ಬ್ರೇಕಪ್ ಬಳಿಕ ರಣಬೀರ್ಗೆ ಧನ್ಯವಾದ ಹೇಳಿದ್ದ ದೀಪಿಕಾ ಪಡುಕೋಣೆ
ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರ ಸಂಬಂಧದ ಅಂತ್ಯಕ್ಕೆ ಕಾರಣ ರಣಬೀರ್ ಅವರ ಮೋಸ. ದೀಪಿಕಾ ಅವರು ರಣಬೀರ್ ಅವರನ್ನು ಆಳವಾಗಿ ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗುವ ಯೋಜನೆ ಹೊಂದಿದ್ದರು. ಆದರೆ ರಣಬೀರ್ ಅವರ ಮೋಸದಿಂದಾಗಿ ಅವರ ಸಂಬಂಧ ಮುರಿದು ಬಿತ್ತು.

ರಣಬೀರ್ ಕಪೂರ್ (Ranbir Kapoor) ಹಾಗೂ ದೀಪಿಕಾ ಪಡುಕೋಣೆ ಡೇಟಿಂಗ್ ಮಾಡಿದ್ದ ವಿಚಾರ ಬಹುತೇಕರಿಗೆ ಗೊತ್ತಿದೆ ಎನ್ನಬಹುದು. ಆದರೆ, ಇವರು ಡೇಟ್ ಮಾಡಿದ್ದು ಕೊನೆ ಆಗಲು ಕಾರಣ ಅನೇಕರಿಗೆ ಗೊತ್ತಿಲ್ಲ. ಏಕೆಂದರೆ ದೀಪಿಕಾ ಮೇಲೆ ರಣಬೀರ್ ಅವರು ಚೀಟ್ ಮಾಡಿದ್ದರು. ಮೋಸ ಮಾಡಿ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದರು. ಇದರಿಂದ ಅವರು ಸಂದರ್ಶನ ಒಂದರಲ್ಲಿ ಓಪನ್ ಆಗಿ ಹೇಳಿಕೊಂಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.
ದೀಪಿಕಾ ಹಾಗೂ ರಣಬೀರ್ ಅವರು ಡೇಟ್ ಮಾಡಿದ್ದರು. ರಣಬೀರ್ನ ದೀಪಿಕಾ ಅದೆಷ್ಟು ಆಳವಾಗಿ ಪ್ರೀತಿಸಿದ್ದರು ಎಂದರೆ ಅವರು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ಅವರನ್ನೇ ಮದುವೆ ಆಗುತ್ತೇನೆ ಎಂದು ದೀಪಿಕಾ ಬಲವಾಗಿ ಅಂದುಕೊಂಡಿದ್ದರು. ಆದರೆ, ರಣಬೀರ್ ಕಡೆಯಿಂದ ಮೋಸ ಆಗೋಯ್ತು.
‘ನಾನು ಮೂರ್ಖನಾಗುತ್ತಾ ಹೋದರೆ, ನಾನು ಸಂಬಂಧದಲ್ಲಿ ಏಕೆ ಇರಬೇಕು? ಅದಕ್ಕಿಂತ ಒಂಟಿಯಾಗಿರೋದೆ ಬೆಸ್ಟ್. ಆದರೆ ಎಲ್ಲರೂ ಹಾಗೆ ಯೋಚಿಸುವುದಿಲ್ಲ. ಬಹುಶಃ ಅದಕ್ಕಾಗಿಯೇ ನಾನು ಹಿಂದೆ ನೋವು ಅನುಭವಿಸಿದ್ದೆ’ ಎಂದಿದ್ದರು ದೀಪಿಕಾ.
‘ನನ್ನ ಸುತ್ತಲಿನ ಎಲ್ಲರೂ ಅವನು ಇನ್ನೂ ದಾರಿ ತಪ್ಪುತ್ತಿದ್ದಾನೆ ಎಂದು ಹೇಳುತ್ತಿದ್ದರೂ ಸಹ, ಅವನು ಬೇಡಿಕೊಂಡ. ನಾನು ಅವನಿಗೆ (ರಣಬೀರ್) ಎರಡನೇ ಅವಕಾಶ ನೀಡುವಷ್ಟು ಮೂರ್ಖನಾಗಿದ್ದೆ. ನಂತರ ನಾನು ಅವನನ್ನು ನಿಜವಾಗಿಯೂ ರೆಡ್ ಹ್ಯಾಂಡ್ ಆಗಿ ಹಿಡಿದೆ. ಹೊರಬರಲು ನನಗೆ ಸ್ವಲ್ಪ ಸಮಯ ಹಿಡಿಯಿತು. ಆದರೆ ಹಾಗೆ ಮಾಡಿದ ನಂತರ, ಯಾವುದೂ ನನ್ನನ್ನು ಹಿಂತಿರುಗಿಸಲು ಸಾಧ್ಯವಿಲ್ಲ’ ಎಂದಿದ್ದರು ಅವರು.
‘ಅವನು ಮೊದಲ ಬಾರಿಗೆ ನನಗೆ ಮೋಸ ಮಾಡಿದಾಗ, ನನ್ನ ಸಂಬಂಧದಲ್ಲಿ ಅಥವಾ ನನ್ನಲ್ಲಿ ತಪ್ಪಾಗಿದೆ ಎಂದು ನಾನು ಭಾವಿಸಿದೆ. ನಾನು ಸಂಬಂಧಗಳಲ್ಲಿ ಹೆಚ್ಚಿನದ್ದನ್ನು ನೀಡುತ್ತೇನೆ ಮತ್ತು ಪ್ರತಿಯಾಗಿ ನಿಜವಾಗಿಯೂ ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ. ಆದರೆ ದ್ರೋಹವು ಸಂಬಂಧವನ್ನು ಮುರಿದು ಹಾಕುತ್ತದೆ. ಆ ರೀತಿ ಆದಾಗ ಗೌರವ ಹೋಗುತ್ತದೆ, ನಂಬಿಕೆ ಹೋಗುತ್ತದೆ’ ಎಂದಿದ್ದರು.
ಇದನ್ನೂ ಓದಿ: ‘ಅನಿಮಲ್ 2’ ಮಾತ್ರವಲ್ಲ ‘ಅನಿಮಲ್ 3’ ಕೂಡ ಬರ್ತಿದೆ ಎಂದ ರಣಬೀರ್ ಕಪೂರ್
‘ನಾನು ಒಂದು ವಿಷಯ ಅಥವಾ ವ್ಯಕ್ತಿಗೆ ಅಷ್ಟೊಂದು ಅಂಟಿಕೊಳ್ಳಬಾರದು ಎಂದು ನಾನು ಅರಿತುಕೊಂಡೆ. ಬ್ರೇಕ್ ಅಪ್ ನಂತರ, ನಾನು ನನ್ನನ್ನು ಮೇಲಕ್ಕೆ ತಂದುಕೊಳ್ಳಬೇಕಾಯಿತು. ನನ್ನ ಬ್ರೇಕ್ ಅಪ್ ನಂತರ ನಾನು ತುಂಬಾ ಅತ್ತಿದ್ದೇನೆ. ಆದರೆ ನಾನು ಉತ್ತಮ ವ್ಯಕ್ತಿಯಾಗಿದ್ದೇನೆ ಮತ್ತು ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದರು ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







