ಸಲ್ಮಾನ್ ಖಾನ್ ಅವರು ತಮ್ಮ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಅದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಅದು ಕೆಟ್ಟ ವಿಚಾರ ಆಗಿದ್ದರೆ ಅದಕ್ಕೆ ಸಲ್ಮಾನ್ ಖಾನ್ ಅವರು ತಿರುಗೇಟು ನೀಡಿಯೇ ನೀಡುತ್ತಾರೆ. ಈಗ ಉದ್ಯಮಿ ಅಶ್ನೀರ್ ಗ್ರೋವರ್ಗೂ ಹಾಗೆಯೇ ಆಗಿದೆ. ಸಲ್ಮಾನ್ ಖಾನ್ ಅವರನ್ನು ಬ್ರ್ಯಾಂಡ್ ಅಬಾಸಿಡರ್ ಆಗಿ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಅಶ್ನೀರ್ ಹೇಳಿದ ಮಾತನ್ನು ಸಲ್ಮಾನ್ ಖಾನ್ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಇದಕ್ಕೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.
‘ಸಲ್ಮಾನ್ ಖಾನ್ ಅವರ ಜೊತೆ ಚೌಕಾಸಿ ಮಾಡಿ ಕಡಿಮೆ ಹಣಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಲು ಒಪ್ಪಿಸಿದ್ದೆ. ಅಲ್ಲದೆ, ಸಲ್ಮಾನ್ ಖಾನ್ ಜೊತೆ ಫೋಟೋ ತೆಗೆಸಿಕೊಳ್ಳಬಾರದು ಎಂದು ಅವರ ಮ್ಯಾನೇಜರ್ ಹೇಳಿದ್ದರು. ನನಗೇಕೆ ಅವರ ಜೊತೆ ಫೋಟೋ ಬೇಕು ಎಂದು ಕೇಳಿದ್ದೆ’ ಎಂಬ ಮಾತನ್ನು ಅಶ್ನೀರ್ ಹೇಳಿದ್ದರು. ಈ ಮಾತನ್ನು ಅವರು ಗರ್ವದಿಂದ ಹೇಳಿಕೊಂಡಿದ್ದರು. ಇದು ಸಲ್ಮಾನ್ ಖಾನ್ ಗಮನಕ್ಕೆ ಬಂದಿತ್ತು. ಅಶ್ನೀರ್ ಅವರು ಬಿಗ್ ಬಾಸ್ ವೇದಿಕೆ ಏರಿದಾಗ ಸಲ್ಮಾನ್ ಖಾನ್ ಅವರು ಈ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
‘ನಿಮ್ಮ ಹೆಸರೂ ನನಗೆ ಗೊತ್ತಿರಲಿಲ್ಲ. ನನ್ನ ಬಗ್ಗೆ ನೀವು ಮಾತನಾಡುವುದನ್ನು ಕೇಳಿದ್ದೇನೆ. ನೀವು ಮಾತನಾಡುವಾಗ ಹೇಗೆ ಮಾತನಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಾವು ಅಲ್ಲಿ ಇಲ್ಲದೆ ಇದ್ದರೂ ಉತ್ತಮವಾಗಿ ಮಾತನಾಡಬೇಕು. ಇದು ಸಣ್ಣ ಇಂಡಸ್ಟ್ರಿ. ಮತ್ತೆ ಮತ್ತೆ ಭೇಟಿ ಮಾಡಬೇಕಾಗುತ್ತದೆ. ನೀವು ಆ ರೀತಿ ಯಾಕೆ ಮಾತಾನಿಡಿದ್ದೀರಿ ಎಂಬುದು ನಂಗೆ ಗೊತ್ತಿಲ್ಲ’ ಎಂದಿದ್ದಾರೆ ಸಲ್ಮಾನ್ ಖಾನ್. ಆ ಬಳಿಕ ಕ್ಷಮೆ ಕೇಳಿದರು ಅಶ್ನೀರ್. ‘ಆ ರೀತಿಯ ಆ್ಯಟಿಟ್ಯೂಡ್ ಸರಿ ಅಲ್ಲ’ ಎಂದ ಸಲ್ಮಾನ್ ಖಾನ್, ‘ಈಗ ಸರಿಯಾದ ಆ್ಯಟಿಟ್ಯೂಡ್ ಬರ್ತಿದೆ’ ಎಂದರು. ಸಲ್ಮಾನ್ ಖಾನ್ ಈ ರೀತಿ ಮಾತನಾಡುವಾಗ ಅಶ್ನೀರ್ ಸ್ವಲ್ಪ ಭಯದಲ್ಲಿ, ವಿನಮ್ರವಾಗಿ ನಡೆದುಕೊಳ್ಳುತ್ತಿದ್ದರು.
ಇದನ್ನೂ ಓದಿ:ಮೌನಿ ರಾಯ್ ಬಿಕಿನಿ ಫೋಟೋ ಲೈಕ್ ಮಾಡಿದ ಅಶ್ನೀರ್ ಗ್ರೋವರ್; ಜಗಳಕ್ಕೆ ಇಳಿದ ಪತ್ನಿ
ಈ ಘಟನೆ ಬಳಿಕ ಅಶ್ನೀರ್ ಅವರು ಟ್ವೀಟ್ ಮಾಡಿದ್ದಾರೆ. ‘ನೀವು ಬಿಗ್ ಬಾಸ್ನ ವೀಕೆಂಡ್ ಕಾ ವಾರ್ನ ಎಂಜಾಯ್ ಮಾಡಿದಿರಿ ಎಂದುಕೊಳ್ಳುತ್ತೇನೆ. ನನಗೆ ಫನ್ ಸಿಕ್ಕಿತು. ಆ ಎಪಿಸೋಡ್ ಒಳ್ಳೆಯ ಟಿಆರ್ಪಿ ಪಡೆಯಿತು ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ ಅಶ್ನೀರ್. ಅಲ್ಲದೆ, ಸಲ್ಮಾನ್ ಬಗ್ಗೆ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
‘ಸಲ್ಮಾನ್ ಖಾನ್ ಓರ್ವ ಗ್ರೇಟ್ ಹೋಸ್ಟ್ ಹಾಗೂ ನಟ. ಬಿಗ್ ಬಾಸ್ನಲ್ಲಿ ಏನು ತಂದರೆ ಅದು ಗೆಲ್ಲುತ್ತದೆ ಎಂಬುದನ್ನು ತಿಳಿದಿದ್ದಾರೆ. ಇದಕ್ಕೆ ನಾನು ಸಲ್ಮಾನ್ ಅನ್ನು ಮೆಚ್ಚುತ್ತೇನೆ. ನಾನು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇನೆ ಮತ್ತು ನಾನು ಹೇಳಿದ ಡೀಲ್ ನಂಬರ್ ಸರಿ ಇದೆ’ ಎಂದಿದ್ದರು ಸಲ್ಮಾನ್ ಖಾನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ