
ನಟ ಶಾರುಖ್ ಖಾನ್ (Shah Rukh Khan) ಅವರು ಬಹಳಷ್ಟು ಸುದ್ದಿ ಆಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ತುಂಬ ಚರ್ಚೆ ಆಗುತ್ತಿದೆ. ಅವರು ನಟಿಸಿರುವ ಹೊಸ ಸಿನಿಮಾ ‘ಪಠಾಣ್’ (Pathaan Movie) ಬಿಡುಗಡೆಗೆ ಹತ್ತಿರ ಆಗಿದೆ. 2023ರ ಜನವರಿ 25ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ‘ಬೇಷರಂ ರಂಗ್..’ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ. ಅದರ ಬೆನ್ನಲ್ಲೇ ‘ಪಠಾಣ್’ ಚಿತ್ರದ ರಿಲೀಸ್ ದಿನಾಂಕವನ್ನು (Pathaan Movie Release Date) ಮುಂದೂಡಿಕೊಳ್ಳುವಂತೆ ಅಭಿಮಾನಿಯೊಬ್ಬರು ಶಾರುಖ್ ಖಾನ್ಗೆ ಮನವಿ ಮಾಡಿದ್ದಾರೆ. ಅವರಿಗೆ ಶಾರುಖ್ ನೀಡಿದ ಉತ್ತರ ಕೂಡ ಫನ್ನಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಶಾರುಖ್ ಖಾನ್ ಅವರು ಪ್ರಶ್ನೋತ್ತರ ನಡೆಸಿದಾಗ ಈ ಮಜವಾದ ಮಾತುಕತೆ ಆಗಿದೆ. ಆದರ ಬಗ್ಗೆ ಇಲ್ಲಿದೆ ವಿವರ..
ಶಾರುಖ್ ಖಾನ್ ಅವರನ್ನು ಒಂದು ವರ್ಗದ ಜನರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅಪ್ಪಟ ಅಭಿಮಾನಿಗಳು ಮೊದಲಿನಷ್ಟೇ ಪ್ರೀತಿ ತೋರಿಸುತ್ತಿದ್ದಾರೆ. ‘ಪಠಾಣ್’ ಸಿನಿಮಾ ನೋಡಲು ಶಾರಖ್ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಮಯದಲ್ಲಿ ‘AskSRK’ ಎಂದು ಅಭಿಮಾನಿಗಳ ಜೊತೆ 15 ಮಿನಿಷಗಳ ಕಾಲ ಶಾರುಖ್ ಖಾನ್ ಪ್ರಶ್ನೋತ್ತರ ನಡೆಸಿದ್ದಾರೆ. ಆಗ ಅವರಿಗೆ ಬಗೆಬಗೆಯ ಪ್ರಶ್ನೆಗಳು ಎದುರಾಗಿವೆ.
ಇದನ್ನೂ ಓದಿ: Pathaan: ಬಾಯ್ಕಾಟ್ ಎಂದವರಿಗೆ, ಕೇಸರಿ ಬಿಕಿನಿಗೂ ಕಿರಿಕ್ ಮಾಡಿದವರಿಗೆ ತಿರುಗೇಟು ಕೊಟ್ಟ ಶಾರುಖ್ ಖಾನ್
‘ಸರ್, ನಾನು ಜನವರಿ 25ರಂದು ಮದುವೆ ಆಗುತ್ತಿದೇನೆ. ನೀವು ದಯವಿಟ್ಟು ಪಠಾಣ್ ಚಿತ್ರದ ಬಿಡುಗಡೆ ದಿನಾಂಕವನ್ನು ಜನವರಿ 26ಕ್ಕೆ ಮುಂದೂಡಬಹುದೇ? ಆಗ ತುಂಬ ಒಳ್ಳೆಯದಾಗುತ್ತದೆ. ಧನ್ಯವಾದಗಳು’ ಎಂದು ಅಭಿಮಾನಿಯೊಬ್ಬರು ಶಾರುಖ್ ಖಾನ್ಗೆ ಹೇಳಿದ್ದಾರೆ. ‘ನೀವು ಜನವರಿ 26ರಂದು ಗಣರಾಜ್ಯೋತ್ಸವದ ಪರೇಡ್ ಬಳಿಕ ಮದುವೆ ಮಾಡಿಕೊಳ್ಳಿ. ಅಂದು ರಜೆ ಕೂಡ ಇದೆ’ ಎಂದು ಶಾರುಖ್ ಉತ್ತರಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
ಇದನ್ನೂ ಓದಿ: Aryan Khan: ಚಿತ್ರರಂಗಕ್ಕೆ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಎಂಟ್ರಿ; ಬ್ರೇಕಿಂಗ್ ನ್ಯೂಸ್ ನೀಡಿದ ಸ್ಟಾರ್ ಕಿಡ್
‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮಾತ್ರವಲ್ಲದೇ ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಮೂಲಕ ನಿರ್ಮಾಣ ಆಗಿದೆ. ವಿರೋಧದ ನಡುವೆಯೂ ಈ ಚಿತ್ರದ ‘ಬೇಷರಂ ರಂಗ್..’ ಹಾಡು ಸೂಪರ್ ಹಿಟ್ ಆಗಿದೆ. ದಿನದಿಂದ ದಿನಕ್ಕೆ ಈ ಹಾಡಿನ ಕ್ರೇಜ್ ಹೆಚ್ಚಾಗುತ್ತಿದೆ.
ಶಾರುಖ್ ಖಾನ್ ಅವರು ಗಲ್ಲಾಪೆಟ್ಟಿಗೆಯಲ್ಲಿ ಗೆಲುವು ಕಾಣದೇ ಬಹಳ ವರ್ಷಗಳಾಗಿವೆ. 2018ರಲ್ಲಿ ಬಂದ ‘ಜೀರೋ’ ಸಿನಿಮಾ ಹೀನಾಯವಾಗಿ ಸೋತ ಬಳಿಕ ಅವರು ನಾಲ್ಕು ವರ್ಷ ಬ್ರೇಕ್ ತೆಗೆದುಕೊಂಡರು. ಈಗ ‘ಪಠಾಣ್’ ಮೂಲಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾದ ಗೆಲುವು ಅವರಿಗೆ ಬಹಳ ಮುಖ್ಯವಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:17 pm, Sun, 18 December 22