‘ಐದು ಬಾರಿ ಪಠಾಣ್​ ನೋಡಿದ್ದೀನಿ, 1 ಕೋಟಿ ರೂ. ಕೊಡಿ’; ಅಭಿಮಾನಿ ಬೇಡಿಕೆ ಕೇಳಿ ಶಾರುಖ್ ಶಾಕ್

|

Updated on: Feb 04, 2023 | 3:56 PM

‘ಪಠಾಣ್​’ ಸಿನಿಮಾ ಎಲ್ಲಾ ವರ್ಗದ ಜನರಿಗೆ ಇಷ್ಟವಾಗಿದೆ. ಅದರಲ್ಲೂ ಫ್ಯಾನ್ಸ್ ಈ ಚಿತ್ರವನ್ನು ಹೆಚ್ಚು ಇಷ್ಟಪಟ್ಟು ನೋಡುತ್ತಿದ್ದಾರೆ. ಕೆಲವರು ಮರಳಿ ಮರಳಿ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುತ್ತಿದ್ದಾರೆ.

‘ಐದು ಬಾರಿ ಪಠಾಣ್​ ನೋಡಿದ್ದೀನಿ, 1 ಕೋಟಿ ರೂ. ಕೊಡಿ’; ಅಭಿಮಾನಿ ಬೇಡಿಕೆ ಕೇಳಿ ಶಾರುಖ್ ಶಾಕ್
ಪಠಾಣ್ ಪೋಸ್ಟರ್
Follow us on

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ (Pathaan Movie) ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಇದು ಶಾರುಖ್ ಖಾನ್ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಶಾರುಖ್ ಖಾನ್ ಅವರು ಈ ಬಾರಿ ಅಭಿಮಾನಿಗಳಿದ್ದಲ್ಲಿ ತೆರಳಿ ಸಿನಿಮಾಗೆ ಪ್ರಚಾರ ನೀಡಿಲ್ಲ. ಬದಲಿಗೆ ಸೋಶಿಯಲ್ ಮೀಡಿಯಾ ಮೂಲಕ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗೆ ಶಾರುಖ್ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ. ಈಗ ಅಭಿಮಾನಿ ಇಟ್ಟ ಬೇಡಿಕೆ ಕೇಳಿ ಶಾರುಖ್ (Shah Rukh Khan) ಅಚ್ಚರಿಗೊಂಡಿದ್ದಾರೆ.

‘ಪಠಾಣ್​’ ಸಿನಿಮಾ ಎಲ್ಲಾ ವರ್ಗದ ಜನರಿಗೆ ಇಷ್ಟವಾಗಿದೆ. ಅದರಲ್ಲೂ ಫ್ಯಾನ್ಸ್ ಈ ಚಿತ್ರವನ್ನು ಹೆಚ್ಚು ಇಷ್ಟಪಟ್ಟು ನೋಡುತ್ತಿದ್ದಾರೆ. ಕೆಲವರು ಮರಳಿ ಮರಳಿ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುತ್ತಿದ್ದಾರೆ. ಇದನ್ನು ಅನೇಕರು ಶಾರುಖ್ ಖಾನ್ ಬಳಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ಪ್ರತಿಯಾಗಿ 1 ಕೋಟಿ ರೂಪಾಯಿ ನೀಡುವಂತೆ ಅಭಿಮಾನಿ ಕೋರಿದ್ದಾನೆ.

‘ನಾನು ಪಠಾಣ್ ಚಿತ್ರವನ್ನು ಐದು ಬಾರಿ ನೋಡಿದ್ದೇನೆ. 700 ಕೋಟಿ ರೂಪಾಯಿಯಲ್ಲಿ 1 ಕೋಟಿ ರೂಪಾಯಿ ನನಗೆ ನೀಡಿ’ ಎಂದು ಅಭಿಮಾನಿ ಶಾರುಖ್ ಖಾನ್ ಬಳಿ ಕೋರಿದ್ದಾನೆ. ‘ಇಷ್ಟು ರಿಟರ್ನ್​ ಷೇರು ಮಾರುಕಟ್ಟೆಯಲ್ಲೂ ಸಿಗೋದಿಲ್ಲ. ಇನ್ನೂ ಕೆಲವು ಬಾರಿ ಸಿನಿಮಾ ನೋಡಿ. ಆಮೇಲೆ ನೋಡೋಣ’ ಎಂದು ಶಾರುಖ್ ಖಾನ್ ಉತ್ತರಿಸಿದ್ದಾರೆ.

#AskSRK ಅಡಿಯಲ್ಲಿ ಶಾರುಖ್ ಖಾನ್ ಪ್ರಶ್ನೆ ಕೇಳೋಕೆ ಅಭಿಮಾನಿಗಳ ಬಳಿ ಕೋರುತ್ತಾರೆ. ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ‘ಶಾರುಖ್ ಖಾನ್ ಅವರ ಪಿಆರ್​ ಟೀಂ ಇದೆಲ್ಲವನ್ನೂ ನೋಡಿಕೊಳ್ಳುತ್ತದೆ. ಆದರೆ, ಅಭಿಮಾನಿಗಳಿಗೆ ಶಾರುಖ್ ಖಾನ್ ಅವರೇ ಉತ್ತರ ನೀಡುತ್ತಿದ್ದಾರೆ ಎಂದು ಖುಷಿಪಡುತ್ತಿದ್ದಾರೆ’ ಎಂದು ಕೆಲವರು ವಾದ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ದಿನ ಕಳೆದಂತೆ ತಗ್ಗುತ್ತಿದೆ ಶಾರುಖ್ ಖಾನ್ ನಟನೆಯ ‘ಪಠಾಣ್​’ ಸಿನಿಮಾ ಕಲೆಕ್ಷನ್​; ಇಲ್ಲಿದೆ ಕಾರಣ

ಜನವರಿ 25ರಂದು ‘ಪಠಾಣ್​’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ತೆರೆಗೆ ಬಂದು 10 ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್​ನಲ್ಲಿ 375 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೊದಲ ದಿನ ಈ ಚಿತ್ರ ಹಿಂದಿಯಲ್ಲಿ ಗಳಿಸಿದ್ದು ಬರೋಬ್ಬರಿ 55 ಕೋಟಿ ರೂಪಾಯಿ. 2ನೇ ದಿನ 68 ಕೋಟಿ ರೂಪಾಯಿ ಗಳಿಸಿ ಸಿನಿಮಾ ಬೀಗಿತು. ಶುಕ್ರವಾರ (ಫೆಬ್ರವರಿ 4) ಸಿನಿಮಾ 13 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಮೂಲಕ ಭಾರತದ ಕಲೆಕ್ಷನ್ 375 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 725 ಕೋಟಿ ರೂಪಾಯಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:53 pm, Sat, 4 February 23