ಪತಿ ಜೈಲಿನಿಂದ ಬಂದ ಬೆನ್ನಲ್ಲೇ ಸಖತ್​ ಆಗಿ ಡ್ಯಾನ್ಸ್​ ಮಾಡಿದ ನಟಿ ಶಿಲ್ಪಾ ಶೆಟ್ಟಿ

| Updated By: ರಾಜೇಶ್ ದುಗ್ಗುಮನೆ

Updated on: Sep 25, 2021 | 8:11 PM

ಪಿಂಕ್​ ಲೆಹಂಗಾ ತೊಟ್ಟಿದ್ದಾರೆ ಶಿಲ್ಪಾ. ಅವರ ಜತೆಗೆ ಗೀತಾ ಕೂಡ ಡ್ಯಾನ್ಸ್​ ಮಾಡಿದ್ದಾರೆ. ಸದ್ಯ, ಈ ಡ್ಯಾನ್ಸ್​ ನೋಡಿದ ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ.

ಪತಿ ಜೈಲಿನಿಂದ ಬಂದ ಬೆನ್ನಲ್ಲೇ ಸಖತ್​ ಆಗಿ ಡ್ಯಾನ್ಸ್​ ಮಾಡಿದ ನಟಿ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ
Follow us on

ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಎದುರಾಗಿದ್ದ ಸಂಕಷ್ಟ ತಾತ್ಕಾಲಿಕವಾಗಿ ದೂರವಾಗಿದೆ. ಪತಿ ರಾಜ್​ ಕುಂದ್ರಾ ಎರಡು ತಿಂಗಳು ಜೈಲು ವಾಸ ಮುಗಿಸಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಬಗ್ಗೆ ಶಿಲ್ಪಾ ಶೆಟ್ಟಿ ನೇರವಾಗಿ ಏನನ್ನೂ ಮಾತನಾಡಿಲ್ಲ. ಹೀಗಿರುವಾಗಲೆ ಶಿಲ್ಪಾ ಮಸ್ತ್​ ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ ನೋಡಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ.

ಶ್ರೀಲಂಕಾದ ‘ಮನಿಕೆ ಮಾಗೆ ಹಿತೆ..’ ಹಾಡು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದೆ. ಇನ್​ಸ್ಟ್ರಾಗ್ರಾಮ್​ ರೀಲ್ಸ್​ನಲ್ಲಿ ಈ ಹಾಡು ರಾರಾಜಿಸುತ್ತಿದೆ. ಈ ಹಾಡು ಶಿಲ್ಪಾ ಶೆಟ್ಟಿಗೂ ಇಷ್ಟವಾಗಿದೆ. ಸೂಪರ್​ ಡ್ಯಾನ್ಸರ್​ ಚಾಪ್ಟರ್​ 4ನ ಸೆಟ್​​ನಲ್ಲಿ ಶಿಲ್ಪಾ ಈ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಸದ್ಯ, ಈ ಹಾಡು ಸಾಕಷ್ಟು ವೈರಲ್​ ಆಗುತ್ತಿದೆ.

ಪಿಂಕ್​ ಲೆಹಂಗಾ ತೊಟ್ಟಿದ್ದಾರೆ ಶಿಲ್ಪಾ. ಅವರ ಜತೆಗೆ ಗೀತಾ ಕೂಡ ಡ್ಯಾನ್ಸ್​ ಮಾಡಿದ್ದಾರೆ. ಸದ್ಯ, ಈ ಡ್ಯಾನ್ಸ್​ ನೋಡಿದ ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಪ್ರೊಫೈಲ್​ನಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಟೈಗರ್​ ಶ್ರಾಫ್​ ಹಾಗೂ ಮಾಧುರಿ ದೀಕ್ಷಿತ್​ ಕೂಡ ಈ ಹಾಡಿಗೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು.

ಪತಿ ರಾಜ್​ ಕುಂದ್ರಾ ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಶಿಲ್ಪಾ ಶೆಟ್ಟಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತ ಆಗುವಂತಹ ಕೆಲವು ಸಾಲುಗಳನ್ನು ಅವರು ಹಂಚಿಕೊಂಡಿದ್ದಾರೆ. ‘ನಿಮ್ಮನ್ನು ಕೆಳಗೆ ಬೀಳಿಸುವಂತಹ ಪರಿಸ್ಥಿತಿ ಸದಾ ಎದುರಾಗುತ್ತದೆ. ಇಂಥ ಸಂದರ್ಭದಲ್ಲಿ 7 ಸಲ ಬಿದ್ದರೂ ಕೂಡ, 8ನೇ ಸಲ ಎದ್ದು ನಿಲ್ಲುವಷ್ಟು ಶಕ್ತಿಯನ್ನು ತಂದುಕೊಳ್ಳಿ. ಕಷ್ಟದ ಪರಿಸ್ಥಿತಿಯಲ್ಲಿ ಎದ್ದು ನಿಲ್ಲಲು ಹೆಚ್ಚು ಬಲ, ಇಚ್ಛಾಶಕ್ತಿ ಮತ್ತು ಧೈರ್ಯ ಬೇಕು’ ಎಂದು ಶಿಲ್ಪಾ ಶೆಟ್ಟಿ ಪೋಸ್ಟ್​ ಮಾಡಿದ್ದಾರೆ.

ರಾಜ್​ ಕುಂದ್ರಾಗೆ ಜಾಮೀನು ಸಿಕ್ಕ ನಂತರವೂ ಶಿಲ್ಪಾ ಇದೇ ರೀತಿ ಸಾಲೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದರು. ‘ಕೆಟ್ಟ ಚಂಡಮಾರುತದ ನಂತರ ಒಳ್ಳೆಯ ಸಂಗತಿಗಳು ನಡೆಯುತ್ತವೆ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿಯೇ ಕಾಮನಬಿಲ್ಲು ಇರುವುದು’ ಎಂಬ ಸಾಲನ್ನು ಶಿಲ್ಪಾ ಶೆಟ್ಟಿ ಶೇರ್​ ಮಾಡಿಕೊಂಡಿದ್ದರು.

ಇದನ್ನೂ ಓದಿ: ಅಳುಮುಖ ಹೊತ್ತುಕೊಂಡು ಮನೆಗೆ ಬಂದ ರಾಜ್​ ಕುಂದ್ರಾ: ಶಿಲ್ಪಾ ಶೆಟ್ಟಿ ಪತಿಗೆ ಸದ್ಯಕ್ಕೆ ರಿಲೀಫ್​