ಐಶಾರಾಮಿ ಕಾರು ಖರೀದಿಸಿದ ನಟಿ ಮಾಧುರಿ ದೀಕ್ಷಿತ್
ಬಾಲಿವುಡ್ನ ಜನಪ್ರಿಯ ನಟಿ, ನೃತ್ಯಗಾರ್ತಿ ಮಾಧುರಿ ದೀಕ್ಷಿತ್ ಸಿನಿಮಾಗಳಿಗಿಂತಲೂ ಹೆಚ್ಚಾಗಿ ರಿಯಾಲಿಟಿ ಶೋ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಾಧುರಿ ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ.

ಬಾಲಿವುಡ್ನ ಹಿರಿಯ ನಟಿ ಮಾಧುರಿ ದೀಕ್ಷಿತ್ (Madhuri Dixit) ಈಗಲೂ ಬೇಡಿಕೆ ಉಳಿಸಿಕೊಂಡಿರುವ ನಟಿ ಹಾಗೂ ರಿಯಾಲಿಟಿ ಶೋ ಜಡ್ಜ್. 90ರ ದಶಕದಲ್ಲಿ ಮೋಡಿಯನ್ನೇ ಮಾಡಿದ್ದ ಮಾಧುರಿ ದೀಕ್ಷಿತ್, ಕೋಟ್ಯಂತರ ಜನರ ಹೃದಯ ಗೆದ್ದಿದ್ದರು. 1999 ರಲ್ಲಿ ವೈದ್ಯ ಶ್ರೀರಾಮ್ ನೆನೆ ಅವರೊಟ್ಟಿಗೆ ವಿವಾಹವಾದರು. ಅದಾದ ಬಳಿಕ ಕೆಲವೇ ವರ್ಷ ನಟನೆಯಲ್ಲಿದ್ದರು ಬಳಿಕ ನಟನೆಯಿಂದ ದೂರಾಗಿ ಭಾರತವನ್ನೇ ತೊರೆದು ವಿದೇಶದಲ್ಲಿ ಸೆಟಲ್ ಆದರು. ಆದರೆ ಭಾರತಕ್ಕೆ ಮರಳಿ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡ ಮಾಧುರಿ ಈಗ ಜನಪ್ರಿಯ ರಿಯಾಲಿಟಿ ಶೋ ಜಡ್ಜ್ ಆಗಿರುವ ಜೊತೆಗೆ ಸಿನಿಮಾ, ವೆಬ್ ಸರಣಿಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ.
ಮಾಧುರಿ ದೀಕ್ಷಿತ್ ಇತ್ತೀಚೆಗಷ್ಟೆ ತಮಗಾಗಿ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ವಿಶ್ವದ ಲಕ್ಷುರಿ ಬ್ರ್ಯಾಂಡ್ಗಳಲ್ಲಿ ಒಂದಾಗಿರುವ ರೇಂಜ್ ರೋವರ್ ಆಟೊಬಯೋಗ್ರಫಿ ಎಲ್ಡಬ್ಲುಬಿ 3.0 ಕಾರನ್ನು ಮಾಧರು ದೀಕ್ಷಿತ್ ಖರೀದಿ ಮಾಡಿದ್ದಾರೆ. ಹೊಸ ಕಾರಿನಲ್ಲಿ ಮಾಧುರಿ ದೀಕ್ಷಿತ್ ಹಾಗೂ ಅವರ ಪತಿ ಶ್ರೀರಾಮ್ ನೇನೆ ಪಾರ್ಟಿಗಳನ್ನು, ಕಾರ್ಯಕ್ರಮಗಳನ್ನು ಅಟೆಂಡ್ ಮಾಡುತ್ತಿದ್ದಾರೆ.
ಮಾಧುರಿ ದೀಕ್ಷಿತ್ ಖರೀದಿ ಮಾಡಿರುವ ರೇಂಜ್ ರೋವರ್ ಆಟೊಬಯೋಗ್ರಫಿ ಎಲ್ಡಬ್ಲುಬಿ 3.0 ಕಾರಿನ ಬೆಲೆ ಸುಮಾರು ನಾಲ್ಕು ಕೋಟಿ ರೂಪಾಯಿಗಳು. ಈ ಕಾರು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಅತ್ಯಂತ ವೇಗದ ಹಾಗೂ ಅತ್ಯಂತ ಸುರಕ್ಷಿತ್ ಕಾರುಗಳಲ್ಲಿ ಇದೂ ಸಹ ಒಂದು. ಜೊತೆಗೆ ವಿಶ್ವದ ಅತ್ಯುತ್ತಮ ಮತ್ತು ಹೊಸ ತಂತ್ರಜ್ಞಾನಗಳನ್ನು ಈ ಕಾರು ಒಳಗೊಂಡಿದೆ. 360 ಡಿಗ್ರಿ ಕ್ಯಾಮೆರಾ, ಸೀಟ್ ವೆಂಟಿಲೇಟರ್ ಸೇರಿದಂತೆ ಹಲವು ನವೀನ ತಂತ್ರಜ್ಞಾನಗಳು ಈ ಕಾರಿನಲ್ಲಿದೆ.
ಇದನ್ನೂ ಓದಿ:ಮಾಧುರಿ ದೀಕ್ಷಿತ್ ಈ ರಾಜಮನೆತನದ ಸೊಸೆ ಆಗಬೇಕಿತ್ತು; ಒಂದು ಅಪೂರ್ಣ ಪ್ರೇಮಕಥೆ
ಮಾಧುರಿ ದೀಕ್ಷಿತ್ ಬಳಿ ಇನ್ನೂ ಹಲವು ಐಶಾರಾಮಿ ಕಾರು ಸಂಗ್ರಹವಿದೆ. ಸುಮಾರು 3 ಕೋಟಿ ಬೆಲೆಯ ಮರ್ಸಿಡೀಸ್ ಮೇಬ್ಯಾಕ್ ಕಾರು ಮಾಧರು ದೀಕ್ಷಿತ್ ಬಳಿ ಇದೆ. ಅದರ ಜೊತೆಗೆ ನಾಲ್ಕು ಕೋಟಿ ಬೆಲೆಯ ಪೋರ್ಶೆ 911 ಟರ್ಬೊ ಎಸ್ ಕಾರು ಸಹ ಇದೆ. ಇವುಗಳ ಜೊತೆಗೆ ಸಾಧಾರಣ ಎನ್ನಬಹುದಾದ, ಎಕ್ಸ್ಯುವಿ 700, ಟೊಯೊಟಾ ಇನ್ನೋವಾ ಹಾಗೂ ಟೊಯೊಟಾ ವೆಲ್ಫೈರ್ ಇನ್ನೂ ಕೆಲವು ಕಾರುಗಳು ಸಹ ಇವೆ.
ಮಾಧುರಿ ದೀಕ್ಷಿತ್ ಇದೀಗ ಖರೀದಿ ಮಾಡಿರುವ ರೇಂಜ್ ರೋವರ್ ಆಟೊಬಯೋಗ್ರಫಿ ಎಲ್ಡಬ್ಲುಬಿ 3.0 ಕಾರಿಗೆ 0006 ಸಂಖ್ಯೆ ಹಾಕಿಸಿದ್ದಾರೆ. ಇದು ಫ್ಯಾನ್ಸಿ ಸಂಖ್ಯೆ ಆಗಿದ್ದು ಈ ಸಂಖ್ಯೆಯನ್ನು ತಮ್ಮ ಕಾರಿಗೆ ಪಡೆಯಲು ಹೆಚ್ಚುವರಿ ಹಣವನ್ನು ಮಾಧುರಿ ದೀಕ್ಷಿತ್ ತೆತ್ತಿದ್ದಾರೆ. ಮಾಧುರಿ ಪ್ರಸ್ತುತ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋನ ಜಡ್ಜ್ ಆಗಿದ್ದಾರೆ. ಕೆಲವು ಸಿನಿಮಾ. ವೆಬ್ ಸರಣಿಗಳಲ್ಲಿಯೂ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




