ಬಾಲಿವುಡ್ ನಟ ಸಲ್ಮಾನ್ ಖಾನ್ಗೆ (Salman Khan) ಅಭಿಮಾನಿ ಬಳಗ ಬಹುದೊಡ್ಡದು. ಮಾಸ್ ಹೀರೋ ಆಗಿ ತೆರೆ ಮೇಲೆ ಅಬ್ಬರಿಸಿದರೆ ಅಭಿಮಾನಿಗಳ ಖುಷಿಗೆ ಪಾರವೇ ಇರುವುದಿಲ್ಲ. ಆದರೆ ಎರಡು ವಾರಗಳ ಹಿಂದೆ ಸಲ್ಮಾನ್ಗೆ ಅವರ ಫಾರ್ಮ್ಹೌಸ್ನಲ್ಲಿ (Farm House) ಹಾವು ಕಚ್ಚಿತ್ತು. ಆಸ್ಪತ್ರೆಗೂ ದಾಖಲಾಗಿ ಬಂದಿದ್ದರು ಸಲ್ಮಾನ್. ಮೊದಲಿಗೆ ಇದು ಅಭಿಮಾನಿಗಳ (Fans) ಚಿಂತೆಗೆ ಕಾರಣವಾಗಿತ್ತು. ನಂತರದಲ್ಲಿ ಸಲ್ಮಾನ್ ಈ ಕುರಿತು ಸ್ಪಷ್ಟನೆ ನೀಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಇದೀಗ ಸಲ್ಮಾನ್ ಕುದುರೆಯೊಂದರ (Horse) ಜತೆ ನಿಂತಿರುವ ಮಸ್ತ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಬಹಳ ಮಜವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಲ್ಮಾನ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಶುಕ್ರವಾರದಂದು ಅವರು ಕುದುರೆಯೊಂದಿಗೆ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ‘Horse’s mouth’ ಎಂದು ಕ್ಯಾಪ್ಶನ್ ಕೂಡ ನೀಡಿದ್ದಾರೆ. ಆದರೆ ಸಲ್ಮಾನ್ ಹಾಗೂ ಹಾವಿನ ಪ್ರಕರಣವನ್ನು ಇನ್ನೂ ಮರೆಯದ ನೆಟ್ಟಿಗರು ಅದನ್ನು ಇದಕ್ಕೆ ಹೋಲಿಸಿ ಕಾಮೆಂಟ್ ಮಾಡುತ್ತಿದ್ದಾರೆ.
ಒಬ್ಬ ಅಭಿಮಾನಿ ಸಲ್ಮಾನ್ ಟೈಗರ್ ಸರಣಿಯ ಚಿತ್ರಗಳನ್ನು ನೆನಪು ಮಾಡಿಕೊಳ್ಳುತ್ತಾ, ‘‘ಪಾಪ ಕುದುರೆ, ಹುಲಿ ಮುಂದೆ ನಿಂತಿದೆ ಎಂಬ ಅರಿವಿಲ್ಲ’’ ಎಂದು ಬರೆದು ಕಾಲೆಳೆದಿದ್ದಾರೆ. ಮತ್ತೋರ್ವರು ಸಲ್ಮಾನ್ಗೆ ‘‘ಸೋದರಾ, ಆತನನ್ನು ಹೆಚ್ಚು ಪ್ರೀತಿಸಬೇಡಿ, ತಿರುಗಿ ಕಚ್ಚಿಯಾನು’’ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಸಲ್ಮಾನ್ ಅಭಿಮಾನಿ ‘‘ಎರಡೂ ಸಖತ್ ಕುದುರೆಗಳು.. ಒಂದು ಟ್ರಾಕ್ ಫೀಲ್ಡ್ನಲ್ಲಿ ಓಡಿದರೆ, ಮತ್ತೊಬ್ಬರು ಬಾಕ್ಸಾಫೀಸ್ನಲ್ಲಿ ಓಡುತ್ತಾರೆ’’ ಎಂದು ಬರೆದಿದ್ದಾರೆ.
ಸಲ್ಮಾನ್ ಮಹಿಳಾ ಅಭಿಮಾನಿಗಳೂ ಕಾಮೆಂಟ್ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಕುದುರೆಯ ಪುಣ್ಯವನ್ನು ಕೊಂಡಾಡಿರುವ ಅವರು, ‘‘ಅದು ಬಹಳ ಅದೃಷ್ಟವಂತ ಕುದುರೆ. ಕಾರಣ, ಬಹಳಷ್ಟು ಹುಡುಗಿಯರು ನಿಮ್ಮನ್ನು ತಬ್ಬಿಕೊಳ್ಳಲು ಕಾಯುತ್ತಿದ್ದಾರೆ’’ ಎಂದು ಬರೆದಿದ್ದಾರೆ.
ಸಲ್ಮಾನ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
ಚಿತ್ರಗಳ ವಿಷಯಕ್ಕೆ ಬಂದರೆ ಸಲ್ಮಾನ್ ಪ್ರಸ್ತುತ ‘ಟೈಗರ್ 3’ (Tiger 3) ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕತ್ರಿನಾ ಕೈಫ್ ಆ ಚಿತ್ರದಲ್ಲಿ ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಬಿಗ್ ಬಾಸ್ 15ನ್ನೂ ಸಲ್ಮಾನ್ ನಡೆಸಿಕೊಡುತ್ತಿದ್ದಾರೆ.
ಇದನ್ನೂ ಓದಿ:
Published On - 9:54 am, Sat, 8 January 22