ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಘೋಷಣೆ

Shah Rukh Khan: ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಟೀಸರ್ ಅಥವಾ ಚಿತ್ರತಂಡ ಹೇಳಿಕೊಂಡಿರುವಂತೆ ಪ್ರೀವ್ಯೂ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.

ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಘೋಷಣೆ
ಶಾರುಖ್ ಖಾನ್ ಜವಾನ್
Follow us
|

Updated on: Jul 09, 2023 | 5:28 PM

ಪಠಾಣ್ (Pathaan) ಸಿನಿಮಾ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಿರುವ ಶಾರುಖ್ ಖಾನ್ (Shah Rukh Khan) ಇದೀಗ ಮತ್ತೊಂದು ಮಾಸ್ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ. ತಮಿಳಿನ ನಿರ್ದೇಶಕ ಅಟ್ಲಿ (Atlee) ಜೊತೆ ಶಾರುಖ್ ಖಾನ್ ಕೈ ಜೋಡಿಸಿದ್ದು ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ ಹಾಗೂ ಕೆಲವು ಟೀಸರ್​ಗಳು ಜವಾನ್ ಸಿನಿಮಾ ಭರ್ಜರಿ ಆಖ್ಷನ್ ಅನ್ನು ಒಳಗೊಂಡಿರುವ ಸುಳಿವು ನೀಡಿವೆ. ಜವಾನ್ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಸಿನಿಮಾದ ಟೀಸರ್ ಅಥವಾ ಚಿತ್ರತಂಡ ಹೇಳಿರುವ ಪ್ರಿವ್ಯು ಬಿಡುಗಡೆ ಮಾಡಲು ಸಜ್ಜಾಗಿದೆ ಚಿತ್ರತಂಡ.

‘ಜವಾನ್’ ಚಿತ್ರದ ಪ್ರಿವ್ಯೂ ಪ್ರಿವ್ಯೂ ಇದೇ ಸೋಮವಾರ (ಜುಲೈ 10) ಬೆಳಿಗ್ಗೆ 10:30ಕ್ಕೆ ಬಿಡುಗಡೆಯಾಗಲಿದೆ. ಈ ಬಗ್ಗೆ ಶಾರುಖ್ ಖಾನ್ ಹಾಗೂ ಚಿತ್ರತಂಡದ ಇತರರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಟ್ಲಿ ಜೊತೆ ಶಾರುಖ್ ಖಾನ್ ಸಿನಿಮಾ ಮಾಡುವುದಾಗಿ ಐದು ವರ್ಷದ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಕೋವಿಡ್ ಹಾಗೂ ಇತರೆ ಕಾರಣಗಳಿಂದ ಚಿತ್ರೀಕರಣ ಬಹಳ ತಡವಾಯಿತು. ಆದರೆ ಅಟ್ಲಿ ಹಾಗೂ ಶಾರುಖ್ ಖಾನ್ ಸಿನಿಮಾಕ್ಕಾಗಿ ಒಟ್ಟಿಗೆ ಸೇರುತ್ತಿರುವುದು ಶಾರುಖ್ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿತ್ತು.

ಇದನ್ನೂ ಓದಿ:ಜವಾನ್ ಸಿನಿಮಾ ಟ್ರೈಲರ್ ಬಿಡುಗಡೆಗೆ ಭರ್ಜರಿ ಯೋಜನೆ ಮಾಡಿರುವ ಶಾರುಖ್ ಖಾನ್

ಸಿನಿಮಾದ ಚಿತ್ರೀಕರಣ ಆರಂಭವಾದ ಬಳಿಕ ಚಿತ್ರತಂಡದವರು ಒಂದೆರೆಡು ಪೋಸ್ಟರ್​ ಹಾಗೂ ಕಿರು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರ ಹೊರತಾಗಿ, ಮಿಕ್ಕಂತೆ ಚಿತ್ರದ ಬಗ್ಗೆ ರಹಸ್ಯ ಕಾಪಾಡಿಕೊಂಡಿದ್ದರು. ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ, ಚಿತ್ರದ ಟೀಸರ್ ಅಥವಾ ಪ್ರಿವ್ಯೂ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಇದೀಗ ಬಿಡುಗಡೆ ಆಗಲಿರುವ ಪ್ರಿವ್ಯೂನಲ್ಲಿ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಜೊತೆಗೆ ಶಾರುಖ್ ಖಾನ್ ಹಾಗೂ ಇತರೆ ನಟರ ಲುಕ್​ಗಳು ಸಹ ನೋಡಲು ಸಿಗಲಿವೆ.

ಶಾರುಖ್ ಖಾನ್​ರ ‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲದೆ. ಈ ಸಿನಿಮಾವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರವೇ ತೆರೆಗೆ ಬರಲಿದೆ. ‘ಜವಾನ್’ ಚಿತ್ರವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಶಾರುಖ್ ಖಾನ್​ರ ಪತ್ನಿ ಗೌರಿ ಖಾನ್ ನಿರ್ಮಿಸಿದ್ದು, ಅಟ್ಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಯನತಾರಾ ನಾಯಕಿ, ತಮಿಳಿನ ಯೋಗಿಬಾಬು ಸಹ ಸಿನಿಮಾದಲ್ಲಿ ಇರಲಿದ್ದಾರೆ ಮಾತ್ರವಲ್ಲದೆ ದಕ್ಷಿಣದ ಹಲವು ನಟ-ನಟಿಯರು ಸಹ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜವಾನ್ ಸಿನಿಮಾವು ಮಾಜಿ ಸೈನಿಕನೊಬ್ಬನ ಸೇಡಿನ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಈ ವರೆಗೆ ಬಿಡುಗಡೆ ಆಗಿರುವ ಪೋಸ್ಟರ್, ಕಿರು ವಿಡಿಯೋಗಳು ಇದನ್ನೇ ಒತ್ತಿ ಹೇಳುತ್ತಿವೆ. ಜವಾನ್ ಸಿನಿಮಾವು ಸೆಪ್ಟೆಂಬರ್ 7 ರಂದು ತೆರೆಗೆ ಬರಲಿದೆ. ಇದರ ಜೊತೆಗೆ ಶಾರುಖ್ ಖಾನ್ ರಾಜ್​ಕುಮಾರ್ ಹಿರಾನಿಯ ಡಂಕಿ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾ ಸಹ ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ. ಭಾರತದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಜ್​ಕುಮಾರ್ ಹಿರಾನಿ ಜೊತೆಗೆ ಇದೇ ಮೊದಲ ಬಾರಿಗೆ ಶಾರುಖ್ ಖಾನ್ ನಟಿಸುತ್ತಿರುವ ಕಾರಣ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಾಗಿದೆ. ಈ ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ