ಥಿಯೇಟರ್​ಗೆ Y+ ಭದ್ರತೆಯೊಂದಿಗೆ ಎಂಟ್ರಿಕೊಟ್ಟ ಶಾರುಖ್ ಖಾನ್; ಇಲ್ಲಿದೆ ವಿಡಿಯೋ

|

Updated on: Oct 17, 2023 | 7:07 AM

‘ಕುಚ್​ ಕುಚ್ ಹೋತಾ ಹೈ’ ಸಿನಿಮಾ ರಿಲೀಸ್ ಆಗಿ 25 ವರ್ಷ ಕಳೆದಿದೆ. ಈ ವಿಶೇಷ ಸಂದರ್ಭದಲ್ಲಿ ಕರಣ್ ಜೋಹರ್ ಅವರು ವಿಶೇಷ ಶೋ ಆಯೋಜನೆ ಮಾಡಿದ್ದರು. ಇದಕ್ಕೆ ಶಾರುಖ್ ಖಾನ್ ಅವರು ವೈ+ ಸೆಕ್ಯುರಿಟಿ ಜೊತೆ ಥಿಯೇಟರ್​ಗೆ ಬಂದಿದ್ದಾರೆ.

ಥಿಯೇಟರ್​ಗೆ Y+ ಭದ್ರತೆಯೊಂದಿಗೆ ಎಂಟ್ರಿಕೊಟ್ಟ ಶಾರುಖ್ ಖಾನ್; ಇಲ್ಲಿದೆ ವಿಡಿಯೋ
ಶಾರುಖ್
Follow us on

ಕೊಲೆ ಬೆದರಿಕೆ ಬಂದಿದ್ದರಿಂದ ಶಾರುಖ್ ಖಾನ್ (Shah Rukh Khan) ಅವರಿಗೆ ಸರ್ಕಾರದ ಕಡೆಯಿಂದ Y+ ಭದ್ರತೆ ನೀಡಲಾಯಿತು. ಇದಾದ ಬಳಿಕ ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಶಾರುಖ್​ಗೆ ಭದ್ರತೆ ಹೆಚ್ಚಿಸಿದ ಬಳಿಕ ಇದೇ ಮೊದಲ ಬಾರಿಗೆ ಅವರು ಪಬ್ಲಿಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್ ಅವರನ್ನು ಭೇಟಿ ಮಾಡೋದು ಈಗ ಮತ್ತಷ್ಟು ಕಷ್ಟ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದಾರೆ.

ಶಾರುಖ್ ಖಾನ್, ಕಾಜೋಲ್,  ರಾಣಿ ಮುಖರ್ಜಿ ನಟನೆಯ, ಕರಣ್ ಜೋಹರ್ ನಿರ್ದೇಶನದ ‘ಕುಚ್​ ಕುಚ್ ಹೋತಾ ಹೈ’ ಸಿನಿಮಾ ರಿಲೀಸ್ ಆಗಿ 25 ವರ್ಷ ಕಳೆದಿದೆ. ಈ ವಿಶೇಷ ಸಂದರ್ಭದಲ್ಲಿ ಕರಣ್ ಜೋಹರ್ ಅವರು ವಿಶೇಷ ಶೋ ಆಯೋಜನೆ ಮಾಡಿದ್ದರು. ಇದಕ್ಕೆ ಶಾರುಖ್ ಖಾನ್ ಅವರು ವೈ+ ಸೆಕ್ಯುರಿಟಿ ಜೊತೆ ಥಿಯೇಟರ್​ಗೆ ಬಂದಿದ್ದಾರೆ. ಅವರ ಸುತ್ತಲೂ ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದಾರೆ. ಶಾರುಖ್ ಖಾನ್ ಅವರು ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದರೆ, ಕರಣ್ ಜೋಹರ್ ಕೂಡ ಇದೇ ರೀತಿಯ ಡ್ರೆಸ್ ಹಾಕಿದ್ದರು. ರಾಣಿ ಮುಖರ್ಜಿ ಅವರು ಸೀರೆಯಲ್ಲಿ ಗಮನ ಸೆಳೆದಿದ್ದಾರೆ.

ಮನೆಯಿಂದ ಹೊರ ಬಂದ ಬಳಿಕ ಶಾರುಖ್ ಖಾನ್ ಅವರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದರು. ಥಿಯೇಟರ್ ಒಳಗೂ ಶಾರುಖ್ ಖಾನ್​ಗೆ ಇವರೇ ಭದ್ರತೆ ಒದಗಿಸಿದ್ದಾರೆ. ಫ್ಯಾನ್ಸ್ ಜೊತೆ ಶಾರುಖ್ ಖಾನ್ ಮಾತನಾಡುವಾಗ ಭದ್ರತಾ ಸಿಬ್ಬಂದಿ ಹೆಚ್ಚು ಕಾಳಜಿವಹಿಸಿದ್ದಾರೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:  ರಿವೀಲ್ ಆಯ್ತು ‘ಡಂಕಿ’ ಸಿನಿಮಾದ ಕಥೆ; ಶಾರುಖ್ ಖಾನ್ ಪಾತ್ರ ಹೇಗಿರಲಿದೆ?

ಶಾರುಖ್ ಖಾನ್ ಅವರು ಸದ್ಯ ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಾಜ್​ಕುಮಾರ್ ಇರಾನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆ ಎನ್ನುವ ಮಾತು ಹರಿದಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ