
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಅಕ್ಟೋಬರ್ 22) 57ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರಿಗೆ ಬಿಜೆಪಿ ಕಾರ್ಯಕರ್ತರು, ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದವರಿಂದ ಶುಭಾಶಯ ಹರಿದುಬಂದಿದೆ. ಬಾಲಿವುಡ್ನ ಅನೇಕರು ಅಮಿತ್ ಶಾಗೆ ವಿಶ್ ಮಾಡಿದ್ದಾರೆ. ಅದೇ ರೀತಿ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಕೂಡ ಅಮಿತ್ ಶಾಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಇದು ಟ್ರೋಲ್ ಮಂದಿಗೆ ಆಹಾರವಾಗಿದೆ.
ಅಮಿತ್ ಶಾಗೆ ಜನ್ಮದಿನದ ವಿಶ್ ಮಾಡುವುದಕ್ಕೂ ಸಾರಾ ಟ್ರೋಲ್ ಆಗುವುದಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ನಿಮ್ಮದೇ? ಅದಕ್ಕೆ ಇಲ್ಲಿದೆ ಉತ್ತರ. ಸದ್ಯ, ಬಾಲಿವುಡ್ನಲ್ಲಿ ಡ್ರಗ್ಸ್ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆರ್ಯನ್ ಖಾನ್ ಅವರನ್ನು ಬಂಧಿಸಿದ ನಂತರ ವಾಟ್ಸಾಪ್ ಚಾಟ್ ಪರಿಶೀಲಿಸಲಾಗಿದೆ. ಈ ವೇಳೆ ಸಾಕಷ್ಟು ಹೆಸರುಗಳು ಹೊರ ಬಂದಿವೆ. ಈಗಾಗಲೇ ಯುವ ನಟಿ ಅನನ್ಯಾ ಪಾಂಡೆಯನ್ನು ಕರೆದು ವಿಚಾರಣೆ ಮಾಡಲಾಗಿದೆ. ಇದೇ ರೀತಿ ಇನ್ನೂ ಅನೇಕರ ಮನೆ ಮೇಲೆ ದಾಳಿ ನಡೆಯಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.
ಸಾರಾಗೂ ತಮ್ಮ ಮನೆಯ ಮೇಲೆ ದಾಳಿ ನಡೆಯುವ ಭಯ ಶುರುವಾಗಿದ್ದು, ಈ ಕಾರಣಕ್ಕೆ ಅವರು ಅಮಿತ್ ಶಾಗೆ ವಿಶ್ ಮಾಡಿದ್ದಾರೆ. ಈ ಮೂಲಕ ಲಿಸ್ಟ್ನಿಂದ ತಮ್ಮ ಹೆಸರು ತೆಗೆಯುವಂತೆ ಅವರು ಪರೋಕ್ಷವಾಗಿ ಮನವಿ ಮಾಡಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಸದ್ಯ, ಅವರ ಟ್ವೀಟ್ ಕಮೆಂಟ್ ಬಾಕ್ಸ್ನಲ್ಲಿ ಈ ಬಗ್ಗೆ ಸಾಕಷ್ಟು ಕಮೆಂಟ್ಗಳನ್ನು ಮಾಡಲಾಗುತ್ತಿದೆ.
ಇದನ್ನೂ ಓದಿ: Ananya Panday: ‘ಶಾರುಖ್ ಖಾನ್ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್ ಸುಳಿಯಲ್ಲಿ ನಟಿ
ಆರ್ಯನ್ ಭೇಟಿ ಮಾಡಿದ ಶಾರುಖ್ ಖಾನ್ ತೆಗೆದುಕೊಂಡ್ರು ಕಠಿಣ ನಿರ್ಧಾರ; ಪರಿಣಾಮ ಯಾರ ಮೇಲೆ?