ಶ್ರೀನಿಧಿ ಶೆಟ್ಟಿ ಹಾಗೂ ಯಶ್ ಬಗ್ಗೆ ತಪ್ಪು ತಿಳಿದುಕೊಂಡಿದ್ದ ಫ್ಯಾನ್ಸ್; ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ನಟಿ
ಶ್ರೀನಿಧಿ ಶೆಟ್ಟಿ ಅವರು ಚಿತ್ರರಂಗದಲ್ಲಿನ ಗ್ಯಾಪ್, ಯಶ್ ಅವರ ಜೊತೆಗಿನ ಸಂಬಂಧ ಹಾಗೂ 'ಕೆಜಿಎಫ್' ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. 'ಕೋಬ್ರಾ' ಚಿತ್ರದ ನಂತರ ಅವರು ಯಾಕೆ ಸಿನಿಮಾಗಳಿಂದ ದೂರ ಉಳಿದರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಯಶ್ ಅವರ ಯಶಸ್ಸಿಗೆ ಅವರು ಶುಭ ಹಾರೈಸಿದ್ದು, ಅವರೊಂದಿಗಿನ ಸ್ನೇಹದ ಬಗ್ಗೆಯೂ ಮಾತನಾಡಿದ್ದಾರೆ.

ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಹಾಗೂ ಯಶ್ ‘ಕೆಜಿಎಫ್’ ಸರಣಿಯಲ್ಲಿ ಒಟ್ಟಾಗಿ ನಟಿಸಿದ್ದರು. ಆ ಬಳಿಕ ಶ್ರೀನಿಧಿ ಮಾಡಿದ್ದು ಕೇವಲ ಒಂದು ಸಿನಿಮಾ. ಈಗ ‘ಕೆಜಿಎಫ್’ ಬೆಡಗಿ ‘ಹಿಟ್ 3’ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅವರು ಯಶ್ ಜೊತೆಗಿನ ಒಡನಾಟ ಹಾಗೂ ಯಶ್ ಅವರ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಇಷ್ಟು ಸಮಯ ಚಿತ್ರರಂಗದಿಂದ ದೂರ ಇದ್ದಿದ್ದು ಯಾಕೆ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
ಬಣ್ಣದ ಲೋಕದಿಂದ ದೂರ
‘ಕೆಜಿಎಫ್ 2’ ರಿಲೀಸ್ ಬಳಿಕ ಶ್ರೀನಿಧಿ ಶೆಟ್ಟಿ ‘ಕೋಬ್ರಾ’ ಹೆಸರಿನ ತಮಿಳು ಸಿನಿಮಾ ಮಾಡಿದರು. ಚಿಯಾನ್ ವಿಕ್ರಮ್ ಇದಕ್ಕೆ ಹೀರೋ. ಆ ಬಳಿಕ ಅವರು ಸೈಲೆಂಟ್ ಆಗಿ ಹೋದರು. ಆಗ ನಟಿಯ ಬಗ್ಗೆ ಸಾಕಷ್ಟು ಟಾಕ್ ಇತ್ತು. ‘ಕೆಜಿಎಫ್ ರೀತಿಯ ಕಥೆ, ಅದೇ ರೀತಿಯ ಥೀಮ್ ಇಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬಂದವು. ಆದರೆ, ನಾನು ಯಾವುದೂ ಒಪ್ಪಿಕೊಳ್ಳಲಿಲ್ಲ. ನನಗೆ ಸಿನಿಮಾ ಮಾಡುವ ಆಸಕ್ತಿಯೇ ಇಲ್ಲ ಎಂದು ಜನರು ಭಾವಿಸಿದರು. ಹೀಗಾಗಿ, ನನಗೆ ಸಿನಿಮಾ ಆಫರ್ ನೀಡೋದನ್ನು ಅವರ ನಿಲ್ಲಿಸಿದರು’ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ.
‘ಯಶ್ ಬಗ್ಗೆ ನನಗೆ ಖುಷಿ ಇದೆ. ಕೆಜಿಎಫ್ಗೂ ಮೊದಲು ನಮ್ಮ ರಾಜ್ಯದಲ್ಲಿ ಅವರು ದೊಡ್ಡ ಹೀರೋ. ಈಗಿರುವ ಹಂತಕ್ಕೆ ಕೆಜಿಎಫ್ ಕಾರಣ. ಟಾಕ್ಸಿಕ್ ಹಾಗೂ ರಾಮಾಯಣದಂತ ಸಿನಿಮಾ ಅವರ ಕೈಯಲ್ಲಿ ಇದೆ. ಓರ್ವ ಪ್ರೇಕ್ಷಕನಾಗಿ ನಾನು ಈ ಸಿನಿಮಾಗಾಗಿ ಕಾಯುತ್ತಿದ್ದೇನೆ. ಅವರು ದೊಡ್ಡ ಗ್ಯಾಪ್ ತೆಗೆದುಕೊಂಡರೂ ಪ್ರೇಕ್ಷಕರು ಅವರ ಚಿತ್ರಕ್ಕಾಗಿ ಕಾಯುತ್ತಿದ್ದಾರೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಕೆಜಿಎಫ್ 2’ ಜೋಡಿನ ಬಾಲಿವುಡ್ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್; ಕಾಡಿತ್ತು ಆ ಒಂದು ಭಯ
‘ನಾವಿಬ್ಬರೂ (ಶ್ರೀನಿಧಿ ಶೆಟ್ಟಿ ಹಾಗೂ ಯಶ್) ಏನನ್ನೂ ಮಾಡುತ್ತಿಲ್ಲ ಎನ್ನುತ್ತಿದ್ದರು. ನನ್ನ ಸಿನಿಮಾ ಬರುತ್ತಿದೆ. ನನಗೆ ಎಗ್ಸೈಟ್ಮೆಂಟ್ ಇದೆ. ನಾನು ಯಶ್ಗೆ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ. ನಾವು ಟಚ್ನಲ್ಲಿ ಇರಲಿ ಅಥವಾ ಇಲ್ಲದಿರಲಿ, ಅವರು ನನಗೆ ಯಾವಾಗಲೂ ಸ್ಪೆಷಲ್. ಏಕೆಂದರೆ ಅವರು ನನ್ನ ಮೊದಲ ಹೀರೋ’ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ. ಈ ಮೂಲಕ ಏನು ಮಾಡುತ್ತಿಲ್ಲ ಎಂಬ ತಪ್ಪು ತಿಳುವಳಿಕೆ ಹೋಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Sat, 26 April 25








