AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ಖುಷಿ ಸುದ್ದಿ ಕೊಟ್ಟ ಸೋನಾಕ್ಷಿ-ಜಹೀರ್

ಖ್ಯಾತ ಬಾಲಿವುಡ್ ದಂಪತಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರು ಹೊಸ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಖರೀದಿಸಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ಈ ಕಾರನ್ನು ಖರೀದಿಸಿರುವುದು ಇಬ್ಬರಿಗೂ ವಿಶೇಷವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡು ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ಖುಷಿ ಸುದ್ದಿ ಕೊಟ್ಟ ಸೋನಾಕ್ಷಿ-ಜಹೀರ್
ಸೋನಾಕ್ಷಿ-ಜಹೀರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Apr 26, 2025 | 3:41 PM

Share

ಬಾಲಿವುಡ್‌ನ ಖ್ಯಾತ ದಂಪತಿ ಸೋನಾಕ್ಷಿ ಸಿನ್ಹಾ (Sonakshi Sinha) ಮತ್ತು ಜಹೀರ್ ಇಕ್ಬಾಲ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ಬಗ್ಗೆ ಒಂದಿಲ್ಲೊಂದು ವಿಚಾರ ಚರ್ಚೆ ಆಗುತ್ತಲೇ ಇರುತ್ತದೆ. ಅನೇಕ ಬಾರಿ ಅವರು ಟ್ರೋಲ್ ಆದ ಉದಾಹರಣೆ  ಇದೆ. ಈ ಬಾರಿ ಅವರು ಹೊಸ ಕಾರಣಕ್ಕಾಗಿ ಬೆಳಕಿಗೆ ಬಂದಿದ್ದಾರೆ.  ಸೋನಾಕ್ಷಿ ಸಿನ್ಹಾ  ಅವರು ತಮ್ಮ ಅಭಿಮಾನಿಗಳೊಂದಿಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಶುಭ ಸುದ್ದಿ ತಿಳಿದ ಅಭಿಮಾನಿಗಳು ಅವರಿಗೆ ಶುಭ ಹಾರೈಸುವ ಮೂಲಕ ಅಭಿನಂದಿಸಿದ್ದಾರೆ.

ಅಭಿಮಾನಿಗಳೊಂದಿಗೆ ಸೋನಾಕ್ಷಿ ಸಿನ್ಹಾ-ಜಹೀರ್ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಅವರು ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿ ಮಾಡಿದ್ದಾರೆ. ಈ ಕಾರಿನೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ದಂಪತಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಅವರು ತಮ್ಮ ಹೊಸ ಕಾರಿನ ಬಗ್ಗೆ ತುಂಬಾ ಸಂತೋ ಆಗಿರೋದು ಕಾಣುತ್ತದೆ.

ಇದನ್ನೂ ಓದಿ
Image
ಶ್ರೀನಿಧಿ ಶೆಟ್ಟಿ ಹಾಗೂ ಯಶ್ ಬಗ್ಗೆ ತಪ್ಪು ತಿಳಿದುಕೊಂಡಿದ್ದ ಫ್ಯಾನ್ಸ್
Image
‘ಉಗ್ರ ಸಿಕ್ಕಿದ್ದ, ಕುರಾನ್ ಓದಿಲ್ಲ ಎಂದು ಕಿರುಕುಳ ನೀಡಿದ್ದ’; ನಟಿ ಏಕ್ತಾ
Image
ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಹಣ ಎಷ್ಟು?
Image
‘ಕೆಜಿಎಫ್ 2’ ಜೋಡಿನ ಬಾಲಿವುಡ್​ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ, ಸೋನಾಕ್ಷಿ ಸಿನ್ಹಾ ಕಾರಿನ ಬಾನೆಟ್ ಬಳಿ ನಗುತ್ತಾ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಅವರ ಪಕ್ಕದಲ್ಲಿ ಜಹೀರ್ ಇದ್ದಾರೆ. ಈ ಕ್ಷಣ ಇಬ್ಬರಿಗೂ ವಿಶೇಷವಾಗಿದೆ ಏಕೆಂದರೆ ಅವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ಈ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

View this post on Instagram

A post shared by Zaheer Iqbal (@iamzahero)

ಇನ್‌ಸ್ಟಾಗ್ರಾಮ್‌ನಲ್ಲಿ ಕಾರಿನ ಫೋಟೋವನ್ನು ಹಂಚಿಕೊಂಡ ಜಹೀರ್ ಇಕ್ಬಾಲ್, ‘ಇಡೀ ಪ್ರಕ್ರಿಯೆಯನ್ನು ತುಂಬಾ ಸುಲಭಗೊಳಿಸಿದ್ದಕ್ಕಾಗಿ @bmwinfinitycars ಮತ್ತು @bmwindia_official ಗೆ ಧನ್ಯವಾದಗಳು. ಕಾರನ್ನು ಆಯ್ಕೆ ಮಾಡುವುದರಿಂದ ಹಿಡಿದು ಮನೆಗೆ ತೆಗೆದುಕೊಂಡು ಹೋಗುವವರೆಗೆ ಎಲ್ಲವೂ ಅದ್ಭುತವಾಗಿತ್ತು. ನನ್ನ ಹೊಸ ಕಾರನ್ನು ಅಂತಿಮವಾಗಿ ಓಡಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ’ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಅವರ ಯಶಸ್ಸಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ‘ಶೀಘ್ರವೇ ನಿಮ್ಮ ವಿಚ್ಛೇದನ’ ಎಂದವನಿಗೆ ಆತನ ಅಪ್ಪ-ಅಮ್ಮನ ವಿಚಾರ ಎಳೆದು ಖಡಕ್ ಉತ್ತರ ಕೊಟ್ಟ ಸೋನಾಕ್ಷಿ

ಸೋನಾಕ್ಷಿ ಮತ್ತು ಜಹೀರ್ ಅವರ ವಿವಾಹ ಕಳೆದ ವರ್ಷ ಜೂನ್ 23 ರಂದು ಕೆಲವೇ ಜನರ ಸಮ್ಮುಖದಲ್ಲಿ ನಡೆಯಿತು. ಈ ಜೋಡಿ ಈಗ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಶೀಘ್ರದಲ್ಲೇ ಆಚರಿಸಲು ಸಿದ್ಧತೆ ನಡೆಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಹೊಸ ಕಾರು ಅವರಿಬ್ಬರಿಗೂ ವಿಶೇಷ ಉಡುಗೊರೆಯಾಗಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.