ನಟಿ ಸಮಂತಾ ರುತ್ ಪ್ರಭು ಅವರು ಅನಾರೋಗ್ಯದಿಂದ ಸಂಪೂರ್ಣವಾಗಿ ಇನ್ನೂ ಗುಣಮುಖರಾಗಿಲ್ಲ. ಅದರ ನಡುವೆಯೂ ಅವರು ‘ಶಾಕುಂತಲಂ’ ಸಿನಿಮಾದ ಪ್ರಮೋಷನ್ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
1 / 5
ವೈಯಕ್ತಿಕ ಬದುಕಿನಲ್ಲಿ ಸಮಂತಾ ರುತ್ ಪ್ರಭು ಅವರಿಗೆ ಸಾಕಷ್ಟು ಅಡೆತಡೆಗಳು ಬರುತ್ತಿವೆ. ಅವುಗಳನ್ನು ದಾಟಿಕೊಂಡು ಮತ್ತೆ ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲಲು ಅವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ನಂಬಿಕೆಯ ಮಂತ್ರ ಜಪಿಸುತ್ತಿದ್ದಾರೆ.
2 / 5
‘ನಂಬಿಕೆಯಲ್ಲಿ ಮೊದಲ ಹೆಜ್ಜೆ ಇಡಿ. ಎಲ್ಲ ಮೆಟ್ಟಿಲುಗಳು ಕಾಣಲೇಬೇಕು ಅಂತೇನೂ ಇಲ್ಲ. ಕೇವಲ ಮೊದಲ ಹೆಜ್ಜೆ ಇಡಿ’ ಎಂಬ ಮಾತನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ‘ಇದನ್ನೇ ನಾವೆಲ್ಲ ಮಾಡೋದು’ ಎಂದು ಅವರು ಬರೆದುಕೊಂಡಿದ್ದಾರೆ.
3 / 5
ಸಮಂತಾ ರುತ್ ಪ್ರಭು ಅವರು ಮೊದಲಿನಂತೆ ಚಾರ್ಮ್ ಆಗಿಲ್ಲ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಅದರಿಂದ ಅವರಿಗೆ ನೋವಾಗಿದೆ. ಆದರೂ ಕೂಡ ಪಾಸಿಟಿವ್ ಮನಸ್ಥಿತಿಯನ್ನು ಬೆಳೆಸಿಕೊಂಡು ಸಮಂತಾ ಮನ್ನಡೆಯುತ್ತಿದ್ದಾರೆ.
4 / 5
ಬಹುನಿರೀಕ್ಷಿತ ‘ಶಾಕುಂತಲಂ’ ಸಿನಿಮಾದಲ್ಲಿ ಸಮಂತಾ ರುತ್ ಪ್ರಭು ಅವರು ನಟಿಸಿದ್ದಾರೆ. ಈ ಚಿತ್ರ ಫೆಬ್ರವರಿ 17ರಂದು ಬಿಡುಗಡೆ ಆಗಲಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಟ್ರೇಲರ್ ನೋಡಿ ಅಭಿಮಾನಿಗಳ ಮನದಲ್ಲಿನ ನಿರೀಕ್ಷೆ ಹೆಚ್ಚಾಗಿದೆ.