‘ನನ್ನ ಮಾಜಿ ಗೆಳತಿಯರಿಂದ ಮೋಸ ಹೋಗಿದ್ದೇನೆ’; ಒಪ್ಪಿಕೊಂಡ ಶಾಹಿದ್ ಕಪೂರ್

|

Updated on: May 06, 2024 | 8:29 AM

ಸೆಲೆಬ್ರಿಟಿಗಳು ಮಾಜಿ ಲವರ್​ಗಳ ಜೊತೆ ಮಾತನಾಡೋದು ಕಡಿಮೆ. ಆದರೆ, ಈಗ ಶಾಹಿದ್ ಕಪೂರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮೀರಾ ಕಪೂರ್ ಅವರನ್ನು ಮದುವೆ ಆಗುವುದಕ್ಕೂ ಮೊದಲು ಶಾಹಿದ್ ಕಪೂರ್ ಅವರು ಕೆಲವು ಹುಡುಗಿಯರ ಜೊತೆ ಸುತ್ತಾಟ ನಡೆಸಿದ್ದರು. ಆದರೆ, ಈ ವೇಳೆ ಅವರು ಮೋಸ ಹೋಗಿದ್ದರಂತೆ.

‘ನನ್ನ ಮಾಜಿ ಗೆಳತಿಯರಿಂದ ಮೋಸ ಹೋಗಿದ್ದೇನೆ’; ಒಪ್ಪಿಕೊಂಡ ಶಾಹಿದ್ ಕಪೂರ್
ಶಾಹಿದ್
Follow us on

ಶಾಹಿದ್ ಕಪೂರ್ (Shahid Kapoor) ಅವರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಹೊಂದಿದ್ದಾರೆ. ಸಿನಿಮಾ ಜೊತೆ ವೆಬ್ ಸೀರಿಸ್​ಗಳಲ್ಲೂ ನಟಿಸಿ ಅವರು ಫೇಮಸ್ ಆಗಿದ್ದಾರೆ. ಅವರು ಮೀರಾ ರಜಪೂತ್ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಮೀರಾ ಸಿಗುವುದಕ್ಕೂ ಮೊದಲು ಶಾಹಿದ್ ಕಪೂರ್ ಅವರು ಕೆಲವು ಹುಡುಗಿಯರ ಜೊತೆ ಸುತ್ತಾಟ ನಡೆಸಿದ್ದರು. ಆದರೆ, ಈ ವೇಳೆ ಅವರು ಮೋಸ ಹೋಗಿದ್ದರಂತೆ. ಈ ಬಗ್ಗೆ ಶಾಹಿದ್ ಮಾತನಾಡಿದ್ದಾರೆ.

‘ಪ್ರಿತಿಯಲ್ಲಿ ಇದ್ದಾಗ ಎಷ್ಟು ಬಾರಿ ದ್ರೋಹಕ್ಕೆ ಒಳಗಾಗಿದ್ದೀರಿ’ ಎಂದು ಶಾಹಿದ್ ಅವರಿಗೆ ಸಂದರ್ಶನ ಒಂದರಲ್ಲಿ ಕೇಳಲಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ನನಗೆ ಒಂದರ ಬಗ್ಗೆ ಖಾತ್ರಿ ಇದೆ. ಮತ್ತೊಂದು ಹುಡುಗಿ ಬಗ್ಗೆ ಇನ್ನೂ ಅನುಮಾನ ಇದೆ. ಹೀಗೆ ಒಂದಿಬ್ಬರು ಮೋಸ್ ಮಾಡಿದ್ದಾರೆ’ ಎಂದು ಶಾಹಿದ್ ಕಪೂರ್ ಹೇಳಿದ್ದಾರೆ. ಆದರೆ, ಶಾಹಿದ್ ಅವರು ಯಾವುದೇ ಹುಡುಗಿಯರ ಹೆಸರನ್ನು ತೆಗೆದುಕೊಂಡಿಲ್ಲ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೊದಲು ಶಾಹಿದ್ ಕಪೂರ್ ಅವರು ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ ಮೊದಲಾದವರು ಜೊತೆ ಸುತ್ತಾಡಿದ್ದರು ಎನ್ನಲಾಗಿದೆ. ಆದರೆ, ಈ ವಿಚಾರವನ್ನು ಅವರು ಒಪ್ಪಿಕೊಂಡಿಲ್ಲ. ಇದನ್ನು ಅವರು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಇವರಲ್ಲಿ ಯಾರಾದರೂ ಶಾಹಿದ್​ಗೆ ಮೋಸ ಮಾಡಿದರೇ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಬಹುಶಃ ಕರೀನಾ ಕಪೂರ್ ಪ್ರಿಯಾಂಕಾ ಚೋಪ್ರಾ ಬಗ್ಗೆ ಶಾಹಿದ್ ಹೇಳಿರಬಹುದು’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶಾಹಿದ್ ಕಪೂರ್​​ ಜನ್ಮದಿನ: ಈ ಬಾಲಿವುಡ್ ಹೀರೋನ ಆಸ್ತಿ ಎಷ್ಟು ಕೋಟಿ ರೂಪಾಯಿ?

ಶಾಹಿದ್ ಕಪೂರ್ ಅವರು ಮೀರಾ ಅವರನ್ನು 2015ರಲ್ಲಿ ಮದುವೆ ಆದರು. ಅವರೊಂದಿಗೆ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಸಿನಿಮಾ ವಿಚಾರಕ್ಕೆ ಬರೋದಾದರೆ ಈ ವರ್ಷ ಅವರ ನಟನೆಯ ‘ತೆರಿ ಬಾತೋ ಮೇ ಐಸಾ ಉಲ್ಜಾ ಜಿಯಾ’ ಈ ವರ್ಷ ತೆರೆಗೆ ಬಂದಿದೆ. ‘ದೇವ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.