
ಮುಂಬೈನ (Mumbai) ಅತ್ಯಂತ ದುಬಾರಿ ಮತ್ತು ಜನಪ್ರಿಯ ಮನೆಗಳಲ್ಲಿ ಶಾರುಖ್ ಖಾನ್ (Shah Rukh Khan) ಅವರ ಮನ್ನತ್ ಸಹ ಒಂದು. ಶಾರುಖ್ ಖಾನ್ ಅವರ ಮನ್ನತ್ ಮನೆ ಪ್ರವಾಸಿ ತಾಣವೇ ಆಗಿತ್ತು, ಪ್ರತಿದಿನ ಸಾವಿರಾರು ಮಂದಿ ಶಾರುಖ್ ಖಾನ್ ಮನೆಗೆ ಭೇಟಿ ನೀಡುತ್ತಿದ್ದರು. ಆದರೆ ಇದೀಗ ಶಾರುಖ್ ಖಾನ್ ತಮ್ಮ ‘ಮನ್ನತ್’ ಮನೆಯನ್ನು ತೊರೆದಿದ್ದಾರೆ. ಬಹಳ ಕಷ್ಟಪಟ್ಟು, ಬಹಳ ಪ್ರೀತಿಯಿಂದ ಖರೀದಿ ಮಾಡಿದ್ದ ‘ಮನ್ನತ್’ ಮನೆಯನ್ನು ತೊರೆದಿರುವ ಶಾರುಖ್ ಖಾನ್ ಮತ್ತು ಕುಟುಂಬ ಬಾಡಿಗೆ ಮನೆಗೆ ವಾಸ್ತವ್ಯ ಬದಲಾಯಿಸಿದೆ.
ಶಾರುಖ್ ಖಾನ್ ಮತ್ತು ಕುಟುಂಬ ಈಗ ಮುಂಬೈನಲ್ಲಿಯೇ ಬಾಡಿಗೆ ಮನೆಯೊಂದನ್ನು ಪಡೆದಿದ್ದು, ಈ ಬಾಡಿಗೆ ಮನೆ ಬಾಲಿವುಡ್ ನಟ ಮತ್ತು ನಿರ್ಮಾಪಕ ಜಾಕಿ ಬಗ್ನಾನಿ ಹಾಗೂ ಅವರ ಸಹೋದರಿಗೆ ಸೇರಿದ್ದಾಗಿದೆ. ಮನ್ನತ್ಗೆ ಹೋಲಿಸಿದರೆ ಬಹಳ ಚಿನ್ನ ಮನೆ ಇದಾಗಿದ್ದು ರೂಂಗಳ ಸಂಖ್ಯೆಯೂ ಕಡಿಮೆಯೇ ಇವೆ. ಪಾರ್ಕಿಂಗ್ ಸಹ ಕಡಿಮೆ ಇದೆಯಂತೆ. ಆದರೆ ಈ ಮನೆಗೆ ಶಾರುಖ್ ಖಾನ್ ಪ್ರಸ್ತುತ ಬರೋಬ್ಬರಿ 24 ಲಕ್ಷ ರೂಪಾಯಿ ಬಾಡಿಗೆ ಕೊಡುತ್ತಿದ್ದಾರೆ.
ಈಗಿರುವ ಮನೆಯಲ್ಲಿ ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಸಣ್ಣ-ಪುಟ್ಟ ಬದಲಾವಣೆಗಳನ್ನು ಶಾರುಖ್ ಖಾನ್ ಕುಟುಂಬ ಮಾಡಿಕೊಂಡಿದೆ. ಲಭ್ಯ ಮಾಹತಿಗಳಂತೆ ಒಂದು ವರ್ಷಕ್ಕಾಗಿ ಮಾತ್ರವೇ ಶಾರುಖ್ ಖಾನ್ ಅವರು ಜಾಕಿ ಬಗ್ನಾನಿ ಜೊತೆಗೆ ಬಾಡಿಗೆ ಕರಾರು ಮಾಡಿಕೊಂಡಿದ್ದಾರಂತೆ. ಅದರಂತೆ ಪ್ರತಿ ತಿಂಗಳು 24 ಲಕ್ಷ ರೂಪಾಯಿ ಬಾಡಿಗೆ ಹಣ ನೀಡಲಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಬಿಟ್ಟು ಶಾರುಖ್ ಖಾನ್ಗಿಂತಲೂ ಬ್ಯುಸಿಯಾದ ನಿರ್ದೇಶಕ
ಶಾರುಖ್ ಖಾನ್ ಅವರ ಮನ್ನತ್ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಸುತ್ತಿದ್ದಾರೆ. ಮನೆಯನ್ನು ಇನ್ನಷ್ಟು ವಿಸ್ತಾರ ಮತ್ತು ಹೆಚ್ಚುವರಿ ಫ್ಲೋರ್ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕಾಗಿ ನ್ಯಾಯಾಲಯದಿಂದ, ಬಿಎಂಸಿಯಿಂದ ಅನುಮೋದನೆಯನ್ನು ಸಹ ಶಾರುಖ್ ಖಾನ್ ಪಡೆದುಕೊಂಡಿದ್ದಾರೆ. ಹೆಚ್ಚುವರಿ ಫ್ಲೋರ್ ನಿರ್ಮಾಣ ಹಾಗೂ ಇನ್ನೂ ಕೆಲವು ನಿರ್ಮಾಣ ಕಾಮಗಾರಿಗಳ ಬಳಿಕ ಶಾರುಖ್ ಖಾನ್ ಮತ್ತು ಕುಟುಂಬ ಮತ್ತೆ ಮನ್ನತ್ಗೆ ಶಿಫ್ಟ್ ಆಗಲಿದೆ.
ಶಾರುಖ್ ಖಾನ್ ನಟನೆಯ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿವೆ. ಇದೀಗ ‘ಕಿಂಗ್’ ಹೆಸರಿನ ಹೊಸ ಸಿನಿಮಾವನ್ನು ಶಾರುಖ್ ಖಾನ್ ಪ್ರಾರಂಭ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್ ಸಹ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ