‘ಕಿಂಗ್’ ಚಿತ್ರಕ್ಕಾಗಿ ಹಾಲಿವುಡ್ ಪೋಸ್ ಕದ್ದ ಶಾರುಖ್ ಖಾನ್? ಶುರುವಾಯ್ತು ಚರ್ಚೆ  

ಶಾರುಖ್ ಖಾನ್ 'ಕಿಂಗ್' ಚಿತ್ರದ ಹೊಸ ಲುಕ್, ಬ್ರಾಡ್ ಪಿಟ್ 'ಎಫ್1' ಸಿನಿಮಾದ ಲುಕ್ ಹೋಲುತ್ತಿದೆ. ನೆಟ್ಟಿಗರು ಈ ವಿಚಾರದಲ್ಲಿ ಚರ್ಚೆ ನಡೆಯತ್ತದೆ. ಶಾರುಖ್ ಹಳೆಯ 'ಜಬ್ ಹ್ಯಾರಿ ಮೆಟ್ ಸೇಜಲ್' ಲುಕ್‌ನಂತೆ ಇದೆಯೆಂದೂ ಕೆಲವರು ಗುರುತಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಯುಗದಲ್ಲಿ ಇಂತಹ ಹೋಲಿಕೆಗಳು ತಕ್ಷಣ ವೈರಲ್ ಆಗುತ್ತಿವೆ.

‘ಕಿಂಗ್’ ಚಿತ್ರಕ್ಕಾಗಿ ಹಾಲಿವುಡ್ ಪೋಸ್ ಕದ್ದ ಶಾರುಖ್ ಖಾನ್? ಶುರುವಾಯ್ತು ಚರ್ಚೆ  
ಶಾರುಖ್-ಬ್ರಾಡ್ ಪಿಟ್

Updated on: Nov 03, 2025 | 11:43 AM

ಇದು ಸೋಶಿಯಲ್ ಮೀಡಿಯಾ ಯುಗ. ಒಟಿಟಿ ವ್ಯಾಪ್ತಿ ಹಿರಿದಾಗಿದೆ. ಹೀಗಾಗಿ, ವಿಶ್ವದ ಯಾವ ಮೂಲೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದು. ಸಿನಿಮಾ ವಿಚಾರದಲ್ಲಂತೂ ಅಂಗೈನಲ್ಲೇ ವಿಶ್ವದ ಎಲ್ಲಾ ಚಿತ್ರರಂಗ ಇದೆ ಎಂದರೂ ತಪ್ಪಾಗಲಾರದು.. ಹೀಗಾಗಿ ಯಾವುದೇ ಪೋಸ್​, ಕಥೆ ಕಾಪಿ ಮಾಡಿದರೂ ಅದನ್ನು ನೆಟ್ಟಿಗರು ಸುಲಭದಲ್ಲಿ ಪತ್ತೆ ಹಚ್ಚುತ್ತಾರೆ. ಈಗ ಶಾರುಖ್ ಖಾನ್ ಅವರ 60ನೇ ವರ್ಷದ ಬರ್ತ್​ಡೇ ಪ್ರಯುಕ್ತ ‘ಕಿಂಗ್’ ಚಿತ್ರದ ಲುಕ್ ರಿವೀಲ್ ಆಗಿದೆ. ಇದು ಹಾಲಿವುಡ್​ನ ‘ಎಫ್​ 1’ ಚಿತ್ರದ ಬ್ರಾಡ್ ಪಿಟ್ ಲುಕ್ ಹೋಲುತ್ತಿದೆ.

2023ರಲ್ಲಿ ರಿಲೀಸ್ ಆದ ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳ ಮೂಲಕ ಗೆಲುವು ಕಂಡ ಶಾರುಖ್ ಖಾನ್ , ನಂತರ ಬ್ರೇಕ್ ಪಡೆದರು. ಈಗ ಎರಡು ವರ್ಷಗಳ ಬಳಿಕ ‘ಕಿಂಗ್’ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಅವರ ಒಡೆತನದ ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ಇದಕ್ಕೆ ಬಂಡವಾಳ ಹೂಡುತ್ತಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಮಗಳು ಸುಹಾನಾ ಕೂಡ ನಟಿಸುತ್ತಿದ್ದಾರೆ. ನವೆಂಬರ್ 2 ಶಾರುಖ್ ಖಾನ್ ಜನ್ಮದಿನ. ಈ ಪ್ರಯುಕ್ತ ‘ಕಿಂಗ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

ಕಿಂಗ್ ಚಿತ್ರದ ಪೋಸ್ಟರ್

ಇದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಅನೇಕರು ಬ್ರಾಡ್ ಪಿಟ್ ಲುಕ್​ಗೆ ಇದನ್ನು ಹೋಲಿಕೆ ಮಾಡಿದ್ದಾರೆ. ಜಾಕೆಟ್ ಬಣ್ಣ, ಶರ್ಟ್ ಬಣ್ಣ, ಹೇರ್​ಸ್ಟೈಲ್ ನಡುವೆ ಹೋಲಿಕೆ ಇದೆ. ಬ್ರಾಡ್ ಪಿಟ್ ಬ್ಯಾಗ್ ಹಿಡಿದು ಬರುವಂತೆ, ಶಾರುಖ್ ಕೈಯಲ್ಲೂ ಒಂದು ಬ್ಯಾಗ್ ಇದೆ. ಈ ಲುಕ್​ನ ಚೀಪ್ ಕಾಪಿ ಎಂದು ಕೆಲವರು ಕರೆದಿದ್ದಾರೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಬಂದ ಶಾರುಖ್ ಖಾನ್: ಹುಟ್ಟುಹಬ್ಬಕ್ಕೆ ‘ಕಿಂಗ್’ ಟೀಸರ್ ರಿಲೀಸ್

2017ರಲ್ಲಿ ಶಾರುಖ್ ಖಾನ್ ನಟನೆಯ ‘ಜಬ್ ಹ್ಯಾರಿ ಮೆಟ್ ಸೇಜಲ್’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದಲ್ಲೂ ಶಾರುಖ್ ಖಾನ್ ಅವರ ಲುಕ್ ಇದೇ ರೀತಿ ಇತ್ತು. ಈಗ ಅದೇ ಲುಕ್​ನ ಮತ್ತೆ ಅನುಕರಿಸಿದರೇ ಎಂಬ ಪ್ರಶ್ನೆಯೂ ಮೂಡಿದೆ. ‘ಕಿಂಗ್’ ಚಿತ್ರದ ಕಥೆ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.