ಸೂಪರ್ ಸ್ಟಾರ್ ನಟರ ಸಿನಿಮಾಗಳು ಮೊದಲೆರಡು ದಿನದಲ್ಲೇ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ ಅದನ್ನು ದೊಡ್ಡ ಗೆಲುವು ಎನ್ನಬಹುದು. ಸಾಮಾನ್ಯವಾಗಿ ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್, ಯಶ್ ಮುಂತಾದ ಸ್ಟಾರ್ ಕಲಾವಿದರ ಸಿನಿಮಾಗಳಿಂದ ಈ ರೀತಿಯ ಕಲೆಕ್ಷನ್ ನಿರೀಕ್ಷಿಸಲಾಗುತ್ತದೆ. ಪ್ರತಿ ಬಾರಿಯೂ ಇಷ್ಟೇ ಪ್ರಮಾಣದಲ್ಲಿ ಕಮಾಯಿ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಮೊದಲ ದಿನ ಸಾಧಾರಣ ಕಲೆಕ್ಷನ್ (Box Office Collection) ಮಾಡಿತು. ಆದರೆ ನಂತರದ ದಿನಗಳಲ್ಲಿ ಚೇತರಿಕೆ ಕಂಡಿದೆ. ವೀಕೆಂಡ್ನಲ್ಲಿ ಉತ್ತಮ ಕಮಾಯಿ ಮಾಡಿದೆ. ಅಷ್ಟೇ ಅಲ್ಲದೇ, 4ನೇ ದಿನ ಕೂಡ ಬಾಕ್ಸ್ ಆಫೀಸ್ನಲ್ಲಿ ಅಬ್ಬರ ಮುಂದುವರಿದಿದೆ. ಹಾಗಾಗಿ ಈ ಸಿನಿಮಾ ಶೀಘ್ರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಂಜಾನ್ ಸಂದರ್ಭದಲ್ಲಿ (ಏಪ್ರಿಲ್ 21) ರಿಲೀಸ್ ಆಯಿತು. ಮೊದಲ ದಿನವಾದ ಶುಕ್ರವಾರ ಈ ಚಿತ್ರ 15 ಕೋಟಿ ರೂಪಾಯಿ ಗಳಿಕೆ ಮಾಡಿತು. ಶನಿವಾರ (ಏಪ್ರಿಲ್ 23) ಬರೋಬ್ಬರಿ 25.75 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಿತು. ಈ ಸಿನಿಮಾ ಭಾನುವಾರ 26.61 ಕೋಟಿ ರೂಪಾಯಿ ಹಾಗೂ ಸೋಮವಾರ 10.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 78.34 ಕೋಟಿ ರೂಪಾಯಿ ದಾಟಿದೆ.
#KisiKaBhaiKisiKiJaan hits double digits on make-or-break Mon… Declines at premium plexes, but fantastic beyond metros and single screens [better than Fri *at places*], despite weekday ticket rates… Fri 15.81 cr, Sat 25.75 cr, Sun 26.61 cr, Mon 10.17 cr. Total: ₹ 78.34 cr.… pic.twitter.com/aeZIbfj4Mc
— taran adarsh (@taran_adarsh) April 25, 2023
ಸೋಮವಾರದ ಕಲೆಕ್ಷನ್ ಎಷ್ಟಾಗುತ್ತದೆ ಎಂಬುದರ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗುತ್ತದೆ. ಹಾಗಾಗಿ 4ನೇ ದಿನದ ಗಳಿಕೆ ತುಂಬ ಮುಖ್ಯವಾಗುತ್ತದೆ. ಈ ಪರೀಕ್ಷೆಯಲ್ಲಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಪಾಸ್ ಆಗಿದೆ. ಒಟ್ಟು ಕಲೆಕ್ಷನ್ 100 ಕೋಟಿ ರೂಪಾಯಿ ಗಡಿ ಮುಟ್ಟಲು ಇನ್ನು 22 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಪ್ರತಿ ದಿನ 10+ ಕೋಟಿ ರೂಪಾಯಿ ಗಳಿಕೆ ಆದರೆ ಈ ಸಿನಿಮಾ ಸೂಪರ್ ಹಿಟ್ ಪಟ್ಟಿಗೆ ಸೇರಿಕೊಳ್ಳಲಿದೆ.
Salman Khan: ಒಂದು ದಿನದ ಮಟ್ಟಿಗೆ ತಮ್ಮ ಪ್ರೀತಿಯ ವಸ್ತುವನ್ನು ಆಮಿರ್ ಖಾನ್ಗೆ ನೀಡಿದ ಸಲ್ಮಾನ್ ಖಾನ್
‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾಗೆ ಫರ್ಹಾದ್ ಸಮ್ಜಿ ಅವರು ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. ದಗ್ಗುಬಾಟಿ ವೆಂಕಟೇಶ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:41 pm, Tue, 25 April 23