ತುಳು ಭಾಷಿಗರಿಗೆ ಭಾಷಾ ಪ್ರೇಮ ಸ್ವಲ್ಪ ಹೆಚ್ಚೇ ಇದೆ. ಇದು ಆಗಾಗ ಸಾಬೀತು ಆಗುತ್ತಲೇ ಇರುತ್ತದೆ. ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ, ಬಾಲಿವುಡ್ನಲ್ಲಿ ಇರೋ ಕೆಲ ತುಳು ಸೆಲೆಬ್ರಿಟಿಗಳಿಗೂ ಈ ಭಾಷೆಯ ಮೇಲೆ ವಿಶೇಷ ಪ್ರೀತಿ ಇದೆ. ಇದಕ್ಕೆ ನಟಿ ಶಿಲ್ಪಾ ಶೆಟ್ಟಿ ಕೂಡ ಹೊರತಾಗಿಲ್ಲ. ಶಿಲ್ಪಾ ಶೆಟ್ಟಿ ಅವರು ಈ ಮೊದಲು ರಿಯಾಲಿಟಿ ಶೋ ಒಂದರಲ್ಲಿ ತುಳು ಮಾತನಾಡಿದ್ದರು. ಈ ವಿಡಿಯೋನ ಕೆಲವರು ಈಗ ವೈರಲ್ ಮಾಡಿದ್ದಾರೆ.
ಶಿಲ್ಪಾ ಕೇವಲ ನಟಿ ಮಾತ್ರವಲ್ಲ. ಅವರು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರು ರಿಯಾಲಿಟಿ ಶೋನ ಜಡ್ಜ್ ಆಗಿದ್ದಾಗ ಅಲ್ಲಿಗೆ ನಂದಾ ಶೆಟ್ಟಿ ಎಂಬುವವರು ಬಂದಿದ್ದರು. ‘ನಿಮ್ಮ ಹೆಸರು ಏನು?’ ಎಂದು ಶಿಲ್ಪಾ ಶೆಟ್ಟಿ ಅವರು ಹಿಂದಿಯಲ್ಲಿ ಕೇಳಿದರು. ‘ನಂದಾ ಶೆಟ್ಟಿ’ ಎಂದರು ಅವರು. ಇದನ್ನು ಕೇಳಿ ಶಿಲ್ಪಾ ಶೆಟ್ಟಿ ಎಗ್ಸೈಟ್ ಆದರು. ಜೋರಾಗಿ ಶೆಟ್ಟಿ ಎಂದು ಕೂಗಿದರು.
ಆ ಬಳಿಕ ಸ್ವಲ್ಪ ಸೈಲೆಂಟ್ ಆದ ಶಿಲ್ಪಾ, ‘ಕಂಟ್ರೋಲ್ ಆಗಲೇ ಇಲ್ಲ’ ಎಂದರು. ‘ತುಳು ಬರ್ಪುಂಡಾ’ (ತುಳು ಬರುತ್ತದೆಯೇ) ಎಂದು ಕೇಳಿದರು. ಇದಕ್ಕೆ ಹೌದು, ಎಂದರು ನಂದಾ. ‘ಬರುತ್ತದೆ. ಹೇಗಿದ್ದೀರಿ’ ಎಂದು ತುಳುನಲ್ಲೇ ಕೇಳಿದರು ನಂದಾ. ಇದರಿಂದ ಶಿಲ್ಪಾ ಸಖತ್ ಖುಷಿಯಾದರು. ಈ ವಿಡಿಯೋ ವೈರಲ್ ಆಗಿದೆ.
ಈ ಮೊದಲು ಶಿಲ್ಪಾ ಶೆಟ್ಟಿ ಅವರು ಮಂಗಳೂರಿಗೆ ಬಂದಿದ್ದರು. ಮಕ್ಕಳ ಜೊತೆ ಆಗಮಿಸಿದ್ದ ಅವರು ದೈವ ಪೂಜೆಯಲ್ಲಿ ಭಾಗಿ ಆಗಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಶಿಲ್ಪಾ ಶೆಟ್ಟಿ ಅವರು ಕರ್ನಾಟಕದ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ಶಿಲ್ಪಾ ಶೆಟ್ಟಿ ಅವರು ಮೊದಲಿನಷ್ಟು ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರ ನಟನೆಯ ‘ಕೆಡಿ: ದಿ ಡೆವಿಲ್’ ಸಿನಿಮಾದಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ. ಈ ವರ್ಷವೇ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಸತ್ಯವತಿ ಅಗ್ನಿಹೋತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಈ ಸಿನಿಮಾದ ಹೀರೋ.
ಇದನ್ನೂ ಓದಿ: ಕೇವಲ ಹಣಕ್ಕಾಗಿ ರಾಜ್ ಕುಂದ್ರಾ ಜೊತೆ ಮದುವೆ ಆದ್ರಾ ಶಿಲ್ಪಾ ಶೆಟ್ಟಿ?
ಇದಲ್ಲದೆ, ಅವರು ವೆಬ್ ಸೀರಿಸ್ಗಳಲ್ಲೂ ನಟಿಸುತ್ತಿದ್ದಾರೆ. ಈ ವರ್ಷ ಅವರ ನಟನೆಯ ‘ಇಂಡಿಯನ್ ಪೊಲೀಸ್ ಫೋರ್ಸ್’ ಸೀರಿಸ್ ರಿಲೀಸ್ ಆಗಿದೆ. ತಾರಾ ಶೆಟ್ಟಿ ಹೆಸರಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.