ನಿನ್ನೆ (ಮೇ 21) ಗುಜರಾತ್ನ ಅಹ್ಮದಾಬಾದ್ನ ನರೇಂದ್ರ ಮೋದಿ (Narendra Modi) ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್ ತಂಡವನ್ನು ಸೋಲಿಸಿದ ಶಾರುಖ್ ಖಾನ್ (Shah Rukh Khan) ಒಡೆತನದ ಕೊಲ್ಕತ್ತ ತಂಡ ಫೈನಲ್ನಲ್ಲಿ ಸ್ಥಾನ ಪಡೆದುಕೊಂಡಿದೆ. ಪಂದ್ಯ ನೋಡಲು ಆಗಮಿಸಿದ್ದ ಶಾರುಖ್ ಖಾನ್, ಖುಷಿಯಿಂದ ಪಂದ್ಯ ವೀಕ್ಷಿಸಿ, ಪಂದ್ಯ ಮುಗಿದ ಬಳಿಕ ಮೈದಾನದ ಸುತ್ತು ಹೊಡೆದು ನೆರೆದಿದ್ದ ಪ್ರೇಕ್ಷಕರಿಗೆ ಧನ್ಯವಾದ ಸಹ ಅರ್ಪಿಸಿದರು. ಆದರೆ ಇದಾದ ಬಳಿಕ ಶಾರುಖ್ ಖಾನ್ ಆಸ್ಪತ್ರೆ ಸೇರಿದ್ದಾರೆ!
ಗುಜರಾತ್ನಲ್ಲಿ ವಿಪರೀತ ಬಿಸಿಲಿದ್ದು ಬಿಸಿಗಾಳಿ ಎಲ್ಲೆಡೆ ಬೀಸುತ್ತಿದೆ. ನಿನ್ನೆಯ ಪಂದ್ಯದ ವೇಳೆ ಸಹ ಬಿಸಿಗಾಳಿ ಹೆಚ್ಚಾಗಿಯೇ ಇತ್ತು. ಇದರಿಂದಾಗಿ ಹೀಟ್ ಸ್ಟ್ರೋಕ್ಗೆ ಒಳಗಾದ ಶಾರುಖ್ ಖಾನ್ ಅಹ್ಮದಾಬಾದ್ನ ಕೆಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶಾರುಖ್ ಖಾನ್ ಗೆ ಚಿಕಿತ್ಸೆ ನೀಡಿರುವ ವೈದ್ಯರು ಹೇಳಿರುವಂತೆ, ಶಾರುಖ್ ಖಾನ್ ಡಿಹೈಡ್ರೇಷನ್ನಿಂದ ಬಳಲಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ಕೆಲ ಸಮಯ ನಿಗಾವಣೆಯಲ್ಲಿ ಇಡಲಾಗಿತ್ತು. ಇಂದು ಶಾರುಖ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಮುಂಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಕೆಕೆಆರ್ ಗೆಲುವಿನ ಬಳಿಕ ಸುರೇಶ್ ರೈನಾಗೆ ಕೈ ಮುಗಿದು ಕ್ಷಮೆ ಕೇಳಿದ ಶಾರುಖ್ ಖಾನ್
ಅಹ್ಮದಾಬಾದ್ನಲ್ಲಿ ನಿನ್ನೆ (ಮೇ 21) 45 ಡಿಗ್ರಿ ಸೆಲ್ಷಿಯಸ್ ಬಿಸಿ ಇತ್ತು. ಗುಜರಾತ್ನ ಹಲವೆಡೆ ಇದೇ ಪರಿಸ್ಥಿತಿ ಇದೆ. ಭಾರಿ ಬಿಸಿಲಿನಿಂದಾಗಿ ಬಿಸಿಗಾಳಿ ಹರಿದಾಡುತ್ತಿದ್ದು, ಹೀಟ್ ವೇವ್ನಿಂದಾಗಿ ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಶಾರುಖ್ ಖಾನ್ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹರಿದಾಡುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಿತರಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದರು. ಆದರೆ ಶಾರುಖ್ ಖಾನ್ಗೆ ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ.
ಇಂದು (ಮೇ 22) ಆರ್ಸಿಬಿ ತಂಡ ಸಹ ಅದೇ ಕ್ರೀಡಾಂಗಣದಲ್ಲಿ ಪಂದ್ಯ ಆಡುತ್ತಿದೆ. ಆರ್ಸಿಬಿ ತಂಡ ಸಹ ಹೀಟ್ವೇವ್ ಭಯಕ್ಕೆ ಇಂದು (ಮೇ 22) ಬೆಳಿಗಿನಿಂದಲೂ ಅಭ್ಯಾಸ ಮಾಡಿಲ್ಲ. ಸಂಜೆ ಮೇಲೆ ಅಭ್ಯಾಸ ಮಾಡುವುದಾಗಿ ಹೇಳಿತ್ತಾದರೂ ಹೀಟ್ ವೇವ್ ಕಡಿಮೆ ಆಗದ ಕಾರಣ ಆರ್ಸಿಬಿ ತಂಡದ ಸದಸ್ಯರು ಇಂದು ಅಭ್ಯಾಸವನ್ನೇ ಮಾಡಿಲ್ಲ. ಹಾಗೆಯೇ ನೇರವಾಗಿ ಅಂಗಳಕ್ಕೆ ಇಳಿದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:08 pm, Wed, 22 May 24