ಈ ಫೋಟೋದಲ್ಲಿರೋದು ಸ್ಟಾರ್ ಕಿಡ್, ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ; ಯಾರೆಂದು ಗುರುತಿಸುತ್ತೀರಾ?

ಸೆಲೆಬ್ರಿಟಿಗಳು ತಮ್ಮ ಬಾಲ್ಯದ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದು ಅಭಿಮಾನಿಗಳ ಪಾಲಿಗೆ ಹಬ್ಬ ಎನಿಸಿದೆ. ಈ ಫೋಟೋದಲ್ಲಿರೋದು ಸ್ಟಾರ್ ಕಿಡ್​. ಅವರು ಯಾರು ಎಂದು ಪತ್ತೆ ಹಚ್ಚೋಕೆ ನಿಮ್ಮ ಬಳಿ ಸಾಧ್ಯವೇ? ಗೊತ್ತಾದರೆ ಹೇಳಿ.

ಈ ಫೋಟೋದಲ್ಲಿರೋದು ಸ್ಟಾರ್ ಕಿಡ್, ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ; ಯಾರೆಂದು ಗುರುತಿಸುತ್ತೀರಾ?
ಈ ಫೋಟೋದಲ್ಲಿರೋದು ಸ್ಟಾರ್ ಕಿಡ್, ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ

Updated on: May 13, 2024 | 6:53 AM

ಮೇ 12 ತಾಯಂದಿರ ದಿನಾಚರಣೆ. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ತಾಯಂದಿರ ಫೋಟೋ ಹಂಚಿಕೊಂಡಿದ್ದಾರೆ. ಕೆಲವು ಸೆಲೆಬ್ರಿಟಿಗಳು ತಮ್ಮ ಬಾಲ್ಯದ ಫೋಟೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ಹಬ್ಬ ಎನಿಸಿದೆ. ಈ ಫೋಟೋದಲ್ಲಿರೋದು ಸ್ಟಾರ್ ಕಿಡ್​. ಅವರು ಯಾರು ಎಂದು ಪತ್ತೆ ಹಚ್ಚೋಕೆ ನಿಮ್ಮ ಬಳಿ ಸಾಧ್ಯವೇ? ಅವರು ಬೇರಾರೂ ಅಲ್ಲ ನಟಿ ಸಾರಾ ಅಲಿ ಖಾನ್ (Sara Ali Khan).

ಸಾರಾ ಅಲಿ ಖಾನ್ ಅವರು ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ದಂಪತಿಯ ಮಗಳು. ಇವರ ತಾಯಿಯಿಂದ ಸೈಫ್ ದೂರವೇ ಇದ್ದಾರೆ. ಈ ಬಗ್ಗೆ ಸಾರಾಗೆ ಬೇಸರ ಇದೆ. ಹೀಗಾಗಿ, ಅಮ್ಮನ ನೋಡಿಕೊಳ್ಳುವ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ. ಏನೇ ಆದರೂ ಅಮ್ಮನ ಬಗ್ಗೆ ಅವರೇ ಕಾಳಜಿ ವಹಿಸುತ್ತಾರೆ. ಸಾರಾ ಅಮ್ಮನ ದಿನಾಚರಣೆ ವೇಳೆ ತಾಯಿಯ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೇವಸ್ಥಾನದ ಎದುರು ಸಿಹಿ ಹಂಚಿ, ‘ಫೋಟೋ ತೆಗೆಯಬೇಡಿ’ ಎಂದು ಸಾರಾ ಅಲಿ ಖಾನ್​

ಸಾರಾ ಅಲಿ ಖಾನ್ ಅವರು ಒಂದು ಸೈಡ್​ನಲ್ಲಿ ಇದ್ದರೆ ಮಧ್ಯದಲ್ಲಿ ಅವರ ತಮ್ಮ ಇಬ್ರಾಹಿಂ ಅಲಿ ಖಾನ್ ಇದ್ದಾರೆ. ಮತ್ತೊಂದು ಕಡೆ ಅವರ ತಾಯಿ ಅಮೃತಾ ಸಿಂಗ್ ಇದ್ದಾರೆ. ಸಾರಾ ಅಲಿ ಖಾನ್ ಆಗ ಹೇಗಿದ್ದರೋ ಈಗಲೂ ಹಾಗೆಯೇ ಕಾಣಿಸುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಫೋಟೋ ಫ್ಯಾನ್ಸ್​ಗೆ ಸಖತ್ ಇಷ್ಟ ಆಗಿದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ ಸಾರಾ ಅಲಿ ಖಾನ್ ಅವರ ನಟನೆಯ ‘ಮರ್ಡರ್ ಮುಬಾರಕ್’ ಹಾಗೂ ಯೇ ವತನ್ ಮೆರೇ ವತನ್’ ಸಿನಿಮಾಗಳು ಈ ವರ್ಷ ರಿಲೀಸ್ ಆಗಿದೆ. ‘ಸ್ಕೈ ಫೋರ್ಸ್’ ಮೊದಲಾದ ಸಿನಿಮಾಗಳಲ್ಲಿ ಅವರು ಬ್ಯುಸಿ ಇದ್ದಾರೆ. ‘ಕೇದಾರ್​ನಾಥ್’, ‘ಸಿಂಬಾ’ ಸಿನಿಮಾಗಳ ಮೂಲಕ ಅವರು ಗೆಲುವಿನ ನಗೆ ಬೀರಿದ್ದಾರೆ. ರಿಲೇಶನ್​ಶಿಪ್ ಕಾರಣಕ್ಕೂ ಸಾರಾ ಅಲಿ ಖಾನ್ ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಇತ್ತೀಚೆಗೆ ಅವರು ಮುಂಬೈ ಬೀದಿಗಳಲ್ಲಿ ಶಾಪಿಂಗ್ ಮಾಡಿ ಸುದ್ದಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:52 am, Mon, 13 May 24