ಅಂಬಾನಿ ಮನೆಯ ಮದುವೆ ಕಾರ್ಯಕ್ರಮ ಎಂದರೆ ಅಲ್ಲಿ ಅದ್ದೂರಿತನ ಇರಲೇಬೇಕು. ಅದೆಷ್ಟು ಅದ್ದೂರಿತನ ಎಂದರೆ ಬಂದ ಅತಿಥಿಗಳಿಗೆ ಬಾಲಿವುಡ್ ಸೆಲೆಬ್ರಿಟಿಗಳು ಅಡುಗೆ ಬಡಿಸುತ್ತಾರೆ. ಬಂದ ಅತಿಥಿಗಳನ್ನು ನಟಿಯರು ಸ್ವಾಗತಿಸಲು ಮನೆಯ ಬಾಗಿಲಲ್ಲಿ ನಿಲ್ಲುತ್ತಾರೆ. ಅಂಬಾನಿ ಕುಟುಂಬದವರು ಡ್ಯಾನ್ಸ್ ಮಾಡುವಾಗ ಹೀರೋಗಳು ಬ್ಯಾಕ್ ಡ್ಯಾನ್ಸರ್ಗಳಾಗುತ್ತಾರೆ. ಈಗ ಹಾಗೆಯೇ ಆಗಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಬ್ಯಾಕ್ ಡ್ಯಾನ್ಸರ್ಗಳಾಗಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದೆ.
ಮುಂಬೈನಲ್ಲಿ ಶುಕ್ರವಾರ ರಾತ್ರಿ ಸಂಗೀತ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದವರು ಕುಣಿದು ಕುಪ್ಪಳಿಸಿದ್ದಾರೆ. ಬಾಲಿವುಡ್ ಮಂದಿ ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ಅನಂತ್ ಅಂಬಾನಿ ಹಾಗೂ ಸಲ್ಮಾನ್ ಖಾನ್ ‘ಏಸಾ ಪೆಹೆ ಲಿ ಬಾರ್ ಹುವಾ ಹೇ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ವೀರಲ್ ಭಯಾನಿ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಲ್ಮಾನ್ ಖಾನ್ ಹಾಗೂ ಅನಂತ್ ಅಂಬಾನಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೆ. ಇದರಲ್ಲಿ ಅನಂತ್ ಅವರು ಸಲ್ಮಾನ್ ಹುಕ್ ಸ್ಟೆಪ್ನ ಪ್ರಯತ್ನಿಸಿದ್ದಾರೆ. ರಣವೀರ್ ಸಿಂಗ್ ಅವರು ಕೂಡ ಡ್ಯಾನ್ಸ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ, ಪ್ರೆಗ್ನೆಂಟ್ ಅನ್ನೋ ಕಾರಣಕ್ಕೆ ಅವರು ಡ್ಯಾನ್ಸ್ ಮಾಡಿಲ್ಲ. ಜಸ್ಟಿನ್ ಬೀಬರ್ ಕೂಡ ಅಂಬಾನಿ ಮನೆಯ ಮದುವೆ ಕಾರ್ಯಕ್ರಮದಲ್ಲಿ ಹಾಡಲು ಮುಂಬೈಗೆ ಬಂದಿದ್ದಾರೆ.
ಇದನ್ನೂ ಓದಿ: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಜಸ್ಟಿನ್ ಬೀಬರ್; ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಗ್ಯಾರಂಟಿ
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಜುಲೈ 12ರಂದು ಮದುವೆ ಆಗಲಿದ್ದಾರೆ. ಮುಂಬೈನಲ್ಲಿ ಅದ್ದೂರಿಯಾಗಿ ಈ ವಿವಾಹ ನಡೆಯಲಿದೆ. ಅನೇಕ ಸೆಲೆಬ್ರಿಟಿಗಳು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿ ಆಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:44 am, Sat, 6 July 24