‘ಜವಾನ್’ (Jawan Movie) ಕೇವಲ ಶಾರುಖ್ ಖಾನ್ ಅವರ ಚಿತ್ರವಲ್ಲ. ಅಲ್ಲಿ ಇನ್ನೂ ಕೆಲ ಕಲಾವಿದರು ಪ್ರಮುಖ ಪಾತ್ರವಹಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಜವಾನ್’ ಪ್ರಿವ್ಯೂನಲ್ಲಿ ಅನೇಕ ಕಲಾವಿದರು ಮಿಂಚಿದ್ದರು. ಈ ಸಾಲಿನಲ್ಲಿ ನಯನತಾರಾ ಕೂಡ ಇದ್ದಾರೆ. ಈಗ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ಶಾರುಖ್ ಖಾನ್ (Shah Rukh Khan) ಅವರು ವಿವರಿಸಿದ್ದಾರೆ. ಹೊಸ ಪೋಸ್ಟರ್ ಹಂಚಿಕೊಂಡು ಅವರು ಚಿತ್ರದ ಬಗ್ಗೆ ಇರುವ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಇದು ವೈರಲ್ ಆಗುತ್ತಿದೆ.
ನಟಿ ನಯನತಾರಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ಆ್ಯಕ್ಷನ್ ರೀತಿಯ ಸಿನಿಮಾಗಳನ್ನು ಮಾಡಿಯೂ ಗಮನ ಸೆಳೆದಿದ್ದಾರೆ. ಈ ಮೊದಲು ಅನೇಕ ಸಿನಿಮಾಗಳಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದರು. ಈಗ ‘ಜವಾನ್’ ಸಿನಿಮಾದಲ್ಲೂ ಅವರು ಆ್ಯಕ್ಷನ್ ಮೆರೆಯಲಿದ್ದಾರೆ. ಇದಕ್ಕೆ ಹೊಸ ಪೋಸ್ಟರ್ಗಳೇ ಸಾಕ್ಷಿ.
ಶಾರುಖ್ ಖಾನ್ ಅವರು ಹಂಚಿಕೊಂಡಿರುವ ಹೊಸ ಪೋಸ್ಟರ್ನಲ್ಲಿ ನಯನತಾರಾ ಅವರು ಗನ್ ಹಿಡಿದು ನಿಂತಿದ್ದಾರೆ. ಕಣ್ಣಿಗೆ ಕನ್ನಡಕ ಹಾಕಿದ್ದಾರೆ. ದೇಹಕ್ಕೆ ಅವರು ಬುಲೆಟ್ ಪ್ರೂಫ್ ಜಾಕೆಟ್ ಹಾಕಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ನಯನತಾರಾ ಅವರನ್ನು ಆ್ಯಕ್ಷನ್ ಅವತಾರದಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಇವಳು ಗುಡುಗು. ಬಿರುಗಾಳಿಗೂ ಮೊದಲೇ ಅದರ ಆಗಮನ ಆಗುತ್ತದೆ’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ.
She is the thunder that comes before the storm! #Nayanthara#JawanPrevue Out Now! #Jawan releasing worldwide on 7th September 2023, in Hindi, Tamil & Telugu. pic.twitter.com/STn6a20kka
— Shah Rukh Khan (@iamsrk) July 17, 2023
ಇದನ್ನೂ ಓದಿ: ‘ಶಾರುಖ್ ಜೊತೆ ಮತ್ತೆ ಸಿನಿಮಾ ಮಾಡಬೇಕಿದೆ’; ‘ಜವಾನ್’ ಪ್ರಿವ್ಯೂ ನೋಡಿ ಹೇಳಿಕೆ ನೀಡಿದ ಸ್ಟಾರ್ ನಿರ್ದೇಶಕ
ಶಾರುಖ್ ಖಾನ್ ಅವರು ‘ಪಠಾಣ್’ ಸಿನಿಮಾದಿಂದ ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ. ಇದಾದ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ‘ಜವಾನ್’. ಈ ಕಾರಣಕ್ಕೂ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ನಾಲ್ಕು ಹಿಟ್ ಚಿತ್ರ ಕೊಟ್ಟ ಅಟ್ಲಿ ಅವರು ‘ಜವಾನ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರ ನಿರ್ದೇಶನದ ಬಗ್ಗೆ ಈಗಾಗಲೇ ದೊಡ್ಡ ಭರವಸೆ ಮೂಡಿದೆ. ‘ಜವಾನ್’ ಒಳ್ಳೆಯ ರೀತಿಯಲ್ಲಿ ಮೂಡಿ ಬರಲು ಅವರ ಶ್ರಮವೂ ಇದೆ. ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿದ್ದಾರೆ. ಶಾರುಖ್ ಅವರು ಸೈನಿಕನ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ