‘ನಿನಗೆ ಏನಾಗಬಹುದು ಎಂದು ಯೋಚಿಸು’; ವಿಕ್ಕಿ ಮದುವೆ ಆಗಲು ಹೊರಟ ಕತ್ರಿನಾಗೆ ಸಲ್ಲು ಸಲಹೆ?

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ವಿಚಾರದ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಡಿಸೆಂಬರ್​ ತಿಂಗಳಲ್ಲಿ ಇಬ್ಬರೂ ಅದ್ದೂರಿಯಾಗಿ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ವಿಚಾರವನ್ನು ಅವರು ಎಲ್ಲಿಯೂ ಹೇಳಿಕೊಂಡಿಲ್ಲ.

‘ನಿನಗೆ ಏನಾಗಬಹುದು ಎಂದು ಯೋಚಿಸು’; ವಿಕ್ಕಿ ಮದುವೆ ಆಗಲು ಹೊರಟ ಕತ್ರಿನಾಗೆ ಸಲ್ಲು ಸಲಹೆ?
ಸಲ್ಮಾನ್​-ಕತ್ರಿನಾ
Updated By: ರಾಜೇಶ್ ದುಗ್ಗುಮನೆ

Updated on: Nov 02, 2021 | 6:13 PM

ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಒಂದು ಕಾಲದಲ್ಲಿ ಪ್ರೀತಿಸುತ್ತಿದ್ದರು. ಆದರೆ, ಅವರ ಸಂಬಂಧ ಹೆಚ್ಚು ವರ್ಷ ನಡೆದಿಲ್ಲ. ಇಬ್ಬರೂ ಬೇರೆ ಆದರು. ಸಾಮಾನ್ಯವಾಗಿ ಪ್ರೀತಿ ಮುರಿದು ಬಿದ್ದ ನಂತರ ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಳ್ಳೋಕು ಇಷ್ಟಪಡುವುದಿಲ್ಲ. ಆದರೆ, ಸಲ್ಲು ಮತ್ತು ಕತ್ರಿನಾ ಒಳ್ಳೆಯ ಗೆಳೆಯರಾಗಿ ಮುಂದುವರಿದಿದ್ದಾರೆ. ಇಬ್ಬರೂ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈಗ ಮಾಜಿ ಪ್ರೇಯಸಿ ಬೇರೆಯವರನ್ನು ಮದುವೆ ಆಗುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಸಲ್ಮಾನ್​ ಖಾನ್​ ಕತ್ರಿನಾಗೆ ಕಿವಿಮಾತು ಹೇಳಿದ್ದಾರೆ!

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ವಿಚಾರದ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಡಿಸೆಂಬರ್​ ತಿಂಗಳಲ್ಲಿ ಇಬ್ಬರೂ ಅದ್ದೂರಿಯಾಗಿ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ವಿಚಾರವನ್ನು ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಈ ಕುರಿತು ನಾನಾ ಸುದ್ದಿಗಳು ಬಿತ್ತರ ಆಗುತ್ತಿವೆ. ಈ ಕುರಿತು ಇವರಿಂದ ಸ್ಪಷ್ಟನೆ ಸಿಕ್ಕಿಲ್ಲ. ಈ ಮಧ್ಯೆ ವಿಡಿಯೋ ಒಂದು ವೈರಲ್ ಆಗಿದೆ.

ಬಿಗ್​ ಬಾಸ್ 15ನೇ ಸೀಸನ್ ಆರಂಭವಾಗಿ ಹಲವು ವಾರಗಳು ಕಳೆದಿವೆ. ಪ್ರತೀ ವಾರಾಂತ್ಯದಲ್ಲಿ ಸಲ್ಮಾನ್​ ಖಾನ್​ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಕಳೆದ ವಾರ ಕತ್ರಿನಾ ಅತಿಥಿಯಾಗಿ ಬಿಗ್​ ಬಾಸ್​​ ವೇದಿಕೆಗೆ ಆಗಮಿಸಿದ್ದರು. ಈ ವೇಳೆ ಕತ್ರಿನಾ ಒಂದು ಹಾಡು ಹೇಳುವಂತೆ ಸಲ್ಮಾನ್​ ಖಾನ್​ ಬಳಿ ಕೋರಿದ್ದಾರೆ. ಆಗ ಸಲ್ಲು, ‘ತೇರಾ ಕ್ಯಾ ಹೋಗಾ.. ಸೋಚೋ ತೋ ಜರಾ’ (ನಿನಗೆ ಏನಾಗಬಹುದು ಎಂದು ಯೋಚಿಸು) ಎಂಬ ಹಾಡನ್ನು ಹಾಡಿದ್ದಾರೆ.

ಈ ಪ್ರೋಮೋ ಸಾಕಷ್ಟು ವೈರಲ್​ ಆಗಿದೆ. ವಿಕ್ಕಿ ಅವರನ್ನು ಕತ್ರಿನಾ ಮದುವೆ ಆಗುತ್ತಿರುವ ವಿಚಾರ ಸಲ್ಮಾನ್​ ಖಾನ್​ಗೂ ತಿಳಿದಿದೆ. ಈ ಕಾರಣಕ್ಕೆ ಅವರು ಈ ರೀತಿ ಹೇಳಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಆದರೆ, ಇದರ ಹಿಂದಿನ ಉದ್ದೇಶ ಇನ್ನೂ ಸರಿಯಾಗಿ ತಿಳಿದುಬಂದಿಲ್ಲ.

ಇದನ್ನೂ ಓದಿ: ಕತ್ರಿನಾ-ವಿಕ್ಕಿ ಕೌಶಲ್ ಕಾರಿನ ನಂಬರ್​ ಪ್ಲೇಟ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್​; ಅದರಲ್ಲಿ ಅಂಥದ್ದೇನಿದೆ?

ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆಗೆ ದಿನಾಂಕ, ಸ್ಥಳ ಫಿಕ್ಸ್​? ರಾಯಲ್​ ವೆಡ್ಡಿಂಗ್​ ಬಗ್ಗೆ ಇಲ್ಲಿದೆ ವಿವರ