ತೆರೆಮೇಲೆ ಕಿಸ್ ಮಾಡಿದ ನಟಿ ಕಾಜೋಲ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಲೀಕ್

‘ದಿ ಲಸ್ಟ್ ಸ್ಟೋರೀಸ್ 2’ ಸೀರಿಸ್​ನಲ್ಲಿ ತಮನ್ನಾ ಕಿಸ್ ಮಾಡಿ ಸುದ್ದಿ ಆದರು. ಈಗ ಕಾಜೋಲ್ ಅವರ ಸರದಿ. ಅವರು ಸಹ ಕಲಾವಿದರಾದ ಜಿಶು ಸೇನ್​ ಗುಪ್ತಾ ಹಾಗೂ ಅಲಿ ಖಾನ್​ಗೆ ಕಿಸ್​ ಮಾಡಿದ್ದು ಸಾಕಷ್ಟು ಸುದ್ದಿ ಆಗುತ್ತಿದೆ.

ತೆರೆಮೇಲೆ ಕಿಸ್ ಮಾಡಿದ ನಟಿ ಕಾಜೋಲ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಲೀಕ್
ಕಾಜೋಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 17, 2023 | 2:50 PM

ಅಜಯ್ ದೇವಗನ್ (Ajay Devgn) ಪತ್ನಿ, ನಟಿ ಕಾಜೋಲ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ.  ಅವರು ಸಾಕಷ್ಟು ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ‘ನೋ ಕಿಸ್ ಪಾಲಿಸಿ’ ಬ್ರೇಕ್ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ದಿ ಟ್ರಯಲ್’ (The Trail) ವೆಬ್​ ಸೀರಿಸ್​ನಲ್ಲಿ ಕಾಜೋಲ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿರೀಸ್​ನಲ್ಲಿ ಅವರು ಲಿಪ್ ಕಿಸ್ ಮಾಡಿ ಸುದ್ದಿ ಆಗಿದ್ದಾರೆ.

ಅನೇಕ ಹೀರೋಯಿನ್​ಗಳು ತೆರೆಮೇಲೆ ಕಿಸ್ ಮಾಡದೇ ಇರಲು ನಿರ್ಧರಿಸಿದ್ದಾರೆ. ಆ ಸಾಲಿನಲ್ಲಿ ನಟಿ ತಮನ್ನಾ, ಕಾಜೋಲ್ ಕೂಡ ಇದ್ದರು. ‘ದಿ ಲಸ್ಟ್ ಸ್ಟೋರೀಸ್ 2’ ಸೀರಿಸ್​ನಲ್ಲಿ ತಮನ್ನಾ ಕಿಸ್ ಮಾಡಿ ಸುದ್ದಿ ಆದರು. ಈಗ ಕಾಜೋಲ್ ಅವರ ಸರದಿ. ಅವರು ಸಹ ಕಲಾವಿದರಾದ ಜಿಶು ಸೇನ್​ ಗುಪ್ತಾ ಹಾಗೂ ಅಲಿ ಖಾನ್​ಗೆ ಕಿಸ್​ ಮಾಡಿದ್ದು ಸಾಕಷ್ಟು ಸುದ್ದಿ ಆಗುತ್ತಿದೆ.

ಕಥಾ ನಾಯಕಿ (ಕಾಜೋಲ್) ಗೃಹಿಣಿ ಆಗಿರುತ್ತಾಳೆ. ಆಕೆಯ ಗಂಡನನ್ನು (ಜಿಶು) ಸೆಕ್ಸ್ ಹಗರಣದಲ್ಲಿ ಜೈಲಿಗೆ ಹಾಕಲಾಗುತ್ತದೆ. ಆಗ ಆಕೆಯ ಎಕ್ಸ್​ ಬಾಯ್​ಫ್ರೆಂಡ್ (ಅಲಿ) ಎಂಟ್ರಿ ಆಗುತ್ತದೆ. ಈ ರೀತಿಯಲ್ಲಿ ಕಥೆ ಮೂಡಿ ಬಂದಿದೆ. ಸದ್ಯ ಈ ವೆಬ್​ ಸೀರಿಸ್​ನಲ್ಲಿ ಬರುವ ಕಿಸ್ಸಿಂಗ್ ದೃಶ್ಯ ವೈರಲ್ ಆಗಿದೆ.

ಕಳೆದ 31 ವರ್ಷಗಳಿಂದ ಕಾಜೋಲ್ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಮೊದಲ ಸಿನಿಮಾ ‘ಬೇಖುದಿ’ ಚಿತ್ರದಲ್ಲಿ ಹಾಗೂ 1994ರಲ್ಲಿ ರಿಲೀಸ್ ಆದ ‘ಯೇ ದಿಲ್ಲಗಿ’ ಚಿತ್ರದಲ್ಲಿ ಅವರು ಕಿಸ್ ಮಾಡಿದ್ದರು. ಇದಾದ ಬಳಿಕ ಅವರು ವರ್ಷಗಳ ಕಾಲ ಈ ರೀತಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು.

ಇದನ್ನೂ ಓದಿ: ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಘೋಷಣೆ

ಶಾರುಖ್ ಖಾನ್ ಹಾಗೂ ಕಾಜೋಲ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಆದರೆ, ಕಾಜೋಲ್ ಅವರು ಇತ್ತೀಚೆಗೆ ಶಾರುಖ್ ಖಾನ್ ನಟನೆಯ ‘ಪಠಾಣ್​’ ಚಿತ್ರದ ಕಲೆಕ್ಷನ್​ ಬಗ್ಗೆ ಪ್ರಶ್ನೆ ಮಾಡಿ ಸುದ್ದಿ ಆಗಿದ್ದರು. ಇದರಿಂದ ಅನೇಕರು ಕಾಜೋಲ್​ ಅವರನ್ನು ಟೀಕೆ ಮಾಡಿದ್ದರು. ಈಗ ಕಿಸ್ ದೃಶ್ಯ ಇಟ್ಟುಕೊಂಡು ಟೀಕಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ