‘ಖುಷಿ’ ಕಥೆಯಲ್ಲಿ ಬದಲಾವಣೆ ಕೇಳಿದ ಸಮಂತಾ; ನೋ ಎಂದ ನಿರ್ದೇಶಕನಿಗೆ ಡೇಟ್ಸ್ ನಿರಾಕರಿಸಿದ ನಟಿ?

Rajesh Duggumane

Updated on: Jan 25, 2023 | 6:30 AM

2019ರಲ್ಲಿ ತೆರೆಗೆ ಬಂದ ಸಮಂತಾ-ನಾಗ ಚೈತನ್ಯ ನಟನೆಯ ‘ಮಜಿಲಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವ ನಿರ್ವಾಣ ಅವರೇ ‘ಖುಷಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

‘ಖುಷಿ’ ಕಥೆಯಲ್ಲಿ ಬದಲಾವಣೆ ಕೇಳಿದ ಸಮಂತಾ; ನೋ ಎಂದ ನಿರ್ದೇಶಕನಿಗೆ ಡೇಟ್ಸ್ ನಿರಾಕರಿಸಿದ ನಟಿ?
ವಿಜಯ್ ದೇವರಕೊಂಡ-ಸಮಂತಾ

ನಟಿ ಸಮಂತಾ (Samantha) ಅವರು ಅಪರೂಪ ಹಾಗೂ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರಿಗೆ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಅವರು ಸಂಪೂರ್ಣವಾಗಿ ಚೇತರಿಕೆ ಕಾಣಲು ಇನ್ನೂ ಸಮಯ ಬೇಕಿದೆ. ಈಗ ಸಮಂತಾ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕೆಲವು ಪ್ರಾಜೆಕ್ಟ್​​ಗೆ ಅವರು ಡೇಟ್ಸ್ ನೀಡಿದ್ದಾರೆ. ಆದರೆ, ಅವರ ನಟನೆಯ ‘ಖುಷಿ’ ಚಿತ್ರಕ್ಕೆ (Khushi Movie) ಸಮಂತಾ ಡೇಟ್ಸ್ ನೀಡೋಕೆ ಹಿಂಜರಿಯುತ್ತಿದ್ದಾರೆ ಎಂದು ವರದಿ ಆಗಿದೆ. ಸಮಂತಾ ಕಥೆಯಲ್ಲಿ ಬದಲಾವಣೆ ಕೇಳಿದ್ದು, ಇದನ್ನು ಮಾಡೋಕೆ ನಿರ್ದೇಶಕರು ನಿರಾಕರಿಸಿದ್ದು ಕಾರಣ ಎನ್ನಲಾಗುತ್ತಿದೆ.

2019ರಲ್ಲಿ ತೆರೆಗೆ ಬಂದ ಸಮಂತಾ-ನಾಗ ಚೈತನ್ಯ ನಟನೆಯ ‘ಮಜಿಲಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವ ನಿರ್ವಾಣ ಅವರೇ ‘ಖುಷಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಕಾಶ್ಮೀರದಲ್ಲಿ ಒಂದು ಹಂತದ ಶೂಟಿಂಗ್ ಪೂರ್ಣಗೊಂಡಿದೆ. ಈಗ ಎರಡನೇ ಹಂತದ ಶೂಟಿಂಗ್ ನಡೆಯಬೇಕು ಎನ್ನುವಾಗಲೇ ಸಮಂತಾಗೆ ಅನಾರೋಗ್ಯ ಕಾಡಿತು. ಈಗ ಅವರು ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಈ ಚಿತ್ರಕ್ಕೆ ಅವರು ಸಮಯ ನೀಡುತ್ತಿಲ್ಲ.

ಮೂಲಗಳ ಪ್ರಕಾರ ‘ಖುಷಿ’ ಚಿತ್ರದಲ್ಲಿ ಸಮಂತಾ ಪಾತ್ರಕ್ಕೆ ಹೆಚ್ಚು ತೂಕವಿಲ್ಲ. ಹೀಗಾಗಿ, ಕಥೆಯಲ್ಲಿ ಬದಲಾವಣೆ ಮಾಡಿ ಪಾತ್ರಕ್ಕೆ ಹೆಚ್ಚಿನ ತೂಕ ಕೊಡುವಂತೆ ಸಮಂತಾ ಕೇಳಿದ್ದಾರೆ. ಆದರೆ, ಇದನ್ನು ನಿರ್ದೇಶಕರು ನಿರಾಕರಿಸಿದ್ದಾರೆ. ಹೀಗಾಗಿ ಸಮಂತಾ ಡೇಟ್ಸ್ ನೀಡೋಕೆ ಹಿಂದೇಟು ಹಾಕಿದ್ದಾರೆ.

ಇದನ್ನೂ ಓದಿ: Samantha: ಶಾಕುಂತಲೆ ಆಗಿ ಮಿಂಚಿದ ನಟಿ ಸಮಂತಾ; ಇಲ್ಲಿದೆ ಕ್ಯೂಟ್ ಫೋಟೋಸ್​

ಆದರೆ, ತಂಡದವರು ಹೇಳೋದೆ ಬೇರೆ. ಸಮಂತಾ ಅವರು ಇಷ್ಟು ದಿನ ವಿಶ್ರಾಂತಿಯಲ್ಲಿದ್ದರು. ಫೆಬ್ರವರಿ ಮಧ್ಯದಿಂದ ಸಮಂತಾ ಅವರು ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಸಮಂತಾ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada