
ಬಾಲಿವುಡ್ನಲ್ಲಿ ಒಂದೂ ಸೋಲು ಕಾಣದ ನಿರ್ದೇಶಕ ಎಂದರೆ ಅದು ರಾಜ್ಕುಮಾರ್ ಹಿರಾನಿ (Rajkumar Hirani). ‘ಮುನ್ನಾ ಭಾಯ್ ಎಂಬಿಬಿಎಸ್’, ‘3 ಈಡಿಯಟ್ಸ್’, ‘ಪಿಕೆ’ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಇವರ ಜತೆ ಕೆಲಸ ಮಾಡಬೇಕು ಎಂಬುದು ಹಲವರ ಕನಸು. ಶಾರುಖ್ ಖಾನ್ (Shah Rukh Khan) ಅವರು ಕೂಡ ಇದೇ ಕನಸನ್ನು ಕಂಡಿದ್ದರು. ಈ ಕನಸು ಈಗ ನನಸಾಗಿದೆ. ಇವರ ಕಾಂಬಿನೇಷನ್ನ ಹೊಸ ಸಿನಿಮಾ ಘೋಷಣೆ ಆಗಿದೆ. ಇದಕ್ಕೆ ‘ಡಂಕಿ’ (Dunki Movie) ಎಂದು ಹೆಸರು ಇಡಲಾಗಿದೆ. ಸಿನಿಮಾ ಅನೌನ್ಸ್ಮೆಂಟ್ಅನ್ನು ತುಂಬಾನೇ ಫನ್ನಿಯಾಗಿ ಮಾಡಲಾಗಿದೆ.
ಶಾರುಖ್ ಖಾನ್ ಅವರು ರಾಜ್ಕುಮಾರ್ ಹಿರಾನಿ ಕಚೇರಿಗೆ ಬಂದಿರುತ್ತಾರೆ. ಅಲ್ಲಿ ಹಿರಾನಿ ಅವರು ಮಾಡಿರುವ ಸಿನಿಮಾಗಳ ಪೋಸ್ಟರ್ಗಳನ್ನು ನೋಡುತ್ತಾರೆ. ಆಗ ಹಿರಾನಿ ಎಂಟ್ರಿ ಆಗುತ್ತದೆ. ‘ಸಂಜು ಆಗಿ ರಣಬೀರ್ ಕಾಣಿಸಿಕೊಂಡಿದ್ದರು. ಎಲ್ಲವೂ ಐಕಾನಿಕ್ ಪಾತ್ರಗಳು. ನನಗೋಸ್ಕರ ಈ ರೀತಿಯ ಸ್ಕ್ರಿಪ್ಟ್ ಇದೆಯೇ’ ಎಂದು ಕೇಳುತ್ತಾರೆ ಶಾರುಖ್. ಇದಕ್ಕೆ ಉತ್ತರಿಸುವ ಹಿರಾನಿ, ‘ಒಂದು ಸ್ಕ್ರಿಪ್ಟ್ ಇದೆ. ಅದರಲ್ಲಿ ಕಾಮಿಡಿ, ರೊಮ್ಯಾನ್ಸ್, ಎಮೋಷನ್ಸ್ ಎಲ್ಲವೂ ಇದೆ ಎನ್ನುತ್ತಾರೆ’ ಈ ವಿಚಾರ ಕೇಳಿ ಶಾರುಖ್ ಸಖತ್ ಖುಷಿ ಪಡುತ್ತಾರೆ.
ಸಿನಿಮಾ ಟೈಟಲ್ ಏನು ಎಂದು ಪ್ರಶ್ನೆ ಮಾಡುತ್ತಾರೆ ಶಾರುಖ್. ‘ಡಂಕಿ’ ಎಂಬ ಉತ್ತರ ಹಿರಾನಿ ಕಡೆಯಿಂದ ಬರುತ್ತದೆ. ‘ಡಾಂಕಿ’ ಎಂದು ಕೇಳಿಸಿಕೊಳ್ಳುತ್ತಾರೆ ಶಾರುಖ್. ಆಗ ಹಿರಾನಿ ಸರಿಯಾಗಿ ತಿದ್ದಿ ಹೇಳುತ್ತಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಶಾರುಖ್ ಅವರ ಮತ್ತೊಂದು ಚಿತ್ರ ಘೋಷಣೆ ಆದ ಬಗ್ಗೆ ಅಭಿಮಾನಿಗಳಿಗೆ ಖುಷಿ ಇದೆ.
2018 ತೆರೆಗೆ ಬಂದ ‘ಸಂಜು’ ಚಿತ್ರ ಹಿಟ್ ಆಗಿತ್ತು. ಈ ಸಿನಿಮಾ ತೆರೆಕಂಡ ಬಂದ ಬಳಿಕ ಹಿರಾನಿ ಯಾವುದೇ ಚಿತ್ರ ಘೋಷಣೆ ಮಾಡಿಲ್ಲ. ಇದಾದ ನಾಲ್ಕು ವರ್ಷಗಳ ಬಳಿಕ ಅವರು ಶಾರುಖ್ ಖಾನ್ ಜತೆ ಕೈ ಜೋಡಿಸುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ರಾಜ್ಕುಮಾರ್ ಹಿರಾನಿ ಜತೆ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಸಂಜಯ್ ದತ್, ಆಮಿರ್ ಖಾನ್ ಜತೆಗೆ ಈ ಮೊದಲು ಹಿರಾನಿ ಕೆಲಸ ಮಾಡಿದ್ದಾರೆ. ‘ಡಂಕಿ’ ಸಿನಿಮಾ 2023ರ ಡಿಸೆಂಬರ್ 22ರಂದು ತೆರೆಗೆ ಬರುತ್ತಿದೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋ, ಶಾರುಖ್ ಅವರ ರೆಡ್ ಚಿಲ್ಲೀ ಸ್ಟುಡಿಯೋ ಹಾಗೂ ರಾಜ್ಕುಮಾರ್ ಹಿರಾನಿ ಫಿಲ್ಮ್ಸ್ ಪ್ರೆಸೆಂಟ್ ಮಾಡುತ್ತಿದೆ.
ಇದನ್ನೂ ಓದಿ: ಸೈಫ್ ಮಗನನ್ನು ಕಂಡು ಶಾರುಖ್ ಪುತ್ರ ಅಂತ ಕರೆದ ಫ್ಯಾನ್ಸ್; ಇಬ್ರಾಹಿಂ ಅಲಿ ಖಾನ್ ಪ್ರತಿಕ್ರಿಯೆ ಹೇಗಿತ್ತು?
ಬಾಲಿವುಡ್ಗೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್; ಮಹತ್ವದ ಕೆಲಸಕ್ಕೆ ಶುಭಾರಂಭ