ಶಾರುಖ್ ಖಾನ್ ಇನ್ನೊಂದು ಹೆಸರು ಜೀತೇಂದ್ರ ಕುಮಾರ್: ಈ ಹೆಸರು ಇಟ್ಟಿದ್ದು ಏಕೆ? ಹಿಂದು ಹೆಸರಿನ ಹಿನ್ನೆಲೆ ಏನು?

|

Updated on: Jul 28, 2023 | 9:03 PM

Shah Rukh Khan: ನಟ ಶಾರುಖ್ ಖಾನ್​ಗೆ ಇನ್ನೊಂದು ಹೆಸರಿದೆ ಅದುವೇ ಜೀತೇಂದ್ರ ಕುಮಾರ್! ಈ ಹಿಂದು ಹೆಸರು ಶಾರುಖ್ ಖಾನ್​ಗೆ ಏಕೆ ಬಂತು? ಇದನ್ನು ಇಟ್ಟಿದ್ದು ಯಾರು ಮತ್ತು ಏಕೆ?

ಶಾರುಖ್ ಖಾನ್ ಇನ್ನೊಂದು ಹೆಸರು ಜೀತೇಂದ್ರ ಕುಮಾರ್: ಈ ಹೆಸರು ಇಟ್ಟಿದ್ದು ಏಕೆ? ಹಿಂದು ಹೆಸರಿನ ಹಿನ್ನೆಲೆ ಏನು?
ಶಾರುಖ್
Follow us on

ಶಾರುಖ್ ಖಾನ್ (Shah Rukh Khan) ಹಾಗೂ ಗೌರಿ ಖಾನ್ (Gauri Khan) ಅವರು ಬಾಲಿವುಡ್​ನ ಕ್ಯೂಟ್ ಹಾಗೂ ಗೌರವಾನ್ವಿತ ಜೋಡಿ. ಪತ್ನಿಯರನ್ನು ಗರ್ಲ್​ಫ್ರೆಂಡ್​​ಗಳನ್ನು ಆಗಾಗ್ಗೆ ಬದಲಾಯಿಸುತ್ತಲೇ ಇರುವ ಬಾಲಿವುಡ್​ನ ಸಂಸ್ಕೃತಿಗೆ ವಿರುದ್ಧವಾಗಿ ಶಾರುಖ್ ಖಾನ್ ಹಾಗೂ ಗೌರಿ, ಚಿತ್ರರಂಗದ ಸ್ಟಾರ್​ಗಳು ಸುದೀರ್ಘ ದಾಂಪತ್ಯ ಹೊಂದಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇವರ ಮದುವೆ ಅಷ್ಟು ಸುಲಭವಾಗಿರಲಿಲ್ಲ. ಈ ಅಂತರ್ಧಮೀಯ ವಿವಾಹಕ್ಕೆ ಗೌರಿ ಮನೆಯವರು ಒಪ್ಪಿರಲಿಲ್ಲ.

ಆದರೆ ಹೇಗೋ ಗೌರಿ ಮನೆಯವರು ಮದುವೆಗೆ ಒಪ್ಪಿದರು ಆದರೆ ಶಾರುಖ್ ಹಾಗೂ ಗೌರಿಯ ಮದುವೆ ಆರ್ಯ ಹಾಗೂ ಇಸ್ಲಾಂ ಎರಡೂ ರೀತಿಯಲ್ಲಿ ಆಯಿತು. ಆರ್ಯ ಸಮಾಜದ ಮದುವೆಗೆ ಶಾರುಖ್ ಖಾನ್​ ಹೆಸರನ್ನು ಜಿತೇಂದರ್ ಕುಮಾರ್ ಟಲ್ಲಿ ಎಂದು ಬದಲಾಯಿಸಲಾಯ್ತಂತೆ. ಈ ಹೆಸರು ಆಯ್ಕೆ ಮಾಡಿದ್ದು ಶಾರುಖ್ ಖಾನ್​ರ ಅಜ್ಜಿ-ತಾತ ಎಂಬುದು ವಿಶೇಷ. ಜೀತೇಂದರ್ ಕುಮಾರ್ ಆಗಿನ ದೊಡ್ಡ ನಟನಾಗಿದ್ದರೆ, ಮತ್ತೊಬ್ಬ ಸ್ಟಾರ್ ನಟ ರಾಜೇಶ್ ಖನ್ನಾರ ಮೂಲ ಕುಟುಂಬದ ಹೆಸರು ಟಲ್ಲಿ ಎಂದಾಗಿತ್ತು. ಹಾಗಾಗಿ ಈ ಇಬ್ಬರು ನಟರ ಹೆಸರನ್ನು ಸೇರಿಸಿ ಶಾರುಖ್ ಖಾನ್​ಗೆ ಜಿತೇಂದರ್ ಕುಮಾರ್ ಟಲ್ಲಿ ಎಂದು ಹೆಸರಿಡಲಾಗಿತ್ತು.

ಆರ್ಯ ಸಮಾಜ ಮದುವೆ ಬಳಿಕ ಇಸ್ಲಾಂ ಶೈಲಿಯಲ್ಲಿ ನಿಖಾ ಸಹ ಮಾಡಲಾಗಿತ್ತು. ನಿಖಾಗಾಗಿ ಗೌರಿಯ ಹೆಸರನ್ನು ಆಯೆಷಾ ಎಂದು ಬದಲಾಯಿಸಲಾಗಿತ್ತು. ಅಂದಹಾಗೆ ಗೌರಿ ಖಾನ್​ರ ನಿಜ ಹೆಸರು ಗೌರಿ ಚಿಬ್ಬೇರ್. ಗೌರಿ ತಮ್ಮ ಕುಟುಂಬದವರಿಗೆ ಶಾರುಖ್ ಖಾನ್ ಅನ್ನು ಅಭಿನವ್ ಹೆಸರಿನ ಹಿಂದೂ ಹುಡುಗನಾಗಿ ಪರಿಚಯಿಸಲು ಬಯಸಿದ್ದರಂತೆ. ಆದರೆ ಅದು ಸಾಧ್ಯವಾಗಲಿಲ್ಲ. ”ನಾವು ಯುವಕರಾಗಿದ್ದೆವು. ನಾನು ನಟನಾಗಲು ಹೊರಟ ಅನ್ಯಧರ್ಮೀಯನನ್ನು ಮದುವೆಯಾಗಲು ಮುಂದಾಗಿದ್ದೆ. ಪೋಷಕರಿಗೆ ಸಹಜವಾಗಿಯೇ ಅದು ತುಸುವೂ ಇಷ್ಟವಿರಲಿಲ್ಲ. ಆದರೆ ನಾವು ಹೇಗಾದರೂ ಆಗಲಿ ಮದುವೆ ಆಗಲು ನಿಶ್ಚಯಿಸಿದ್ದೆವು” ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಗೌರಿ ಹೇಳಿಕೊಂಡಿದ್ದರು.

ಇದನ್ನೂ ಓದಿ:ಶಾರುಖ್ ಖಾನ್​ಗಾಗಿ ಬೇರೆ ಚಿತ್ರಗಳಿಂದ ಲುಕ್​ನ ಕದಿಯಲಾಯಿತೇ? ‘ಜವಾನ್​’ ಚಿತ್ರದ ಬಗ್ಗೆ ಹುಟ್ಟಿದೆ ಚರ್ಚೆ

1991 ರಲ್ಲಿ ಶಾರುಖ್ ಖಾನ್​ ಹಾಗೂ ಗೌರಿಯ ಮದುವೆಯಾಯಿತು. ಶಾರುಖ್ ಖಾನ್ ಬಾಳಲ್ಲಿ ಗೌರಿ ಬಂದಿದ್ದೇ ತಡ ಶಾರುಖ್ ಖಾನ್ ಅದೃಷ್ಟವೇ ಬದಲಾಯ್ತು. 1992 ರಲ್ಲಿ ಶಾರುಖ್ ಖಾನ್​ಗೆ ಮೊದಲ ಸಿನಿಮಾ ಅವಕಾಶ ಲಭಿಸಿತು. ಆ ನಂತರ ಶಾರುಖ್ ಖಾನ್ ಹಿಂತಿರುಗಿ ನೋಡಿದ್ದೇ ಇಲ್ಲ. ಇಂದು ಪ್ರಪಂಚದ ಟಾಪ್ ಸ್ಟಾರ್​ಗಳಲ್ಲಿ ಶಾರುಖ್ ಖಾನ್ ಸಹ ಒಬ್ಬರು.

2013 ರಲ್ಲಿ ಔಟ್​ಲುಕ್​ಗೆ ಕೊಟ್ಟಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಶಾರುಖ್ ಖಾನ್, ”ನನ್ನ ಮಕ್ಕಳು ಆಗಾಗ್ಗೆ ನಮ್ಮ ಧರ್ಮ ಯಾವುದು ಎಂದು ಕೇಳುತ್ತಿರುತ್ತಾರೆ. ಪಕ್ಕಾ ಸಿನಿಮಾ ಶೈಲಿಯಲ್ಲಿಯೇ ಅವರಿಗೆ ನಾನು ಉತ್ತರ ಕೊಡುತ್ತೇನೆ. ಮೊದಲು ನೀನು ಭಾರತೀಯ, ಮಾನವೀಯತೆಯೇ ನಿನ್ನ ಧರ್ಮ ಎಂದು. ಅದು ನಿಜವೂ ಹೌದು. ನೀನು ಹಿಂದೂ ಆಗಬೇಡ, ಮುಸ್ಲಿಂ ಆಗಬೇಡ, ಮನುಷ್ಯನಿಂದ ಜನ್ಮ ಪಡೆದ ನೀನು ಮನುಷ್ಯನಾಗು” ಎಂದು ಹಿಂದಿ ಹಾಡು ಹಾಡುತ್ತೇನೆ ಎಂದು ಸಹ ಶಾರುಖ್ ಖಾನ್ ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ