಲ್ಲಿ ಎಚ್ಚರಿಕೆ ವಹಿಸುತ್ತಾರೆ. ಸೆಲೆಬ್ರಿಟಿಗಳಂತೂ ಮಾತನಾಡುವಾಗ ಹೆಚ್ಚು ಹುಷಾರಾಗಿ ಇರಬೇಕು. ಆದರೆ ಕಾಜೋಲ್​ ಅವರು ಒಂದು ಪ್ರಮೋಷನಲ್​ ವಿಡಿಯೋದಲ್ಲಿ ಜನಾಂಗೀಯ ನಿಂದನೆಯ ಪದ (N Word) ಬಳಸಿದ್ದಾರೆ. ಅದು ಸರಿಯಲ್ಲ ಎಂದು ನೆಟ್ಟಿಗರು ಕ್ಲಾಸ್​ ತೆಗೆದುಕೊಂಡಿದ್ದಾರೆ. ಇನ್ನೂ ಕೆಲವರು ಕಾಜೋಲ್​ಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: Kajol: ‘ಪಠಾಣ್​’ ಕಲೆಕ್ಷನ್​ ಬಗ್ಗೆ ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಿದ ಕಾಜೋಲ್​; ಶಾರುಖ್​ ಅಭಿಮಾನಿಗಳು ಗರಂ

ಕಾಜೋಲ್​ ಅವರು ‘ದಿ ಟ್ರಯಲ್​’ ವೆಬ್​ ಸರಣಿಯಲ್ಲಿ ನಟಿಸಿದ್ದಾರೆ. ಅದರಲ್ಲಿ ಅವರು ಲಿಪ್​ ಲಾಕ್​ ಮಾಡುವ ಮೂಲಕ ಸಖತ್​ ಸುದ್ದಿ ಆಗಿದ್ದಾರೆ. ಒಂದಷ್ಟು ವರ್ಷಗಳ ಕಾಲ ನೋ ಕಿಸ್​ ಪಾಲಿಸಿ ಅನುಸರಿಸಿಕೊಂಡು ಬಂದಿದ್ದ ಅವರು ಈಗ ಏಕಾಏಕಿ ಕಿಸ್​ ಮಾಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತು. ಈಗಲೂ ಕಾಜೋಲ್​ಗೆ ಸಖತ್​ ಬೇಡಿಕೆ ಇದೆ. ಆದರೆ ಅದೇಕೋ ಗೊತ್ತಿಲ್ಲ, ಪದೇ ಪದೇ ಅನಗತ್ಯ ಕಾರಣಗಳಿಗಾಗಿ ಅವರು ಸುದ್ದಿ ಆಗುತ್ತಿದ್ದಾರೆ.

ಇದನ್ನೂ ಓದಿ: ತೆರೆಮೇಲೆ ಕಿಸ್ ಮಾಡಿದ ನಟಿ ಕಾಜೋಲ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಲೀಕ್

‘ಶಿಕ್ಷಣ ಪಡೆಯದ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ’ ಎಂದು ಕೆಲವು ದಿನಗಳ ಹಿಂದೆ ಹೇಳಿಕೆ ನೀಡುವ ಮೂಲಕ ಕಾಜೋಲ್​ ಅವರು ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಬಳಿಕ ಕ್ಷಮೆ ಕೇಳಿದರು. ಅಲ್ಲದೇ, ‘ದಿ ಟ್ರಯಲ್​’ ವೆಬ್​ ಸಿರೀಸ್​ನ ಪ್ರಚಾರಕ್ಕಾಗಿ ಸೋಶಿಯಲ್​ ಮೀಡಿಯಾದಲ್ಲಿ ಗಿಮಿಕ್​ ಮಾಡುವಂತಹ ಪೋಸ್ಟ್​ ಹಾಕಿದ್ದರಿಂದಲೂ ಅವರು ಟ್ರೋಲ್​ಗೆ ಒಳಗಾಗಿದ್ದರು. ಈಗ ಜನಾಂಗೀಯ ನಿಂದನೆಯ ಆರೋಪ ಎದುರಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:19 pm, Tue, 18 July 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್