ಹಿಜಾಬ್ ಕುರಿತ ಚರ್ಚೆ ದೇಶವ್ಯಾಪಿ ನಡೆಯುತ್ತಿರುವಂತೆಯೇ ಬಾಲಿವುಡ್ ಚಿತ್ರರಂಗ ಕೂಡ ಈ ಕುರಿತು ಚರ್ಚೆಯಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಹಲವು ಚಿತ್ರತಾರೆಯರು ಹಿಜಾಬ್ ಧರಿಸುವುದರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಕಂಗನಾ ರಣಾವತ್ (Kangana Ranaut) ಕೂಡ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಕಂಗನಾ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಹಿರಿಯ ನಟಿ ಶಬಾನಾ ಅಜ್ಮಿ (Shabana Azmi) ಕಂಗನಾ ಹೇಳಿಕೆಯನ್ನು ಉಲ್ಲೇಖಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕಂಗನಾ ಹಾಗೂ ಬರಹಗಾರ, ಚಿತ್ರ ಸಾಹಿತಿ ಜಾವೇದ್ ಅಖ್ತರ್ ನಡುವೆ ಮೊದಲಿನಿಂದಲೂ ಹಲವು ವಿಚಾರಗಳಿಗೆ ಬಿಸಿಬಿಸಿ ಚರ್ಚೆಯಾಗಿದೆ. ಇತ್ತೀಚೆಗೆ ಜಾವೇದ್ ಅಖ್ತರ್ (Javed Akhtar) ಹಿಜಾಬ್ ಹಾಗೂ ಬುರ್ಖಾ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಕಂಗನಾ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಜಾವೇದ್ ಪತ್ನಿ ಅಬಾನಾ ಅಜ್ಮಿ, ಕಂಗನಾ ಹೇಳಿಕೆಯನ್ನು ಉಲ್ಲೇಖಿಸಿ, ಪ್ರತಿಕ್ರಿಯೆ ನೀಡಿದ್ದಾರೆ.
ಜಾವೇದ್ ಅಖ್ತರ್ ಹೇಳಿದ್ದೇನು?:
ಬುಧವಾರ ಟ್ವೀಟ್ವ ಮಾಡಿದ್ದ ಜಾವೇದ್ ಅಖ್ತರ್, ತಾವು ಮೊದಲಿನಿಂದಲೂ ಹಿಜಾಬ್ ಅಥವಾ ಬುರ್ಖಾಗಳ ಪರವಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಅಲ್ಲದೇ ಈ ನಿಲುವಿನ ಪರವಾಗಿ ಈಗಲೂ ನಿಲ್ಲುತ್ತೇನೆ ಎಂದು ಅವರು ಹೇಳಿದ್ದರು. ಆದರೆ ಇವುಗಳ ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.
I have never been in favour of Hijab or Burqa. I still stand by that but at the same time I have nothing but deep contempt for these mobs of hooligans who are trying to intimidate a small group of girls and that too unsuccessfully. Is this their idea of “MANLINESS” . What a pity
— Javed Akhtar (@Javedakhtarjadu) February 10, 2022
ಕಂಗನಾ ಪೋಸ್ಟ್ನಲ್ಲಿ ಏನಿತ್ತು?:
ಕಂಗನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆನಂದ್ ರಂಗನಾಥನ್ ಟ್ವೀಟ್ ಒಂದನ್ನು ಉದಾಹರಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇರಾನ್ 1973ರಲ್ಲಿ ಇದ್ದ ಫೋಟೋವನ್ನು ಹಂಚಿಕೊಂಡಿದ್ದ ಆನಂದ್ ರಂಗನಾಥನ್, ಆಗ ಮಹಿಳೆಯರು ಧರಿಸಿದ್ದ ದಿರಿಸು ಹಾಗೂ ಈಗ ಬುರ್ಖಾ ಧರಿಸುತ್ತಿರುವುದರ ಚಿತ್ರ ಹಂಚಿಕೊಂಡಿದ್ದರು. ಇದನ್ನು ಉಲ್ಲೇಖಿಸಿದ್ದ ಕಂಗನಾ, ‘ಧೈರ್ಯವಿರುವವರು ಅಫ್ಘಾನಿಸ್ತಾನಕ್ಕೆ ಹೋಗಿ ಬುರ್ಖಾ ತೆಗೆಯಲಿ’ ಎಂದಿದ್ದರು. ಅಲ್ಲದೇ ಸ್ವತಂತ್ರದ ಕುರಿತು ಎಲ್ಲರೂ ಯೋಚಿಸಿ, ಮತ್ತೆ ಬಂಧನದ (ಸಂಕೋಲೆ) ಕುರಿತಲ್ಲ ಎಂದು ಅವರು ಹೇಳಿದ್ದರು.
ಕಂಗನಾ ಹೇಳಿಕೆಗೆ ಶಬಾನಾ ಅಜ್ಮಿ ಪ್ರತಿಕ್ರಿಯೆ ಏನು?:
ಕಂಗನಾ ಇನ್ಸ್ಟಾಗ್ರಾಂ ಸ್ಟೋರಿಯನ್ನು ಉಲ್ಲೇಖಿಸಿರುವ ಶಬಾನಾ ಅಜ್ಮಿ, ಕಂಗನಾ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ. ಅಫ್ಘಾನಿಸ್ತಾನಕ್ಕೆ ಹೋಗಿ ಬುರ್ಖಾ ತೆಗೆದು ಧೈರ್ಯ ತೋರಿಸಲಿ ಎಂದಿದ್ದ ಕಂಗನಾರ ಮಾತನ್ನು ಪ್ರಶ್ನಿಸಿರುವ ಜಾವೇದ್ ಅಖ್ತರ್ ಪತ್ನಿ ಶಬಾನಾ, ಕಂಗನಾಗೆ ಟಾಂಗ್ ನೀಡಿದ್ದಾರೆ. ‘ಅಫ್ಘಾನಿಸ್ತಾನ ಧಾರ್ಮಿಕ ನಿಯಮಗಳ ಮೇಲೆ ನಿಯಮಗಳನ್ನು ಹೊಂದಿರುವ ರಾಷ್ಟ್ರ. ಆದರೆ ನಾನು ಪರೀಕ್ಷಿಸಿದಾಗ ಭಾರತವು ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿತ್ತು’ ಎಂದು ಹೇಳಿದ್ದಾರೆ. ಶಬಾನಾ ಹೇಳಿಕೆಗೆ ಅವರ ಅಭಿಮಾನಿಗಳು ದನಿಗೂಡಿಸಿದ್ದು, ಕಂಗನಾ ಅವರೊಂದಿಗೆ ವಾದ ಮಾಡಿ ಪ್ರಯೋಜನವಿಲ್ಲ ಎಂದು ಕಾಮೆಂಟ್ಗಳನ್ನು ಮಾಡಿದ್ದಾರೆ. ಹಲವರು ಶಬಾನಾ ಅವರ ಹೇಳಿಕೆಗೆ ವಿರೋಧವನ್ನೂ ವ್ಯಕ್ತಡಿಸಿದ್ದಾರೆ.
ಹಿಜಾಬ್ ವಿವಾದದ ಕುರಿತಂತೆ ಹಲವು ತಾರೆಯರು ತಮ್ಮ ಅಭಿಪ್ರಆಯಗಳನ್ನು ಹಂಚಿಕೊಂಡಿದ್ದಾರೆ. ಖ್ಯಾತ ನಟರಾದ ಕಮಲ್ ಹಾಸನ್, ರೀಚಾ ಛಡ್ಡಾ, ಸ್ವರಾ ಭಾಸ್ಕರ್, ರಮ್ಯಾ ಸೇರಿದಂತೆ ಹಲವು ತಾರೆಯರು ಈ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ:
ಹಿಜಾಬ್ ವಿವಾದ: ಡಾ.ಎ.ಪಿ.ಜೆ ಅಬ್ದುಲ್ ಕಲಾಂರ ಸಂದೇಶದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಲಾವಿದ