ಯಾರಿಗೂ ಗೊತ್ತಾಗದಂತೆ ಕ್ಲಿನಿಕ್​ ಒಳಗೆ ಹೋದ ಶಾರುಖ್ ಖಾನ್; ಬರುವಾಗ ಆಗಿದ್ದೇನು?

ಶಾರುಖ್ ಖಾನ್​ನ ಇತ್ತೀಚೆಗೆ ಮುಂಬೈ ಕ್ಲಿನಿಕ್ ಒಂದಕ್ಕೆ ತೆರಳಿದ್ದಾರೆ. ಒಮ್ಮೆ ಕಣ್ತುಂಬಿಕೊಂಡರೆ ಸಾಕು ಎಂದು ಅನೇಕರು ಅಲ್ಲಿಯೇ ಸಾಕಷ್ಟು ಹೊತ್ತು ಕಾದರು. ಆದರೆ ಶಾರುಖ್ ಖಾನ್ ಯಾರ ಕೈಗೂ ಸಿಗಲಿಲ್ಲ.

ಯಾರಿಗೂ ಗೊತ್ತಾಗದಂತೆ ಕ್ಲಿನಿಕ್​ ಒಳಗೆ ಹೋದ ಶಾರುಖ್ ಖಾನ್; ಬರುವಾಗ ಆಗಿದ್ದೇನು?
ಶಾರುಖ್ ಖಾನ್

Updated on: Jan 17, 2024 | 10:30 AM

ಶಾರುಖ್ ಖಾನ್ (Shah Rukh Khan) ಅವರು ಹೋದಲ್ಲೆಲ್ಲ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಅಭಿಮಾನಿಗಳಿಗೆ ಗೊತ್ತಾಗದಂತೆ ತಲೆಮರಿಸಿಕೊಂಡು ಹೋಗುವುದು ಎಂದರೆ ಅದು ಸುಲಭದಮಾತಲ್ಲ. ಇತ್ತೀಚೆಗೆ ಶಾರುಖ್ ಖಾನ್ ಅವರು ಮುಂಬೈ ಕ್ಲಿನಿಕ್ ಒಂದಕ್ಕೆ ತೆರಳಿದ್ದರು. ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಹೂಡಿಯನ್ನು ಮುಖಕ್ಕೆ ಮುಚ್ಚಿಕೊಂಡಿದ್ದರು. ಆದರೆ, ಈ ಪ್ರಯತ್ನ ವ್ಯರ್ಥವಾಗಿದೆ. ಶಾರುಖ್ ಖಾನ್ ಅವರನ್ನು ಎಲ್ಲರೂ ಪತ್ತೆ ಹಚ್ಚಿದ್ದಾರೆ. ಅವರನ್ನು ನೋಡಲು ಜನಸಾಗರವೇ ನೆರದಿತ್ತು.

ಶಾರುಖ್ ಖಾನ್ ಅವರು ಮುಂಬೈನಲ್ಲಿ ಕ್ಲಿನಿಕ್ ಒಂದಕ್ಕೆ ತೆರಳಿದ್ದರು. ವಿಚಾರ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ನೆರೆಯೋಕೆ ಆರಂಭಿಸಿದರು. ಶಾರುಖ್ ಖಾನ್ ಅವರನ್ನು ಒಮ್ಮೆ ಕಣ್ತುಂಬಿಕೊಂಡರೆ ಸಾಕು ಎಂದು ಅನೇಕರು ಅಲ್ಲಿಯೇ ಸಾಕಷ್ಟು ಹೊತ್ತು ಕಾದರು. ಆದರೆ ಶಾರುಖ್ ಖಾನ್ ಯಾರ ಕೈಗೂ ಸಿಗಲಿಲ್ಲ. ಶಾರುಖ್ ಖಾನ್ ಪಕ್ಕದಲ್ಲಿ ಅವರ ಮ್ಯಾನೇಜರ್ ಇದ್ದರು. ವೈ + ಕೆಟೆಗರಿ ರಕ್ಷಣೆ ಇದ್ದಿದ್ದರಿಂದ ಯಾರಿಗೂ ಅವರ ಬಳಿ ಸುಳಿಯೋಕೆ ಆಗಲಿಲ್ಲ. ಇದರಿಂದ ಫ್ಯಾನ್ಸ್ ಬೇಸರಗೊಂಡರು.

ಇದನ್ನೂ ಓದಿ: ‘ಧೂಮ್ 4’ನಲ್ಲಿ ಶಾರುಖ್ ಖಾನ್ ನಾಯಕ? ಜೊತೆಯಾಗಲಿದ್ದಾರೆ ದಕ್ಷಿಣದ ನಟ?

ಶಾರುಖ್ ಖಾನ್ ಅವರಿಗೆ 2023 ಆಶಾದಾಯಕವಾಗಿತ್ತು. ಅವರ ನಟನೆಯ ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಚಿತ್ರಗಳು ಗೆದ್ದು ಬೀಗಿದವು. ಈಗ ಅವರ ಮುಂದಿನ ಸಿನಿಮಾ ಆಯ್ಕೆಯ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಅವರು ಸಾಕಷ್ಟು ಅಳೆದು ತೂಗಿ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಅವರ ಸಿನಿಮಾ ಬೇಗ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಹೊಸ ಚಿತ್ರಕ್ಕೆ ಸಹಿ ಹಾಕಿದ ಶಾರುಖ್ ಖಾನ್? ಈ ಬಾರಿ ಮತ್ತೊಂದು ಪ್ರಯೋಗ

ಜನವರಿ 28ರಂದು ಫಿಲ್ಮ್​ಫೇರ್ ಅವಾರ್ಡ್ ನಡೆಯಲಿದೆ. ಅದಕ್ಕೆ ಶಾರುಖ್ ಖಾನ್ ಹೆಸರು ‘ಅತ್ಯುತ್ತಮ ನಟ’ ನಾಮಿನೇಷನ್​ನಲ್ಲಿ ಎರಡು ಬಾರಿ ನಾಮಿನೇಟ್ ಆಗಿದೆ. ಅವರ ಮೂರು ಸಿನಿಮಾಗಳು ಕೂಡ ಹಲವು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ. ಹೀಗಾಗಿ, ಅವರು ಈ ಬಾರಿ ಒಂದಷ್ಟು ಅವಾರ್ಡ್ ಬಾಚಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us