‘ಪೈಸಾ ವಸೂಲ್​.. ಸಿಕ್ಕಾಪಟ್ಟೆ ಕಾಮಿಡಿ ಇದೆ’: ಶಾಹಿದ್​ ಕಪೂರ್​ ಹೊಸ ಸಿನಿಮಾಗೆ ಪ್ರೇಕ್ಷಕರು ಫಿದಾ

|

Updated on: Feb 09, 2024 | 3:27 PM

ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಪ್ರೇಕ್ಷಕರಿಗೆ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ಇಷ್ಟ ಆಗಿದೆ. ಇದರಲ್ಲಿನ ಲವ್​ ಸ್ಟೋರಿ ಮತ್ತು ಕಾಮಿಡಿಯನ್ನು ಜನರು ಇಷ್ಟಪಟ್ಟಿದ್ದಾರೆ. ಎಕ್ಸ್​ (ಟ್ವಿಟರ್​) ಮೂಲಕ ಅನೇಕರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಶಾಹಿದ್​ ಕಪೂರ್​ ಮತ್ತು ಕೃತಿ ಸನೋನ್​ ನಟನೆಯ ಈ ಸಿನಿಮಾಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಪಾಸಿಟಿವ್​ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ.

‘ಪೈಸಾ ವಸೂಲ್​.. ಸಿಕ್ಕಾಪಟ್ಟೆ ಕಾಮಿಡಿ ಇದೆ’: ಶಾಹಿದ್​ ಕಪೂರ್​ ಹೊಸ ಸಿನಿಮಾಗೆ ಪ್ರೇಕ್ಷಕರು ಫಿದಾ
ಕೃತಿ ಸನೋನ್​, ಶಾಹಿದ್​ ಕಪೂರ್​
Follow us on

ಬಾಲಿವುಡ್​ ನಟ ಶಾಹಿದ್​ ಕಪೂರ್​ (Shahid Kapoor) ಅಭಿನಯದ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಕೃತಿ ಸನೋನ್ (Kriti Sanon)​ ನಟಿಸಿದ್ದಾರೆ. ಟ್ರೇಲರ್​ ಬಿಡುಗಡೆ ಆದಾಗಲೇ ಈ ಸಿನಿಮಾ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಗಿತ್ತು. ಒಂದು ಡಿಫರೆಂಟ್​ ಆದಂತಹ ಪ್ರೇಮ್​ ಕಹಾನಿ ಈ ಸಿನಿಮಾದಲ್ಲಿ ಇದೆ. ಇದನ್ನು ‘ಅಸಾಧ್ಯ ಲವ್​ಸ್ಟೋರಿ’ ಎಂದು ಚಿತ್ರತಂಡ ಕರೆದುಕೊಂಡಿದೆ. ಆದರೆ ಪ್ರೇಕ್ಷಕರು ಏನು ಹೇಳ್ತಾರೆ ಎಂಬುದೇ ಮುಖ್ಯ. ಇಂದು (ಫೆಬ್ರವರಿ 09) ವಿಶ್ವಾದ್ಯಂತ ರಿಲೀಸ್​ ಆದ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ (Teri Baaton Mein Aisa Uljha Jiya) ಸಿನಿಮಾವನ್ನು ಪ್ರೇಕ್ಷಕರು ಫಸ್ಟ್​ ಡೇ ಫಸ್ಟ್​ ನೋಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಎಕ್ಸ್​ (ಟ್ವಿಟರ್​) ಮೂಲಕ ಕೆಲವು ಪ್ರೇಕ್ಷಕರು ತಮ್ಮ ಅನಿಸಿಕೆ ತಿಳಿಸಿದ್ದಾರೆ.

ನಟಿ ಕೃತಿ ಸನೋನ್​ ಅವರು ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾದಲ್ಲಿ ಒಂದು ಡಿಫರೆಂಟ್​ ಪಾತ್ರ ಮಾಡಿದ್ದಾರೆ. ಸಿಫ್ರಾ ಎಂಬ ರೋಬೋಟ್​ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಅವರ ಅಭಿಮಾನಿಗಳಿಗೆ ತುಂಬ ಇಷ್ಟ ಆಗಿದೆ. ಕೃತಿ ಸನೋನ್​ ಅವರ ಅಭಿನಯಕ್ಕೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ. ಕಳೆದ ವರ್ಷ ಬಿಡುಗಡೆ ಆದ ‘ಆದಿಪುರುಷ್​’ ಸಿನಿಮಾದಲ್ಲಿ ಸೀತೆಯ ಮಾತ್ರ ಮಾಡಿ ಗಮನ ಸೆಳೆದಿದ್ದ ಅವರು ಈಗ ರೋಬೋಟ್​ ಆಗಿ ಮನರಂಜನೆ ನೀಡುತ್ತಿದ್ದಾರೆ. ಯಾವ ಪಾತ್ರ ಕೊಟ್ಟರೂ ಅವರು ಜೀವ ತುಂಬುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ.

ಸೈನ್ಸ್​ ಫಿಕ್ಷನ್​ ಮತ್ತು ಕಾಮಿಡಿ ಶೈಲಿಯಲ್ಲಿ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಚಿತ್ರ ಮೂಡಿಬಂದಿದೆ. ಇದರಲ್ಲಿ ಹಾಸ್ಯದ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟ ಆಗಿವೆ. ‘ಇದು ಪೈಸಾ ವಸೂಲ್​ ಸಿನಿಮಾ. ಸಿಕ್ಕಾಪಟ್ಟೆ ಕಾಮಿಡಿ ಇದೆ. ಬೆಸ್ಟ್​ ವಿಷಯ ಏನೆಂದರೆ ಈ ಕಥೆ ಮುಂದುವರಿತ್ತದೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ. ಅದನ್ನು ನೋಡಿ ಅನೇಕರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ.

ಮನರಂಜನೆಯ ದೃಷ್ಟಿಯಿಂದ ಚಿತ್ರ ಅತ್ಯುತ್ತಮವಾಗಿದೆ. ನಿಮ್ಮನ್ನು ನಗುವಂತೆ ಮಾಡುತ್ತದೆ, ಕೆಲವೊಮ್ಮೆ ಅಳುವಂತೆಯೂ ಮಾಡುತ್ತದೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ನಿಮಗೆ ಬಹಳಷ್ಟು ಕಲಿಸುತ್ತದೆ. ಶೇಕಡ 100ರಷ್ಟು ಮನರಂಜನೆ ಇರುವ ಮನರಂಜನಾ ಸಿನಿಮಾ ಇದು’ ಎಂಬ ಅಭಿಪ್ರಾಯ ಕೂಡ ಪ್ರೇಕ್ಷಕರಿಂದ ಕೇಳಿಬಂದಿದೆ. ‘ಕೃತಿ ಸನೋನ್​ ಮತ್ತು ಶಾಹಿದ್​ ಕಪೂರ್​ ಅದ್ಭುತ ನಟರು. ಈ ಸಿನಿಮಾದಲ್ಲಿ ಅವರ ಅಭಿನಯ ಚೆನ್ನಾಗಿದೆ’ ಎಂದು ಕೆಲವರು ಟ್ವೀಟ್​ ಮಾಡಿದ್ದಾರೆ.

‘ಈ ಸಿನಿಮಾದ ಮೊದಲ 20 ನಿಮಿಷ ಸ್ವಲ್ಪ ನಿಧಾನಗತಿಯಲ್ಲಿದೆ. ಆದರೆ ಸ್ಟೋರಿ ಸಾಗುತ್ತದೆ. ಶಾಹಿದ್​ ಕಪೂರ್​ ಮತ್ತು ಕೃತಿ ಸನೋನ್​ ನಡುವಿನ ಕೆಮಿಸ್ಟ್ರೀ ತುಂಬ ಚೆನ್ನಾಗಿದೆ. ಕಥೆ ಅತ್ಯುತ್ತಮವಾಗಿದೆ. ಎಲ್ಲ ಕಲಾವಿದರ ಅಭಿನಯ ಸೂಪರ್​ ಆಗಿದೆ. ಒಟ್ಟಾರೆಯಾಗಿ ಹೇಳಬೇಕು ಎಂದರೆ ಇದು ಫ್ಯಾಮಿಲಿ ಎಂಟರ್​ಟೇನರ್​’ ಎಂದು ಪೋಸ್ಟ್​ ಮಾಡಿರುವ ಪ್ರೇಕ್ಷಕರೊಬ್ಬರು 5ಕ್ಕೆ 3.5 ರೇಟಿಂಗ್​ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ