ಮಾಜಿ ಪ್ರೇಯಸಿಯ ಪತಿಗೆ ಚೂರಿ ಇರಿತ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಶಾಹಿದ್ ಕಪೂರ್

ಸೈಫ್ ಅಲಿ ಖಾನ್ ಅವರ ಮೇಲೆ ದರೋಡೆಕೋರರು ಮಾಡಿದ ಹಲ್ಲೆಯ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನಟ ಶಾಹಿದ್ ಕಪೂರ್​ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ‘ದೇವ’ ಸಿನಿಮಾದ ಟ್ರೇಲರ್​ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಈ ಕುರಿತು ತಮ್ಮ ಅನಿಸಿಕೆ ತಿಳಿಸಿದರು. ಶಾಹಿದ್ ಕಪೂರ್​ ಹೇಳಿದ್ದೇನು? ಇಲ್ಲಿದೆ ಮಾಹಿತಿ..

ಮಾಜಿ ಪ್ರೇಯಸಿಯ ಪತಿಗೆ ಚೂರಿ ಇರಿತ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಶಾಹಿದ್ ಕಪೂರ್
Shahid Kapoor, Kareena Kapoor, Saif Ali Khan

Updated on: Jan 17, 2025 | 8:03 PM

ಒಂದು ಕಾಲದಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್​ ಪ್ರೀತಿಸುತ್ತಿದ್ದರು. ನಂತರ ಬ್ರೇಕಪ್ ಆಯಿತು. ಆಮೇಲೆ ಕರೀನಾ ಕಪೂರ್​ ಅವರು ಸೈಫ್ ಅಲಿ ಖಾನ್ ಜೊತೆ ಮದುವೆಯಾದರು. ಇತ್ತೀಚೆಗೆ ಸೈಫ್ ಅಲಿ ಖಾನ್ ಮನೆಯಲ್ಲಿ ಒಂದು ಕಹಿ ಘಟನೆ ನಡೆಯಿತು. ಸೈಫ್ ಕುಟುಂಬ ವಾಸವಾಗಿರುವ ಅಪಾರ್ಟ್​ಮೆಂಟ್​ಗೆ ನುಗ್ಗಿದ ಕಳ್ಳರು ನಟನ ಮೇಲೆ ಹಲ್ಲೆ ಮಾಡಿದರು. ಚೂರಿಯಿಂದ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಈಗ ಶಾಹಿದ್ ಕಪೂರ್ ಪ್ರತಿಕ್ರಿಯಿಸಿದ್ದಾರೆ.

ಶಾಹಿದ್ ಕಪೂರ್ ಅವರು ‘ದೇವ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ್ಯಕ್ಷನ್-ಥ್ರಿಲ್ಲರ್ ಕಹಾನಿ ಇರುವ ಈ ಚಿತ್ರ ಜನವರಿ 31ರಂದು ರಿಲೀಸ್ ಆಗಲಿದೆ. ಇಂದು (ಜನವರಿ 17) ಮುಂಬೈನಲ್ಲಿ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಈ ವೇಳೆ ಸೈಫ್ ಅಲಿ ಖಾನ್ ಬಗ್ಗೆ ಶಾಹಿದ್ ಕಪೂರ್​ ಅವರಿಗೆ ಪ್ರಶ್ನೆ ಎದುರಾಗಿದೆ. ಘಟನೆಯ ಬಗ್ಗೆ ಶಾಹಿದ್ ಕಪೂರ್​ ಅವರು ಕಳವಳ ವ್ಯಕ್ತಪಡಿದ್ದಾರೆ.

‘ಸೈಫ್ ಅಲಿ ಖಾನ್ ಅವರಿಗೆ ಮನೆಯಲ್ಲೇ ಈ ರೀತಿ ಆಯಿತು ಎಂದು ತಿಳಿದಾಗ ನಮಗೆಲ್ಲ ಶಾಕ್ ಆಯಿತು. ಮುಂಬೈ ರೀತಿಯ ನಗರದಲ್ಲಿ ಇದನ್ನು ಒಪ್ಪಿಕೊಳ್ಳುವುದು ನಿಜಕ್ಕೂ ಕಷ್ಟ. ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ನಾನು ನಂಬಿದ್ದೇನೆ. ಇದು ಸುರಕ್ಷಿತ ಜಾಗ. ಸಾಮಾನ್ಯವಾಗಿ ಇಂಥದ್ದೆಲ್ಲ ಆಗುವುದಿಲ್ಲ. ಕುಟುಂಬದ ಯಾರಾದರೂ ರಾತ್ರಿ 2 ಅಥವಾ 3 ಗಂಟೆಗೆ ಕೂಡ ಸುರಕ್ಷಿತವಾಗಿ ಹೊರಗೆ ಹೋಗಬಹುದು ಅಂತ ನಾವು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಈ ಘಟನೆ ನಿಜಕ್ಕೂ ಶಾಕಿಂಗ್. ಸೈಫ್ ಬೇಗ ಗುಣಮುಖರಾಗಲಿ ಎಂದು ನಾವು ಬಯಸುತ್ತಿದ್ದೇವೆ’ ಎಂದು ಶಾಹಿದ್ ಕಪೂರ್​ ಹೇಳಿದ್ದಾರೆ.

ಇದನ್ನೂ ಓದಿ: ಸೈಫ್​ಗೆ ಚಾಕು ಇರಿತಕ್ಕೂ ಮುನ್ನ 3 ವರ್ಷದ ಮಗುವಿನ ರೂಮಿಗೆ ನುಗ್ಗಿ 1 ಕೋಟಿ ರೂ. ಕೇಳಿದ ಕಳ್ಳ

ಕಳ್ಳರು ಚೂರಿ ಇರಿದಾಗ ಸೈಫ್ ಅಲಿ ಖಾನ್​ ಅವರಿಗೆ ಗಂಭೀರ ಗಾಯಗಳಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಬೆನ್ನಿನಲ್ಲಿ ಇದ್ದ ಚಾಕು ಹೊರಗೆ ತೆಗೆದಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಲಾಗಿದೆ. ಈಗ ಅವರು ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿ ಇದ್ದಾರೆ. ಆಪ್ತರ ಫೋನ್ ಕರೆಗಳನ್ನು ಕೂಡ ಸ್ವೀಕರಿಸುತ್ತಿದ್ದಾರೆ. ಕೆಲವು ದಿನಗಳಲ್ಲಿ ಡಿಸ್ಚಾರ್ಜ್​ ಆಗಲಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಅವರು ಬೇರೆ ಮನೆಗೆ ತೆರಳಿದ್ದಾರೆ. ಕಳ್ಳರು ದಾಳಿ ಮಾಡಿದ ಆ ಅಪಾರ್ಟ್​ಮೆಂಟ್​ನಲ್ಲಿ ಈಗ ಸೈಫ್ ಕುಟುಂಬದ ಯಾರೂ ಕೂಡ ವಾಸಿಸುತ್ತಿಲ್ಲ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.