ಬಾಲಿವುಡ್ನ ‘ಬಾಕ್ಸ್ ಆಫೀಸ್ ಸುಲ್ತಾನ’ ಶಾರುಖ್ ಖಾನ್ (Shah Rukh Khan) ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 2023ರ ವರ್ಷ ಅವರ ಪಾಲಿಗೆ ನಿಜಕ್ಕೂ ಸ್ಪೆಷಲ್. ಈ ವರ್ಷ ಅವರು ನಟಿಸಿದ ‘ಪಠಾಣ್’ ಮತ್ತು ‘ಜವಾನ್’ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಅದರಿಂದಾಗಿ ಅವರ ಜನಪ್ರಿಯತೆ ಹೆಚ್ಚಿದೆ. ಭಾರತದ ಜನಪ್ರಿಯ ನಟರ ಪಟ್ಟಿಯಲ್ಲಿ (Most Popular Indian Actors List) ಶಾರುಖ್ ಖಾನ್ ಅವರಿಗೆ ನಂಬರ್ 1 ಸ್ಥಾನ ಸಿಕ್ಕಿದೆ. ಇದು ಅವರ ಅಭಿಮಾನಿಗಳ ಹೆಮ್ಮೆಗೆ ಕಾರಣ ಆಗಿದೆ. ಒರಮ್ಯಾಕ್ಸ್ ಮೀಡಿಯಾ (Ormax Media) ಸಮೀಕ್ಷೆ ನಡೆಸಿದೆ. ಸೆಪ್ಟೆಂಬರ್ 2023ರ ಪಟ್ಟಿಯನ್ನು ಈ ಸಂಸ್ಥೆ ಬಿಡುಗಡೆ ಮಾಡಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..
ಜನಪ್ರಿಯ ಟಾಪ್ 10 ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಅವರು ನಂಬರ್ 1 ಸ್ಥಾನದಲ್ಲಿ ಇದ್ದಾರೆ. ಈ ಪಟ್ಟಿಯಲ್ಲಿ ದಕ್ಷಿಣ ಭಾರತದ ನಟರೇ ಬಹುಪಾಲು ಸ್ಥಾನ ಪಡೆದುಕೊಂಡಿದ್ದಾರೆ. ಹಿಂದಿ ಚಿತ್ರರಂಗದ ನಟರ ಪೈಕಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರ ಹೆಸರು ಮಾತ್ರ ಇದೆ. ದಕ್ಷಿಣ ಭಾರತದ ಹೀರೋಗಳಾದ ಪ್ರಭಾಸ್, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್, ಮಹೇಶ್ ಬಾಬು, ಸೂರ್ಯ, ಅಜಿತ್ ಕುಮಾರ್ ಮತ್ತು ವಿಜಯ್ ಅವರು ಈ ಪಟ್ಟಿಯಲ್ಲಿ ಇದ್ದಾರೆ.
Ormax Stars India Loves: Most popular male film stars in India (Sep 2023) #OrmaxSIL pic.twitter.com/m9c6Mo7xsk
— Ormax Media (@OrmaxMedia) October 22, 2023
ಇದನ್ನೂ ಓದಿ: ಶಾರುಖ್ ನಟನೆಯ 25 ವರ್ಷದ ಹಳೇ ಸಿನಿಮಾ ಮರು ಬಿಡುಗಡೆ; 25 ರೂ. ಟಿಕೆಟ್: ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್
ಇತ್ತೀಚಿನ ವರ್ಷಗಳಲ್ಲಿ ಶಾರುಖ್ ಖಾನ್ ಅವರು ಸತತ ಸೋಲು ಕಂಡಿದ್ದರು. ಆದರೆ 2023ರಲ್ಲಿ ಅವರು ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ. ಈಗ ಅವರು ‘ಡಂಕಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಪಠಾಣ್’ ಮತ್ತು ‘ಜವಾನ್’ ಸಿನಿಮಾಗಳ ದೊಡ್ಡ ಸಕ್ಸಸ್ ನಂತರ ‘ಡಂಕಿ’ ಬರುತ್ತಿರುವುದರಿಂದ ಈ ಚಿತ್ರದ ಮೇಲೆ ಸಖತ್ ನಿರೀಕ್ಷೆ ಇದೆ. ಈ ಚಿತ್ರಕ್ಕೆ ರಾಜ್ಕುಮಾರ್ ಹಿರಾನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಶಾರುಖ್ ಖಾನ್ ಅವರು 1000 ಕೋಟಿ ರೂಪಾಯಿ ಮೈಲಿಗಲ್ಲು ಸಾಧಿಸಿದ್ದಾರೆ. ಅವರ ಮುಂಬರುವ ಸಿನಿಮಾಗಳು ಕೂಡ ಅದೇ ರೀತಿ ಕಲೆಕ್ಷನ್ ಮಾಡಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.