- Kannada News Photo gallery Shaakuntalam actress Samantha Ruth Prabhu says Take the first step in faith
Samantha Photos: ‘ನಂಬಿಕೆಯ ಹಾದಿಯಲ್ಲಿ ಮೊದಲ ಹೆಜ್ಜೆ’; ಸಮಂತಾ ಬದುಕಿನ ಹೊಸ ಪಾಸಿಟಿವ್ ಮಂತ್ರ ಇಲ್ಲಿದೆ..
Samantha Ruth Prabhu: ಎಷ್ಟೇ ಕಷ್ಟಗಳು ಎದುರಾದರೂ ಕೂಡ ನಟಿ ಸಮಂತಾ ರುತ್ ಪ್ರಭು ಅವರು ಕುಗ್ಗಿಲ್ಲ. ಪಾಸಿಟಿವ್ ಮನಸ್ಥಿತಿಯನ್ನು ಅಳವಡಿಸಿಕೊಂಡು ಅವರು ಮುನ್ನಡೆಯುತ್ತಿದ್ದಾರೆ.
Updated on:Jan 10, 2023 | 8:53 PM

ನಟಿ ಸಮಂತಾ ರುತ್ ಪ್ರಭು ಅವರು ಅನಾರೋಗ್ಯದಿಂದ ಸಂಪೂರ್ಣವಾಗಿ ಇನ್ನೂ ಗುಣಮುಖರಾಗಿಲ್ಲ. ಅದರ ನಡುವೆಯೂ ಅವರು ‘ಶಾಕುಂತಲಂ’ ಸಿನಿಮಾದ ಪ್ರಮೋಷನ್ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ಸಮಂತಾ ರುತ್ ಪ್ರಭು ಅವರಿಗೆ ಸಾಕಷ್ಟು ಅಡೆತಡೆಗಳು ಬರುತ್ತಿವೆ. ಅವುಗಳನ್ನು ದಾಟಿಕೊಂಡು ಮತ್ತೆ ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲಲು ಅವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ನಂಬಿಕೆಯ ಮಂತ್ರ ಜಪಿಸುತ್ತಿದ್ದಾರೆ.

‘ನಂಬಿಕೆಯಲ್ಲಿ ಮೊದಲ ಹೆಜ್ಜೆ ಇಡಿ. ಎಲ್ಲ ಮೆಟ್ಟಿಲುಗಳು ಕಾಣಲೇಬೇಕು ಅಂತೇನೂ ಇಲ್ಲ. ಕೇವಲ ಮೊದಲ ಹೆಜ್ಜೆ ಇಡಿ’ ಎಂಬ ಮಾತನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ‘ಇದನ್ನೇ ನಾವೆಲ್ಲ ಮಾಡೋದು’ ಎಂದು ಅವರು ಬರೆದುಕೊಂಡಿದ್ದಾರೆ.

ಸಮಂತಾ ರುತ್ ಪ್ರಭು ಅವರು ಮೊದಲಿನಂತೆ ಚಾರ್ಮ್ ಆಗಿಲ್ಲ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಅದರಿಂದ ಅವರಿಗೆ ನೋವಾಗಿದೆ. ಆದರೂ ಕೂಡ ಪಾಸಿಟಿವ್ ಮನಸ್ಥಿತಿಯನ್ನು ಬೆಳೆಸಿಕೊಂಡು ಸಮಂತಾ ಮನ್ನಡೆಯುತ್ತಿದ್ದಾರೆ.

ಬಹುನಿರೀಕ್ಷಿತ ‘ಶಾಕುಂತಲಂ’ ಸಿನಿಮಾದಲ್ಲಿ ಸಮಂತಾ ರುತ್ ಪ್ರಭು ಅವರು ನಟಿಸಿದ್ದಾರೆ. ಈ ಚಿತ್ರ ಫೆಬ್ರವರಿ 17ರಂದು ಬಿಡುಗಡೆ ಆಗಲಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಟ್ರೇಲರ್ ನೋಡಿ ಅಭಿಮಾನಿಗಳ ಮನದಲ್ಲಿನ ನಿರೀಕ್ಷೆ ಹೆಚ್ಚಾಗಿದೆ.
Published On - 8:53 pm, Tue, 10 January 23




