Salman Khan: ‘ಟೈಗರ್​ 3’ ಕಲೆಕ್ಷನ್​ ತಗ್ಗಲು ತಾವೇ ಕಾರಣ ಎಂದ ಸಲ್ಮಾನ್ ಖಾನ್..

|

Updated on: Nov 30, 2023 | 10:45 AM

ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಚಿತ್ರಕ್ಕೆ ಜನರು ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ನೀಡಿದರು. ಆದರೆ, ದಿನ ಕಳೆದಂತೆ ಕಲೆಕ್ಷನ್ ತಗ್ಗಿತು. ಈಗ ಈ ಚಿತ್ರ 300 ಕೋಟಿ ರೂಪಾಯಿ ಕ್ಲಬ್ ಸೇರಲು ಸಾಕಷ್ಟು ಹರಸಾಹಸ ಮಾಡುತ್ತಿದೆ.

Salman Khan: ‘ಟೈಗರ್​ 3’ ಕಲೆಕ್ಷನ್​ ತಗ್ಗಲು ತಾವೇ ಕಾರಣ ಎಂದ ಸಲ್ಮಾನ್ ಖಾನ್..
‘ಟೈಗರ್​ 3’ ಸಿನಿಮಾ ಪೋಸ್ಟರ್​
Follow us on

‘ಜವಾನ್’ ಹಾಗೂ ‘ಪಠಾಣ್’ ಸಿನಿಮಾ (Pathaan Movie) ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿವೆ. ಈ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದೆ. ಸ್ಟಾರ್ ಸಿನಿಮಾಗಳು ಅನಾಯಾಸವಾಗಿ 1000 ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ಶಾರುಖ್ ಖಾನ್ ತೋರಿಸಿಕೊಟ್ಟಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಚಿತ್ರ ಕೂಡ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳಾಗಿದೆ.

‘ಟೈಗರ್ 3’ ಚಿತ್ರಕ್ಕೆ ಜನರು ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ನೀಡಿದರು. ದಿನ ಕಳೆದಂತೆ ಥಿಯೇಟರ್​ಗೆ ಬರುವವರ ಸಂಖ್ಯೆ ಕಡಿಮೆ ಆಯಿತು. ಭಾನುವಾರ ಸಿನಿಮಾ ರಿಲೀಸ್ ಮಾಡಿದ್ದು ಕೂಡ ಚಿತ್ರಕ್ಕೆ ಹಿನ್ನಡೆ ಆಯಿತು. ಈಗ ‘ಟೈಗರ್ 3’ ಸಿನಿಮಾ ಗಳಿಕೆ ಬಗ್ಗೆ ಮಾತನಾಡಿದ್ದಾರೆ ಸಲ್ಮಾನ್ ಖಾನ್. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಿದ್ದು, ಕಲೆಕ್ಷನ್ ಕಡಿಮೆ ಆಗಿದೆ ಎಂದಿದ್ದಾರೆ.

‘ಟೈಗರ್ 3 ಚಿತ್ರದ ಟಿಕೆಟ್ ದರವನ್ನು ಕಡಿಮೆಗೆ ನಿಗದಿ ಮಾಡಿದ್ದೆವು. ಉಳಿದ ಸಿನಿಮಾಗಳು ಹೆಚ್ಚಿನ ದರಕ್ಕೆ ಟಿಕೆಟ್ ಮಾರಾಟ ಮಾಡಿವೆ. ಜನರ ಹಣವನ್ನು ಉಳಿಸುವ ಆಲೋಚನೆ ಇತ್ತು. ಇದು ಚಿತ್ರದ ಕಲೆಕ್ಷನ್​ಗೆ ಹೊಡೆತ ನೀಡಿತು. ಇನ್ನು, ನಾವು ಮೊದಲ ವಾರ ಯಾವುದೇ ಡಿಸ್ಕೌಂಟ್ ನೀಡಲಿಲ್ಲ’ ಎಂದಿದ್ದಾರೆ ಸಲ್ಮಾನ್ ಖಾನ್.

‘ಮುಂದಿನ ದಿನಗಳಲ್ಲಿ ನಾನು ನನ್ನ ಸಿನಿಮಾಗೆ ಪ್ರೀಮಿಯಮ್ ಟಿಕೆಟ್ ದರವನ್ನೇ ನಿಗದಿ ಮಾಡುತ್ತೇನೆ. ಆಗ ಸಿನಿಮಾದ ಗಳಿಕೆ ಹೆಚ್ಚುತ್ತದೆ’ ಎಂದಿದ್ದಾರೆ ಸಲ್ಲು. ಪಿವಿಆರ್ ಹಾಗೂ ಐನಾಕ್ಸ್​ನಲ್ಲಿ ‘ಟೈಗರ್ 3’ ಟಿಕೆಟ್ ಬೆಲೆ ಎರಡು ವಾರ ಹೆಚ್ಚಿನ ಮೊತ್ತಕ್ಕೆ ಮಾರಾಟ ಆಗಿದೆ. ಈಗ ಈ ಬೆಲೆಯನ್ನು 150 ರೂಪಾಯಿಗೆ ತಗ್ಗಿಸಲಾಗಿದೆ. ಹೀಗಾಗಿ, ಸಲ್ಮಾನ್ ಖಾನ್ ನೀಡಿರೋ ಹೇಳಿಕೆ ಜನರಿಗೆ ಖುಷಿ ನೀಡಿಲ್ಲ.

ಇದನ್ನೂ ಓದಿ: ‘ಸಾವಿಗೆ ವೀಸಾ ಇಲ್ಲ, ವಿದೇಶಕ್ಕೆ ಹೋದ್ರೂ ಬಿಡಲ್ಲ’; ಸಲ್ಮಾನ್ ಖಾನ್​ಗೆ ಮತ್ತೆ ಬಂತು ಬೆದರಿಕೆ

ಸಲ್ಮಾನ್ ಖಾನ್ ಅವರನ್ನು ಈಗ ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಸೋತ ಬಳಿಕ ಸಲ್ಮಾನ್ ಖಾನ್ ಅವರು ಈ ರೀತಿಯ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ 18 ದಿನಗಳಲ್ಲಿ 278 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ 300 ಕೋಟಿ ರೂಪಾಯಿ ಕ್ಲಬ್ ಸೇರಲು ಸಾಕಷ್ಟು ಹರಸಾಹಸ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:40 am, Thu, 30 November 23