2ನೇ ದಿನವೂ ಸುನಾಮಿ ಎಬ್ಬಿಸಿದ ‘ಜವಾನ್​’; ಭಾರತದಲ್ಲಿ 120 ಕೋಟಿ ರೂ. ದಾಟಿದ ಕಲೆಕ್ಷನ್​

|

Updated on: Sep 09, 2023 | 7:35 AM

ಇಷ್ಟು ದಿನಗಳ ಕಾಲ ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ‘ಗದರ್​ 2’ ಸಿನಿಮಾ ಸದ್ದು ಮಾಡುತ್ತಿತ್ತು. ಈಗ ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ ಕಮಾಲ್​ ಮಾಡುತ್ತಿದೆ. ಮೊದಲ ಎರಡು ದಿನಗಳ ಕಾಲ ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಎರಡೇ ದಿನದಲ್ಲಿ ಈ ಸಿನಿಮಾಗೆ ನೂರಾರು ಕೋಟಿ ರೂ. ಕಮಾಯಿ ಆಗಿದೆ.

2ನೇ ದಿನವೂ ಸುನಾಮಿ ಎಬ್ಬಿಸಿದ ‘ಜವಾನ್​’; ಭಾರತದಲ್ಲಿ 120 ಕೋಟಿ ರೂ. ದಾಟಿದ ಕಲೆಕ್ಷನ್​
ಶಾರುಖ್ ಖಾನ್​
Follow us on

ಈ ವರ್ಷ ಶಾರುಖ್​ ಖಾನ್​ ಅವರು ಎರಡನೇ ಸೂಪರ್​ ಹಿಟ್​ ಚಿತ್ರ ನೀಡಿದ್ದಾರೆ. ವರ್ಷದ ಆರಂಭದಲ್ಲಿ ‘ಪಠಾಣ್​’ ಸಿನಿಮಾ ಅಬ್ಬರಿಸಿತ್ತು. ಈಗ ‘ಜವಾನ್​’ ಸಿನಿಮಾ (Jawan Movie) ಕೂಡ ಸಖತ್​ ಸದ್ದು ಮಾಡುತ್ತಿದೆ. ಸೆಪ್ಟೆಂಬರ್​ 7ರಂದು ‘ಜವಾನ್​’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಹಿಂದಿ, ತೆಲುಗು, ತಮಿಳು ಭಾಷೆಗಳಿಂದ ಈ ಸಿನಿಮಾಗೆ ಅಂದಾಜು 75 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಎರಡನೇ ದಿನ ಕೂಡ ಬಾಕ್ಸ್​ ಆಫೀಸ್​ನಲ್ಲಿ (Jawan Day 2 Collection) ಸುನಾಮಿ ಎದ್ದಿದೆ. 2ನೇ ದಿನ 50ರಿಂದ 53 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಂದರೆ, ಎರಡೇ ದಿನಕ್ಕೆ ‘ಜವಾನ್​’ ಸಿನಿಮಾದ ಕಲೆಕ್ಷನ್​ 120 ಕೋಟಿ ರೂಪಾಯಿ ದಾಟಿದಂತಾಗುತ್ತದೆ. ವಿದೇಶಿ ಕಲೆಕ್ಷನ್​ ಸೇರಿಸಿದರೆ ಈ ಮೊತ್ತ ಇನ್ನೂ ದೊಡ್ಡದಾಗಲಿದೆ. ಈ ಗೆಲುವಿನಿಂದ ಶಾರುಖ್​ ಖಾನ್​ (Shah Rukh Khan) ಅವರ ಮುಖದಲ್ಲಿ ನಗು ಅರಳಿದೆ.

ಸೌತ್​ ಸಿನಿಮಾ ಮತ್ತು ಬಾಲಿವುಡ್​ ಮಿಶ್ರಣದ ರೀತಿಯಲ್ಲಿ ‘ಜವಾನ್​’ ಚಿತ್ರ ಮೂಡಿಬಂದಿದೆ. ತಮಿಳಿನ ಯಶಸ್ವಿ ನಿರ್ದೇಶಕ ಅಟ್ಲಿ ಅವರು ಈ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ನಯನತಾರಾ, ಪ್ರಿಯಾಮಣಿ, ವಿಜಯ್​ ಸೇತುಪತಿ ಮುಂತಾದ ದಕ್ಷಿಣದ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ತೆರೆ ಹಿಂದೆ ಕೂಡ ಸೌತ್​ ಸಿನಿಮಾ ಇಂಡಸ್ಟ್ರಿಯ ಪ್ರತಿಭಾವಂತರು ಕೆಲಸ ಮಾಡಿದ್ದಾರೆ. ಇನ್ನು, ಬಾಲಿವುಡ್​ ಕಲಾವಿದರಾದ ದೀಪಿಕಾ ಪಡುಕೋಣೆ, ಸುನಿಲ್​ ಗ್ರೋವರ್​ ಮುಂತಾದವರು ಕೂಡ ‘ಜವಾನ್​’ ಚಿತ್ರದ ಮೆರುಗು ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ‘ಜವಾನ್​’ ಅಬ್ಬರಕ್ಕೆ ಹೆದರಿದ ಕಂಗನಾ ರಣಾವತ್​? ಮುಂದಕ್ಕೆ ಹೋಯ್ತು ‘ಚಂದ್ರಮುಖಿ 2’ ಬಿಡುಗಡೆ ದಿನಾಂಕ

ಇಷ್ಟು ದಿನಗಳ ಕಾಲ ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ‘ಗದರ್​ 2’ ಸಿನಿಮಾ ಸದ್ದು ಮಾಡುತ್ತಿತ್ತು. ಆ ಸಿನಿಮಾ 300 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈಗ ‘ಜವಾನ್​’ ಸಿನಿಮಾ ಕಮಾಲ್​ ಮಾಡುತ್ತಿದೆ. ಮೊದಲ ಎರಡು ದಿನಗಳ ಕಾಲ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಆ್ಯಕ್ಷನ್​ ಪ್ರಿಯರು ಈ ಸಿನಿಮಾವನ್ನು ಸಖತ್​ ಇಷ್ಟಪಟ್ಟಿದ್ದಾರೆ. ಪ್ರೇಕ್ಷಕರಿಂದ ಉತ್ತಮವಾದ ಬಾಯಿ ಮಾತಿನ ಪ್ರಚಾರ ಸಿಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ‘ಜವಾನ್​’ ಸಿನಿಮಾಗೆ ಬಾಕ್ಸ್​ ಆಫೀಸ್​ನಲ್ಲಿ ಅತ್ಯುತ್ತಮವಾಗಿ ಕಮಾಯಿ ಆಗುತ್ತಿದೆ.

ಇದನ್ನೂ ಓದಿ: ‘ಜವಾನ್​’ ಸಿನಿಮಾದ ಜಯಭೇರಿಯ ಹಿಂದಿರುವ ಮೋಡಿಗಾರ ಅಟ್ಲಿ

ಶಾರುಖ್ ಖಾನ್​ ಅವರ ‘ರೆಡ್ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಮೂಲಕ ‘ಜವಾನ್​’ ಸಿನಿಮಾ ನಿರ್ಮಾಣ ಆಗಿದೆ. ಗೌರಿ ಖಾನ್​ ಅವರು ಈ ಚಿತ್ರದ ನಿರ್ಮಾಪಕಿ. ಅದ್ದೂರಿ ಬಜೆಟ್​ನಲ್ಲಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಭರ್ಜರಿ ಕಲೆಕ್ಷನ್​ ಆಗುತ್ತಿರುವುದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಲಾಭ ಆಗುತ್ತಿದೆ. ಇನ್ನೂ ಹಲವು ದಿನಗಳ ಕಾಲ ಈ ಸಿನಿಮಾದ ಅಬ್ಬರ ಮುಂದುವರಿಯಲಿದೆ. ಶಾರುಖ್​ ಖಾನ್​ ಅವರು ಬಾಲಿವುಡ್​ನಲ್ಲಿ ತಾವು ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಿರ್ದೇಶಕ ಅಟ್ಲಿ ಅವರಿಗೆ ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.