ವಿದೇಶದಲ್ಲಿ ಮ್ಯಾಜಿಕ್ ಮಾಡಿದ ಪಠಾಣ್, ಅವತಾರ್ 2 ದಾಖಲೆ ಉಡೀಸ್

Pathaan: ಭಾರತೀಯ ಸಿನಿಮಾಗಳನ್ನು ನಿಷೇಧಿಸಿದ್ದ ದೇಶದಲ್ಲಿ ಬಿಡುಗಡೆ ಆಗಿ ಅವತಾರ್ 2 ಸಿನಿಮಾದ ದಾಖಲೆಯನ್ನೇ ಚಿಂದಿ ಉಡಾಯಿಸಿದೆ ಪಠಾಣ್ ಸಿನಿಮಾ.

ವಿದೇಶದಲ್ಲಿ ಮ್ಯಾಜಿಕ್ ಮಾಡಿದ ಪಠಾಣ್, ಅವತಾರ್ 2 ದಾಖಲೆ ಉಡೀಸ್
ಪಠಾಣ್
Follow us
ಮಂಜುನಾಥ ಸಿ.
|

Updated on: Jun 23, 2023 | 8:37 AM

ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ (Pathaan) ಸಿನಿಮಾ ಬಳಲಿದ್ದ ಬಾಲಿವುಡ್​ಗೆ ಮರುಜೀವ ನೀಡಿದ ಸಿನಿಮಾ. ಜನವರಿ 25 ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಈ ವರ್ಷದ ಈವರೆಗಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಸಹ ಹೌದು. ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶಗಳಲ್ಲಿಯೂ ಈ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಕೆಲ ನೆಗೆಟಿವ್ ವಿಮರ್ಶೆಗಳ ನಡುವೆಯೂ ಈ ಸಿನಿಮಾ ದೊಡ್ಡ ಯಶಸ್ಸನ್ನು ಗಳಿಸಿದ್ದು ಕೆಲ ದೇಶಗಳಲ್ಲಿಯಂತೂ ಹಾಲಿವುಡ್ (Hollywood) ಸಿನಿಮಾಗಳನ್ನು ಸಹ ಹಿಂದಿಕ್ಕಿದೆ.

ಬಾಂಗ್ಲಾದೇಶದಲ್ಲಿ ಭಾರತೀಯ ಸಿನಿಮಾಗಳ ಬಿಡುಗಡೆಯನ್ನು ನಿಷೇಧಿಸಲಾಗಿತ್ತು. ಆದರೆ ಇತ್ತೀಚೆಗಷ್ಟೆ ಆ ನಿಷೇಧವನ್ನು ತೆರವು ಮಾಡಲಾಗಿದ್ದು ಕಳೆದ ತಿಂಗಳಷ್ಟೆ ಶಾರುಖ್ ಖಾನ್​ರ ಪಠಾಣ್ ಸಿನಿಮಾವನ್ನು ಬಾಂಗ್ಲಾದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ ನಿಷೇಧ ತೆರವಾದ ಮೇಲೆ ಬಾಂಗ್ಲಾದಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಸಹ ಪಠಾಣ್ ಆಗಿದ್ದು ಈ ಸಿನಿಮಾವನ್ನು ಬಾಂಗ್ಲಾದೇಶಿಯವರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.

ಕೇವಲ 40 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತಾದರೂ ದೊಡ್ಡ ಸಂಖ್ಯೆಯ ಜನ ಮೊದಲ ದಿನವೇ ಪಠಾಣ್ ಸಿನಿಮಾವನ್ನು ವೀಕ್ಷಿಸಿದ್ದರು. ದಶಕಗಳ ಬಳಿಕ ಬಿಡುಗಡೆ ಆದ ಭಾರತೀಯ ಸಿನಿಮಾಕ್ಕೆ ಅಪರಿಮಿತ ಪ್ರೀತಿಯನ್ನು ಬಾಂಗ್ಲಾ ಜನ ತೋರಿಸುತ್ತಿದ್ದಾರೆ. ಪಠಾಣ್ ಸಿನಿಮಾವು ಬಾಂಗ್ಲಾದ ಹಳೆಯ ದಾಖಲೆಗಳನ್ನೆಲ್ಲ ಮುರಿದು ಈವರೆಗೆ ಬಾಂಗ್ಲಾನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ವಿದೇಶಿ ಸಿನಿಮಾ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದೆ. ಅವತಾರ್ 2 ಸಿನಿಮಾದ ದಾಖಲೆಯನ್ನು ಸಹ ಪಠಾಣ್ ಮುರಿದು ಹಾಕಿದೆ. ವಿಶೇಷವೆಂದರೆ ಬಾಂಗ್ಲಾನಲ್ಲಿ ಪಠಾಣ್ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿಬಿಟ್ಟಿತ್ತು. ಹಾಗಿದ್ದರೂ ಸಹ ಬಾಂಗ್ಲಾದ ಜನ ಮುಗಿಬಿದ್ದು ಪಠಾಣ್ ಸಿನಿಮಾ ವೀಕ್ಷಿಸಿದ್ದಾರೆ.

ಇದನ್ನೂ ಓದಿ:Shah Rukh Khan: ಮತ್ತೆ 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆ ಆಗಲಿದೆ ‘ಪಠಾಣ್​’: ಈ ಬಾರಿ ‘ಕೆಜಿಎಫ್​ 2’ ಚಿತ್ರದ ದಾಖಲೆ ಮುರಿಯುತ್ತಾ?

ಹಾಗೆಂದ ಪಾತ್ರಕ್ಕೆ ಭಾರಿ ದೊಡ್ಡ ಮೊತ್ತವನ್ನು ಪಠಾಣ್ ಸಿನಿಮಾ ಬಾಂಗ್ಲಾನಲ್ಲಿ ಕಲೆ ಹಾಕಿದೆ ಎಂದೇನೂ ಇಲ್ಲ. ಪಠಾಣ್ ಸಿನಿಮಾ ಬಾಂಗ್ಲಾನಲ್ಲಿ ಈವರೆಗೆ ಗಳಿಸಿರುವುದು 1.85 ಕೋಟಿ ಮಾತ್ರ. ಆದರೆ ಇದು ಬಾಂಗ್ಲಾದ ಮನೊರಂಜನಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟು ನೋಡಿದರೆ ಬಹಳ ದೊಡ್ಡ ಮೊತ್ತ. ಸುಮಾರು 17 ಕೋಟಿ ಜನಸಂಖ್ಯೆ ಇರುವ ಬಾಂಗ್ಲಾದೇಶದಲ್ಲಿ ಇರುವುದು ಕೆಲವು ನೂರು ಚಿತ್ರಮಂದಿರಗಳಷ್ಟೆ. ಆದರೆ ಅಷ್ಟು ಕಡಿಮೆ ಚಿತ್ರಮಂದಿರಗಳು ಹಾಗೂ ಫಾಸ್ಟ್ ಆಂಡ್ ಫ್ಯೂರಿಯಸ್ 10, ಟ್ರಾನ್ಸ್​ಫಾರ್ಮರ್ಸ್, ಸ್ಪೈಡರ್ ವರ್ಸ್ 2 ಅಂಥಹಾ ಹಾಲಿವುಡ್ ಸಿನಿಮಾಗಳು ಎದುರಿದ್ದೂ ಸಹ ಭಾರತೀಯ ಸಿನಿಮಾ ಒಂದು ಈ ಮಟ್ಟಿಗಿನ ಕಲೆಕ್ಷನ್ ಮಾಡಿರುವುದು ಕಡಿಮೆ ಸಾಧನೆಯಲ್ಲ. ಅದೂ ದಶಕಗಳ ಕಾಲ ಭಾರತೀಯ ಸಿನಿಮಾಗಳೇ ಬಿಡುಗಡೆ ಆಗದಿದ್ದ ನೆಲದಲ್ಲಿ ಬಿಡುಗಡೆ ಆಗಿ ಇಷ್ಟು ಪ್ರೀತಿ ಗಳಿಸಿರುವುದು ಮುಂದೆ ಬಾಂಗ್ಲಾನಲ್ಲಿ ಬಿಡುಗಡೆ ಆಗುವ ಭಾರತೀಯ ಸಿನಿಮಾಗಳಿಗೆ ಉತ್ತಮ ಅವಕಾಶಗಳಿರುವುದನ್ನು ಸ್ಪಷ್ಟಗೊಳಿಸಿದೆ.

ಪಠಾಣ್ ಸಿನಿಮಾವು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು ನಿರ್ಮಾಣ ಮಾಡಿರುವುದು ಯಶ್ ರಾಜ್ ಫಿಲಮ್ಸ್.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ