Vijay Varma Net Worth: 150 ಕೋಟಿ ರೂ. ಒಡತಿ ತಮನ್ನಾಗೆ ಕೇವಲ 17 ಕೋಟಿ ರೂ. ಹೊಂದಿರುವ ವಿಜಯ್ ವರ್ಮಾ ಜತೆ ಪ್ರೀತಿ
Tamannaah Bhatia Net Worth: ತಮನ್ನಾ ಭಾಟಿಯಾ ಅವರು ವಿಜಯ್ ವರ್ಮಾಗೆ ಮನಸೋತಿದ್ದಾರೆ. ಇಬ್ಬರೂ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ.
ಖ್ಯಾತ ನಟಿ ತಮನ್ನಾ ಭಾಟಿಯಾ (Tamanna Bhatia) ಅವರು ಈಗ ಪ್ರೀತಿ-ಪ್ರೇಮದ ಕಾರಣಕ್ಕಾಗಿ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಅವರು ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ತಮನ್ನಾ ಭಾಟಿಯಾ ಅವರು ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಬಹಿರಂಗಪಡಿಸಿದ್ದಾರೆ. ವಿಜಯ್ ವರ್ಮಾ (Vijay Varma) ಅವರು ಇನ್ನೂ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಬಾಕಿ ಇದೆ. ಈ ನಡುವೆ ಇವರಿಬ್ಬರ ಆಸ್ತಿಯ ಬಗ್ಗೆ ಚರ್ಚೆ ಆಗುತ್ತಿದೆ. ತಮನ್ನಾ ಅವರು ವಿಜಯ್ ವರ್ಮಾಗಿಂತ ಸಾಕಷ್ಟು ಪಟ್ಟು ಹೆಚ್ಚು ಹಣ ಹೊಂದಿದ್ದಾರೆ. ಅದೇ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ತಮನ್ನಾ ಅವರ ಒಟ್ಟು ಆಸ್ತಿ ಮೊತ್ತ (Tamannaah Bhatia Net Worth) 150 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ ವಿಜಯ್ ವರ್ಮಾ ಬಳಿ ಇರುವುದು ಕೇವಲ 17 ಕೋಟಿ ರೂಪಾಯಿ.
ಪ್ರೀತಿ ಹುಟ್ಟಲು ಗುಣ, ಆಸ್ತಿ, ಜಾತಿ, ಧರ್ಮ ಇತ್ಯಾದಿ ಅಡೆತಡೆಗಳು ಇರುವುದಿಲ್ಲ. ಎಲ್ಲವನ್ನೂ ಮೀರಿ ಬೆಳೆಯುವುದೇ ಪ್ರೀತಿ. ಚಿತ್ರರಂಗದಲ್ಲಿ ಹಲವು ಶ್ರೀಮಂತ ನಟರ ಜೊತೆ ತಮನ್ನಾ ಅಭಿನಯಿಸಿದ್ದಾರೆ. ಆದರೆ ಯಾರ ಜೊತೆಗೂ ಅವರಿಗೆ ನಿಜವಾದ ಪ್ರೀತಿ ಚಿಗುರಲಿಲ್ಲ. ಈಗ ವಿಜಯ್ ವರ್ಮಾಗೆ ಅವರು ಮನಸೋತಿದ್ದಾರೆ. ಇಬ್ಬರೂ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಇಬ್ಬರ ಬಗ್ಗೆ ಹತ್ತಾರು ಗಾಸಿಪ್ಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಬರ್ಲಿನ್ ಸಿನಿಮೋತ್ಸವದಲ್ಲಿ ಮಿಂಚಿದ ವಿಜಯ್ ವರ್ಮಾ
ತಮನ್ನಾ ಭಾಟಿಯಾ ಅವರು ಕಿಸ್ಸಿಂಗ್ ದೃಶ್ಯಗಳ ಬಗ್ಗೆ ಮಡಿವಂತಿಕೆ ಹೊಂದಿದ್ದರು. ಅವರು ಬೇರೆ ಯಾವ ನಟರ ಜೊತೆಗೂ ಚುಂಬನದ ದೃಶ್ಯದಲ್ಲಿ ನಟಿಸಿರಲಿಲ್ಲ. ಆದರೆ ವಿಜಯ್ ವರ್ಮಾ ವಿಚಾರದಲ್ಲಿ ಅವರು ಆ ನಿಯಮಕ್ಕೆ ಬ್ರೇಕ್ ಹಾಕಿದರು. ‘ಲಸ್ಟ್ ಸ್ಟೋರೀಸ್ 2’ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದಾರೆ. ಇಬ್ಬರೂ ಪರಸ್ಪರ ಒಂದಷ್ಟು ಆಪ್ತ ದೃಶ್ಯದಲ್ಲಿ ಅಭಿಯಿಸಿದ್ದಾರೆ. ಆ ಕಾರಣದಿಂದ ಈ ಸಿನಿಮಾ ಕೌತುಕ ಮೂಡಿಸಿದೆ. ನೆಟ್ಫ್ಲಿಕ್ಸ್ ಮೂಲಕ ಜೂನ್ 29ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Vijay Varma: ‘ನಾನು ಖುಷಿಯಾಗಿದ್ದೇನೆ’: ತಮನ್ನಾ ಭಾಟಿಯಾ ಪ್ರೀತಿ ಒಪ್ಪಿಕೊಂಡ ಬಳಿಕ ವಿಜಯ್ ವರ್ಮಾ ಪ್ರತಿಕ್ರಿಯೆ
ಬಾಲಿವುಡ್ನಲ್ಲಿ ಸ್ಟಾರ್ ನಟನಾಗಿ ವಿಜಯ್ ವರ್ಮಾ ಅವರು ಬೆಳೆಯುತ್ತಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಹೆಸರು ಮಾಡಿದ್ದಾರೆ. ಆಲಿಯಾ ಭಟ್ ಜೊತೆ ‘ಡಾರ್ಲಿಂಗ್ಸ್’ ಸಿನಿಮಾದಲ್ಲಿ ಅಭಿನಯಿಸಿ ಅವರು ಗಮನ ಸೆಳೆದರು. ವೆಬ್ ಸಿರೀಸ್ ಕ್ಷೇತ್ರದಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ. ಅವರು ಅಭಿನಯಿಸಿದ ‘ದಹಾಡ್’ ವೆಬ್ ಸಿರೀಸ್ ಸೂಪರ್ ಹಿಟ್ ಆಗಿದೆ. ಆ ಬಳಿಕ ಅವರಿಗೆ ಅವಕಾಶಗಳು ಹೆಚ್ಚಾಗಿದೆ. ‘ಲಸ್ಟ್ ಸ್ಟೋರೀಸ್ 2’ ಬಿಡುಗಡೆ ಆದ ನಂತರ ಅವರ ವೃತ್ತಿಜೀವನಕ್ಕೆ ಇನ್ನಷ್ಟು ಮೈಲೇಜ್ ಸಿಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.