Sign In

By signing in or creating an account, you agree with Associated Broadcasting Company's Terms & Conditions and Privacy Policy.

Kajol: ‘ಪಠಾಣ್​’ ಕಲೆಕ್ಷನ್​ ಬಗ್ಗೆ ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಿದ ಕಾಜೋಲ್​; ಶಾರುಖ್​ ಅಭಿಮಾನಿಗಳು ಗರಂ

Pathaan Real Collection: ‘ಪಠಾಣ್’ ಸಿನಿಮಾದ ಬಿಸ್ನೆಸ್​ ಬಗ್ಗೆ ಕಾಜೋಲ್ ಲೇವಡಿ ಮಾಡಿದ್ದಾರೆ. ಈ ಪ್ರಶ್ನೆ ಕೇಳಿದ ನಂತರ ಅವರು ಜೋರಾಗಿ ನಕ್ಕಿದ್ದಾರೆ. ಆ ನಗುವಿನಲ್ಲಿ ವ್ಯಂಗ್ಯವಿದೆ ಎಂದು ನೆಟ್ಟಿಗರು ದೂರುತ್ತಿದ್ದಾರೆ.

Kajol: ‘ಪಠಾಣ್​’ ಕಲೆಕ್ಷನ್​ ಬಗ್ಗೆ ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಿದ ಕಾಜೋಲ್​; ಶಾರುಖ್​ ಅಭಿಮಾನಿಗಳು ಗರಂ
ಕಾಜೋಲ್, ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Jul 16, 2023 | 2:42 PM

ನಟ ಶಾರುಖ್​ ಖಾನ್​ ಅವರು ‘ಪಠಾಣ್​’ (Pathaan) ಸಿನಿಮಾ ಮೂಲಕ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದರು. ಅದಕ್ಕೂ ಮುನ್ನ ಸತತ ಸೋಲು ಕಾಣುತ್ತಿದ್ದ ಅವರಿಗೆ ಈ ಚಿತ್ರದಿಂದ ಗೆಲುವು ಸಿಕ್ಕಿತು. 2023ರ ಆರಂಭದಲ್ಲಿ ಬಿಡುಗಡೆಯಾದ ಈ ಸಿನಿಮಾ ಇಂಡಿಯನ್​ ಬಾಕ್ಸ್​ ಆಫೀಸ್​ನಲ್ಲಿ 543 ಕೋಟಿ ರೂಪಾಯಿ ಗಳಿಸಿದೆ. ವಿಶ್ವಾದ್ಯಂತ ಈ ಸಿನಿಮಾ 1000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ ಎನ್ನಲಾಗಿದೆ. ನಿಜಕ್ಕೂ ಈ ಸಿನಿಮಾ ಎಷ್ಟು ಕಮಾಯಿ ಮಾಡಿದೆ ಎಂಬ ಬಗ್ಗೆ ಕೆಲವರಿಗೆ ಅನುಮಾನ ಇದೆ. ಜನಸಾಮಾನ್ಯರಿಗೆ ಮಾತ್ರವಲ್ಲದೇ ನಟಿ ಕಾಜೋಲ್​ (Kajol) ಕೂಡ ಈ ಅನುಮಾನ ಹೊಂದಿದ್ದಾರೆ. ‘ಪಠಾಣ್​ ಸಿನಿಮಾದ ನಿಜವಾದ ಕಲೆಕ್ಷನ್​ ಎಷ್ಟು’ ಎಂದು ಅವರು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ. ಇದರಿಂದ ಶಾರುಖ್​ ಖಾನ್​ (Shah Rukh Khan) ಅಭಿಮಾನಿಗಳಿಗೆ ಕೋಪ ಬಂದಿದೆ.

ಕಾಜೋಲ್​ ಅವರು ‘ದಿ ಟ್ರಯಲ್​’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ. ಅದರ ಪ್ರಚಾರದ ಸಲುವಾಗಿ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಶಾರುಖ್​ ಖಾನ್​ ಬಗ್ಗೆ ಪ್ರಸ್ತಾಪ ಆಗಿದೆ. ‘ನೀವು ಶಾರುಖ್​ ಖಾನ್​ಗೆ ಏನಾದರೂ ಪ್ರಶ್ನೆ ಕೇಳಬೇಕಾ’ ಎಂದು ನಿರೂಪಕರು ಕೇಳಿದ್ದಾರೆ. ಆಗ ಕಾಜೋಲ್​ ನೀಡಿದ ಪ್ರತಿಕ್ರಿಯೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

‘ಶಾರುಖ್​ ಖಾನ್​ ಬಗ್ಗೆ ನಾನೇನು ಕೇಳಲಿ. ಅವರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಎಲ್ಲವೂ ಇದೆ’ ಎಂದು ಕಾಜೋಲ್​ ಅವರು ಒಂದು ಕ್ಷಣ ಬ್ಲಾಂಕ್​ ಆಗಿದ್ದಾರೆ. ಕೂಡಲೇ ಏನನ್ನೋ ನೆನಪಿಸಿಕೊಂಡು, ‘ನಿಜಕ್ಕೂ ಪಠಾಣ್​ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಿತು’ ಎಂದು ಪ್ರಶ್ನೆ ಕೇಳಿದ್ದಾರೆ. ನಂತರ ಜೋರಾಗಿ ನಕ್ಕಿದ್ದಾರೆ. ಆ ನಗುವಿನಲ್ಲಿ ವ್ಯಂಗ್ಯ ಕಾಣಿಸಿದೆ ಎಂದು ನೆಟ್ಟಿಗರು ದೂರುತ್ತಿದ್ದಾರೆ.

ಇದನ್ನೂ ಓದಿ: ಯಶ್​ ನಟನೆಯ ಸಿನಿಮಾಗಳನ್ನು ನೋಡಿ ‘ಜವಾನ್​’ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದ ಶಾರುಖ್​ ಖಾನ್​

ಶಾರುಖ್​ ಖಾನ್​ ಮತ್ತು ಕಾಜೋಲ್​ ಅವರು ಬಹುಕಾಲದ ಸ್ನೇಹಿತರು. ಅನೇಕ ಸಿನಿಮಾಗಳಲ್ಲಿ ಅವರು ಒಟ್ಟಾಗಿ ನಟಿಸಿದ್ದಾರೆ. ಆದರೆ ಈಗ ಅವರಿಬ್ಬರ ನಡುವೆ ನಿಜಕ್ಕೂ ಸ್ನೇಹ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಅಭಿಮಾನಿಗಳಿಗೆ ಅನುಮಾನ ಮೂಡಿದೆ. ಒಂದು ವೇಳೆ ಸ್ನೇಹ ಇದ್ದಿದ್ದೇ ಹೌದಾಗಿದ್ದರೆ ಕಾಜೋಲ್​ ಅವರು ಈ ರೀತಿ ಪ್ರಶ್ನೆ ಕೇಳುತ್ತಿರಲಿಲ್ಲ ಎಂಬುದು ಕೆಲವರು ಅನಿಸಿಕೆ.

ಇದನ್ನೂ ಓದಿ: ಅಮ್ಮ-ಮಗನ ಪಾತ್ರದಲ್ಲಿ ದೀಪಿಕಾ ಪಡುಕೋಣೆ-ಶಾರುಖ್​ ಖಾನ್​? ಭಾರಿ ಟ್ವಿಸ್ಟ್​ ನಿರೀಕ್ಷೆಯಲ್ಲಿ ಫ್ಯಾನ್ಸ್​

‘ಪಠಾಣ್ ಸಿನಿಮಾದ ಬಿಸ್ನೆಸ್​ ಬಗ್ಗೆ ಕಾಜೋಲ್ ಲೇವಡಿ ಮಾಡಿದ್ದಾರೆ. ಶಾರುಖ್​ ಖಾನ್​ ಅವರು ನಕಲಿ ಕಲೆಕ್ಷನ್​ ಲೆಕ್ಕ ನೀಡಿದ್ದಾರೆ ಅಂತ ಮನೆಯಲ್ಲಿ ಕಾಜೋಲ್​ ಜೊತೆ ಅಜಯ್​ ದೇವಗನ್​ ಮಾತನಾಡಿರಬಹುದು. ಇದು ಬಾಲಿವುಡ್​ನ ಅಸಲಿ ಮುಖ’ ಎಂದು ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್