‘ಅನಿಮಲ್ 2’ ಮಾತ್ರವಲ್ಲ ‘ಅನಿಮಲ್ 3’ ಕೂಡ ಬರ್ತಿದೆ ಎಂದ ರಣಬೀರ್ ಕಪೂರ್
ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ ಚಿತ್ರದಲ್ಲಿ ನಟಿಸಿದ್ದಾರೆ. ತಂದೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಆಗಿರುವ ಮಗನ ಕಥೆ ‘ಅನಿಮಲ್’. ರಣಬೀರ್ ತಂದೆ ಪಾತ್ರದಲ್ಲಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ಅವರು ‘ಅನಿಮಲ್ 3’ ಮಾಡುವ ಆಸೆ ಹೊಂದಿದ್ದಾರೆ.
ರಣಬೀರ್ ಕಪೂರ್ ಅವರು ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದವರು. ಕಳೆದ ವರ್ಷ ರಿಲೀಸ್ ಆದ ‘ಅನಿಮಲ್’ ಸಿನಿಮಾ ಬ್ಲಾಕ್ಬಸ್ಟರ್ ಎನಿಸಿಕೊಂಡಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಕೆಲಸ ನಡೆಯುತ್ತಿದೆ. ಅಷ್ಟೇ ಅಲ್ಲ, ‘ಅನಿಮಲ್ 3’ ಚಿತ್ರ ಕೂಡ ಬರಲಿದೆ ಎಂದು ರಣಬೀರ್ ಕಪೂರ್ ಅವರು ಹೇಳಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದು ಆರಂಭ ಆಗೋದು ಯಾವಾಗ ಎನ್ನುವ ಮಾಹಿತಿಯೂ ಸಿಕ್ಕಿದೆ. ‘ಅನಿಮಲ್ 2’ ಶೂಟಿಂಗ್ 2027ರಿಂದ ಆರಂಭ ಆಗಲಿದೆಯಂತೆ. ‘ಅನಿಮಲ್ 3’ ಆರಂಭದ ಬಗ್ಗೆ ಯಾವುದೇ ಸಮಯ ನೀಡಿಲ್ಲ.
‘ನಾವು ಅನಿಮಲ್ 2 ಚಿತ್ರವನ್ನು 2027ರಲ್ಲಿ ಆರಂಭಿಸಬೇಕು. ನನಗೆ ಈ ಚಿತ್ರವನ್ನು ಮೂರು ಪಾರ್ಟ್ಗಳಲ್ಲಿ ಮಾಡಬೇಕು ಎಂಬ ಆಸೆ ಇದೆ. ಎರಡನೇ ಪಾರ್ಟ್ಗೆ ಅನಿಮಲ್ ಪಾರ್ಕ್ ಎನ್ನುವ ಹೆಸರು ಇಡಲಾಗಿದೆ. ನಾವು ಈ ಬಗ್ಗೆ ಮೊದಲ ಭಾಗದ ಶೂಟ್ ನಡೆಯುವಾಗಲೇ ಚರ್ಚೆ ಮಾಡುತ್ತಿದ್ದೆವು. ಈ ಕಥೆಯನ್ನು ಮುಂದುವರಿಸಲು ಬಯಸುತ್ತೇವೆ’ ಎಂದಿದ್ದಾರೆ ರಣಬೀರ್ ಕಪೂರ್.
‘ಈ ಸಿನಿಮಾ ನನಗೆ ಖುಷಿ ಕೊಟ್ಟಿದೆ. ವಿಲನ್ ಹಾಗೂ ಹೀರೋ ಪಾತ್ರವನ್ನು ಒಟ್ಟಿಗೆ ಮಾಡುವ ಅವಕಾಶ ಸಿಕ್ಕಿದೆ. ಈ ಸಿನಿಮಾದ ಭಾಗ ಆಗಲು ಖುಷಿ ಇದೆ’ ಎಂದು ರಣಬೀರ್ ಕಪೂರ್ ಅವರು ಹೇಳಿದ್ದಾರೆ.
ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ ಚಿತ್ರದಲ್ಲಿ ನಟಿಸಿದ್ದಾರೆ. ತಂದೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಆಗಿರುವ ಮಗನ ಕಥೆ ‘ಅನಿಮಲ್’. ರಣಬೀರ್ ತಂದೆ ಪಾತ್ರದಲ್ಲಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕೆಲವರು ಈ ಚಿತ್ರವನ್ನು ಕೊಂಡಾಡಿದರೆ ಇನ್ನೂ ಕೆಲವರು ತೆಗಳಿದ್ದಾರೆ. ಸಿನಿಮಾದಲ್ಲಿ ಹೀರೋಯಿನ್ಗಳನ್ನು ಅವಮಾನ ಮಾಡಲಾಗಿದೆ ಎಂದು ಹೇಳಲಾಯಿತು.
ಇದನ್ನೂ ಓದಿ: ಐಶ್ವರ್ಯಾ ರೈ ಜೊತೆ ರಣಬೀರ್ ಕಪೂರ್ ಗೆಳೆತನ; ಅನುಷ್ಕಾ ಶರ್ಮಾ ಅಸೂಯೆ ನೋಡಿ
ಸದ್ಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ‘ಸ್ಪಿರಿಟ್’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ಹೀರೋ. ರಣಬೀರ್ ಕಪೂರ್ ಅವರು ‘ರಾಮಾಯಣ’, ‘ಲವ್ ಆ್ಯಂಡ್ ವಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕೆಲಸಗಳು ಮುಗಿಯಲು ಇನ್ನೂ ಕೆಲವು ವರ್ಷಗಳು ಬೇಕಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.