ಸುಮಾರು 9 ವರ್ಷಗಳ ಹಿಂದೆ ರಿಲೀಸ್ ಆದ ಲವ್ ಸ್ಟೋರಿ ಚಿತ್ರ ‘ಸನಮ್ ತೇರಿ ಕಸಮ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಹಿಟ್ ಎನಿಸಿಕೊಂಡಿತ್ತು. 25 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರ ಆಗಿನ ಕಾಲದಲ್ಲಿ ಬಾಚಿಕೊಂಡಿದ್ದು, 16 ಕೋಟಿ ರೂಪಾಯಿ ಮಾತ್ರ. ಅಂದರೆ ಇದು ನಿರ್ಮಾಪಕರಿಗೆ ನಷ್ಟವನ್ನೇ ಉಂಟು ಮಾಡಿತ್ತು. ಆದರೆ, ಈಗ ಚಿತ್ರ ರೀ-ರಿಲೀಸ್ ಆಗಿ ಯಶಸ್ಸು ಕಾಣುವ ಸೂಚನೆಯನ್ನು ಕೊಟ್ಟಿದೆ.
9 ವರ್ಷಗಳ ಹಿಂದೆ ‘ಸನಮ್ ತೇರಿ ಕಸಮ್’ ಚಿತ್ರವನ್ನು ಜನರು ಅಷ್ಟಾಗಿ ಇಷ್ಟಪಟ್ಟಿರಲಿಲ್ಲ. ರೊಮ್ಯಾಂಟಿಕ್ ಡ್ರಾಮಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಲ್ಲಿಗಲ್ಲಿಗೆ ಆಗಿತ್ತು. ಹರ್ಷವರ್ಧನ್ ರಾಣೆ ಹಾಗೂ ಪಾಕ್ ನಟಿ ಮರ್ವಾ ಹೊಕಾನೆ ಈ ಚಿತ್ರದಲ್ಲಿ ನಟಿಸಿದ್ದರು. ಇದು ವರ್ಮಾ ಅವರ ಮೊದಲ ಹಿಂದಿ ಸಿನಿಮಾ ಆಗಿತ್ತು. ಆ ಬಳಿಕ ಚಿತ್ರವನ್ನು ಯೂಟ್ಯೂಬ್ ಹಾಗೂ ಒಟಿಟಿಯಲ್ಲಿ ನೋಡಿ ಜನರು ಇಷ್ಟಪಟ್ಟರು. ಈಗ ಪ್ರೇಮಿಗಳ ದಿನಕ್ಕೆ ಒಂದು ವಾರ ಇರುವಾಗ ಸಿನಿಮಾ (ಫೆಬ್ರವರಿ 7) ರೀ ರಿಲೀಸ್ ಕಂಡಿದೆ.
ರಾಧಿಕಾ ರಾವ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರೀ ರಿಲೀಸ್ ಆದ ಮೊದಲ ದಿನ ಈ ಚಿತ್ರ 5 ಕೋಟಿ ರೂಪಾಯಿ ಬಾಚಿಕೊಂಡಿತು. ಎರಡನೇ ದಿನ 9 ಕೋಟಿ ರೂಪಾಯಿ ಗಳಿಸಿದೆ. ಬಾನುವಾರ ಈ ಚಿತ್ರ 5.75 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಮೂರೇ ದಿನಕ್ಕೆ 15 ಕೋಟಿ ರೂಪಾಯಿಯಷ್ಟು ಚಿತ್ರ ಗಳಿಸಿ ಸಾಧನೆ ಮಾಡಿದೆ.
ಸದ್ಯ ಹೀಗೆಯೇ ಮುಂದುವರಿದರೆ ಚಿತ್ರದ ಮೂಲ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಲಿದೆ. ಪ್ರೇಮಿಗಳ ದಿನ ಹಾಗೂ ಈ ವಾರಂತ್ಯದಲ್ಲಿ ಚಿತ್ರ ಮತ್ತಷ್ಟು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಈ ಮೂಲಕ ಒಟ್ಟಾರೆ ಗಳಿಕೆ ಎಲ್ಲಾ ದಾಖಲೆಗಳನನು ಮುರಿದು ಸಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ತಾಯಿ ಜೊತೆ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ವಿಜಯ್ ದೇವರಕೊಂಡ
‘ಸನಮ್ ತೇರಿ ಕಸಮ್’ ಚಿತ್ರದ ನಾಯಕಿ ಪಕ್ಕಾ ಸಂಪ್ರದಾಯಸ್ತ ಕುಟುಂಬದಿಂದ ಬಂದವಳು. ತಂದೆ ಮಗಳನ್ನು ತುಂಬಾನೇ ಸ್ಟ್ರಿಕ್ಟ್ ಆಗಿ ಬೆಳೆಸಿರುತ್ತಾನೆ. ಇದೇ ಕಟ್ಟಡದಲ್ಲಿ ಕಥಾ ನಾಯಕ ಕೂಡ ಇರುತ್ತಾನೆ. ಆತ ಚಿಲ್ ಆಗಿರೋ ವ್ಯಕ್ತಿ. ಇಬ್ಬರ ಮಧ್ಯೆ ಪ್ರೀತಿ ಬೆಳೆಯುತ್ತದೆ. ಅದು ಹೇಗೆ? ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.