AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​​ಗೆ ಕಾಲಿಡುವುದಕ್ಕೂ ಮೊದಲೇ ಬಂಪರ್ ಚಾನ್ಸ್ ಗಿಟ್ಟಿಸಿಕೊಂಡ ನಟಿ ಸಮಂತಾ

ದಕ್ಷಿಣ ಭಾರತ ಸ್ಟಾರ್ಸ್​ಗಳಿಗೆ ಡಬೂ ರತ್ನಾನಿ ಮಣೆ ಹಾಕೋದು ಕಡಿಮೆ. ಇಂತಹ ಅವಕಾಶವನ್ನು ಸಮಂತಾ ಪಡೆದುಕೊಂಡಿದ್ದಾರೆ. ಇದರಿಂದ ಅವರಿಗೆ ಜನಪ್ರಿಯತೆ ಸಿಕ್ಕಿದೆ.

ಬಾಲಿವುಡ್​​ಗೆ ಕಾಲಿಡುವುದಕ್ಕೂ ಮೊದಲೇ ಬಂಪರ್ ಚಾನ್ಸ್ ಗಿಟ್ಟಿಸಿಕೊಂಡ ನಟಿ ಸಮಂತಾ
ಡಬೂ ರತ್ನಾನಿ ಜತೆ ಸಮಂತಾ
ರಾಜೇಶ್ ದುಗ್ಗುಮನೆ
|

Updated on:Feb 04, 2023 | 11:35 AM

Share

ನಟಿ ಸಮಂತಾ (Samamtha) ಅವರು ದಕ್ಷಿಣ ಭಾರತದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್ ಸರಣಿಯಿಂದ ಅವರು ಹಿಂದಿ ಮಂದಿಗೆ ಪರಿಚಯಗೊಂಡರು. ‘ಪುಷ್ಪ’ ಚಿತ್ರದ (Pushpa Movie) ‘ಹೂ ಅಂತೀಯಾ ಮಾವ..’ ಹಾಡಿನಿಂದ ಅವರು ದೇಶ ಮಟ್ಟದಲ್ಲಿ ಜನಪ್ರಿಯತೆ ಪಡೆದರು. ಅವರು ಅಧಿಕೃತವಾಗಿ ಬಾಲಿವುಡ್​ಗೆ ಕಾಲಿಡದೇ ಇದ್ದರೂ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಇದನ್ನು ಸರಿಯಾದ ರೂಪದಲ್ಲಿ ಬಳಕೆ ಮಾಡಿಕೊಳ್ಳಲು ಸಮಂತಾ ನಿರ್ಧರಿಸಿದ್ದಾರೆ. ಸದ್ಯ ವೆಬ್ ಸೀರಿಸ್ ಶೂಟಿಂಗ್​​ಗಾಗಿ ಅವರು ಮುಂಬೈನಲ್ಲಿದ್ದಾರೆ. ಈ ವೇಳೆ ಅವರು ಮಸ್ತ್​ ಫೋಟೋಶೂಟ್ ಮಾಡಿಸಿದ್ದಾರೆ. ಅದೂ ಬಾಲಿವುಡ್​ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಜತೆ.

ಡಬೂ ರತ್ನಾನಿ ಬಾಲಿವುಡ್​​ನ ಜನಪ್ರಿಯ ಛಾಯಾಗ್ರಾಹಕ. ಪ್ರತಿ ವರ್ಷ ಕ್ಯಾಲೆಂಡರ್ ರಿಲೀಸ್ ಮಾಡುತ್ತಾರೆ. ಇದಕ್ಕಾಗಿ ಸೆಲೆಬ್ರಿಟಿಗಳ ಫೋಟೋ ಕ್ಲಿಕ್​ ಮಾಡುತ್ತಾರೆ. ಈ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಅದರಲ್ಲೂ ದಕ್ಷಿಣ ಭಾರತ ಸ್ಟಾರ್ಸ್​ಗಳಿಗೆ ಡಬೂ ರತ್ನಾನಿ ಮಣೆ ಹಾಕೋದು ಕಡಿಮೆ. ಇಂತಹ ಅವಕಾಶವನ್ನು ಸಮಂತಾ ಪಡೆದುಕೊಂಡಿದ್ದಾರೆ. ಇದರಿಂದ ಅವರಿಗೆ ಜನಪ್ರಿಯತೆ ಸಿಕ್ಕಿದೆ.

ಸಮಂತಾ ಅವರು ಆರೆಂಜ್ ಬಣ್ಣದ ಗೌನ್ ಧರಿಸಿ ಪೋಸ್ ನೀಡಿದ್ದಾರೆ. ಡಬೂ ರತ್ನಾನಿ ಸ್ಟುಡಿಯೋದಲ್ಲಿ ಈ ಫೋಟೋಶೂಟ್ ನಡೆದಿದೆ. ಸಮಂತಾ ಎಗ್ಸೈಟ್ ಆಗಿ ಕಾಣಿಸಿದ್ದಾರೆ. ಇದು ಡಬೂ ರತ್ನಾನಿ ಜತೆ ಸಮಂತಾ ಅವರ ಮೊದಲ ಶೂಟ್​.

ಇದನ್ನೂ ಓದಿ
Image
‘ಖುಷಿ’ ಕಥೆಯಲ್ಲಿ ಬದಲಾವಣೆ ಕೇಳಿದ ಸಮಂತಾ; ನೋ ಎಂದ ನಿರ್ದೇಶಕನಿಗೆ ಡೇಟ್ಸ್ ನಿರಾಕರಿಸಿದ ನಟಿ?
Image
Samantha: ಶಾಕುಂತಲೆ ಆಗಿ ಮಿಂಚಿದ ನಟಿ ಸಮಂತಾ; ಇಲ್ಲಿದೆ ಕ್ಯೂಟ್ ಫೋಟೋಸ್​
Image
Samantha Photos: ‘ನಂಬಿಕೆಯ ಹಾದಿಯಲ್ಲಿ ಮೊದಲ ಹೆಜ್ಜೆ’; ಸಮಂತಾ ಬದುಕಿನ ಹೊಸ ಪಾಸಿಟಿವ್​ ಮಂತ್ರ ಇಲ್ಲಿದೆ..

ಸಮಂತಾ ಹಾಗೂ ವರುಣ್ ಧವನ್ ಒಟ್ಟಾಗಿ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್​ನಲ್ಲಿ ಫೇಮಸ್ ಆದ ಸಿಟಾಡೆಲ್​​ನ ಸ್ಫೂರ್ತಿಯಾಗಿಟ್ಟುಕೊಂಡು, ಭಾರತಕ್ಕೆ ಹೊಂದುವಂತೆ ಕಥೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಸಮಂತಾ ಹಾಗೂ ವರುಣ್ ಒಟ್ಟಾಗಿ ನಟಿಸುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​’ ಖ್ಯಾತಿಯ ರಾಜ್ ಹಾಗೂ ಡಿಕೆ ಈ ಸೀರಿಸ್​ಗೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Samantha: ಮತ್ತೆ ವರ್ಕೌಟ್ ಶುರು ಮಾಡಿದ ಸಮಂತಾ; ವಿಚಿತ್ರ ಕಾಯಿಲೆಯಿಂದ ಹೊರಬರಲು ನಟಿಯ ಪ್ರಯತ್ನ

ಸಮಂತಾಗೆ Myositis ಹೆಸರಿನ ಕಾಯಿಲೆ ಕಾಡಿತ್ತು. ಸ್ನಾಯುಗಳಲ್ಲಿ ಅತೀವವಾಗಿ ನೋವು ಕಾಣುವ ಸಮಸ್ಯೆ ಇದಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಕಾರಣದಿಂದ ಹಲವು ತಿಂಗಳ ಕಾಲ ಅವರು ವಿಶ್ರಾಂತಿಯಲ್ಲಿದ್ದರು. ಇದರಿಂದ ಅವರ ಪ್ರಾಜೆಕ್ಟ್​​ಗಳ ಶೂಟಿಂಗ್​ ವಿಳಂಬ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:24 am, Sat, 4 February 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು